ಕನ್ನಡ ನಾಡಲ್ಲಿ ಕನ್ನಡಕ್ಕೆ ಬೆಲೆ ಇಲ್ಲದಂತಾಗಿದ್ದು .

 

ಕನ್ನಡ ನಾಡಲ್ಲಿ ಕನ್ನಡಕ್ಕೆ ಬೆಲೆ ಇಲ್ಲದಂತಾಗಿದ್ದು, ಬೆಂಗಳೂರಿಬ ಪಬ್​ ಒಂದರಲ್ಲಿ ಕನ್ನಡ ಸಾಂಗ್​ ಹಾಕಿ ಎಂದು ಕೇಳಿದಕ್ಕೆ ಹಲ್ಲೆ ಮಾಡಲಾಗಿದೆ.ಕೋರಮಂಗಲ 80 ಫೀಟ್ ರಸ್ತೆಯಲ್ಲಿರು ಬದ್ಮಾಷ್ ಪಬ್​ನಲ್ಲಿ ತಡರಾತ್ರಿ 12.30ರ ಸುಮಾರಿಗೆ ಈ ಘಟನೆ ನಡೆದಿದ್ದು, ಕನ್ನಡ ಹಾಡು ಹಾಕಿ ಎಂದಿದ್ದಕ್ಕೆಯುವತಿ ಮೇಲೆ ಹಲ್ಲೆ ಮಾಡಿದ್ದಾನೆ. ಪಬ್ ಡಿಜೆ ಸಿದ್ಧಾರ್ಥ್@ಅಪೋಸಿಟ್​, ಸಮಿತಾ, ಆಕೆಯ ಸಹೋದರ ನಂದಕಿಶೋರ್​ ಮೇಲೆ ಹಲ್ಲೆ ನಡೆಸಿದ್ದಾನೆ.ಸಮಿತಾ ನಿನ್ನೆ ರಾತ್ರಿ ಬರ್ತ್​ ಡೇ ಆಚರಿಸಲು ಪಬ್​ಗೆ 15 ಮಂದಿ ಸ್ನೇಹಿತರ ಜೊತೆ ರಾತ್ರಿ 9ರ ಸುಮಾರಿಗೆ ಹೋಗಿದ್ದಾರೆ.ಕನ್ನಡ ಹಾಡು ಹಾಕುವಂತೆ ಡಿಜೆ ಬಳಿ ನಾಲ್ಕೈದು ಬಾರಿ ಕೇಳಿದ್ದಾರೆ. ಡಿಜೆಗಳು ತೆಲುಗು, ತಮಿಳು, ಹಿಂದಿ ಹಾಡು ಹಾಕಿದ್ದು, ಕನ್ನಡ ಹಾಡು ಹಾಕಲ್ಲ.. ಬೇಕಿದ್ರೆ ಹೊರಗಡೆ ಹೋಗಿ ಎಂದು ಸಮಿತಾ, ನಂದಕಿಶೋರ್​ ಕಾಲರ್ ಹಿಡಿದು ಡಿಜೆ ಅವಾಜ್ ಹಾಕಿದ್ದಾನೆ. ಈ ವೇಳೆ ಸಮಿತಾ ಮತ್ತು ಡಿಜೆ ಟೀಮ್ ನಡುವೆ ವಾಗ್ವಾದ ನಡೆದಿದ್ದು, ತಳ್ಳಾಡಿ ಹಲ್ಲೆ ಮಾಡಿದ್ದಾರೆಂದು ಸಮಿತಾ ಸ್ನೇಹಿತರ ಆರೋಪ ಮಾಡುತ್ತಿದ್ದಾರೆ. ಕೋರಮಂಗಲ ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದ್ದು, ಕನ್ನಡ ಹಾಡು ಕೇಳಿದ್ದಕ್ಕೆ ಕನ್ನಡ ನೆಲದಲ್ಲೇ ಹಲ್ಲೆಯಅಗಿರುವುದು ನಿಜಕ್ಕೂ ವಿಪರ್ಯಾಸವೇ ಸರಿ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

Realme 9 Pro+ ಅಂತರ್ನಿರ್ಮಿತ ಹೃದಯ ಬಡಿತ ಸಂವೇದಕವನ್ನು ಪಡೆಯುವುದನ್ನು ದೃಢಪಡಿಸಿದೆ;

Sun Feb 6 , 2022
ವೆನಿಲ್ಲಾ Realme 9 Pro ಮತ್ತು Realme 9 Pro+ ಅನ್ನು ಒಳಗೊಂಡಿರುವ Realme 9 Pro ಸರಣಿಯು ಫೆಬ್ರವರಿ 16 ರಂದು ಭಾರತದಲ್ಲಿ ಬಿಡುಗಡೆಯಾಗಲಿದೆ. ಈಗ, ಕಂಪನಿಯ ಕಾರ್ಯನಿರ್ವಾಹಕರು ಮುಂಬರುವ Realme 9 Pro+ ಕುರಿತು ಕೆಲವು ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ. ಸರಣಿ' ಪ್ರಮುಖ ಮಾದರಿ. ಕಳೆದ ತಿಂಗಳು, Realme 9 Pro+ ಗಾಗಿ ಹಲವಾರು ನಿರ್ಣಾಯಕ ವಿವರಗಳು ಆನ್‌ಲೈನ್‌ನಲ್ಲಿ ಕಾಣಿಸಿಕೊಂಡವು, ಇದು MediaTek ಡೈಮೆನ್ಸಿಟಿ 920 SoC ನಿಂದ […]

Advertisement

Wordpress Social Share Plugin powered by Ultimatelysocial