ಕೊರಟಗೆರೆ ಪಟ್ಟಣದ ಹತ್ತಾರು ಸ್ಥಳದಲ್ಲಿ ಮಫ್ತಿಯಿಂದ ಕಾರ್ಯಚರಣೆ.

ಪುಂಡರಿಗೆ ಬಿಸಿ ಮುಟ್ಟಿಸಲು ಮಾರುವೇಷ ಹಾಕಿದ ಚೇತನ್ ಗೌಡಕೊರಟಗೆರೆ ಪಟ್ಟಣದ ಹತ್ತಾರು ಸ್ಥಳದಲ್ಲಿ ಮಫ್ತಿಯಿಂದ ಕಾರ್ಯಚರಣೆಪಿಎಸೈ ಚೇತನ್‌ಗೌಡ ಕಾರ್ಯಚರಣೆಗೆ ಬೆಚ್ಚಿಬಿದ್ದ ಪುಂಡರ ಗುಂಪುಬೈಕ್ ವಿಲೀಂಗ್ ಮತ್ತು ಅತಿವೇಗದ ಚಾಲನೆಗೆ ಪಿಎಸೈ ಕಡಿವಾಣಕಾಲೇಜು ವಿದ್ಯಾರ್ಥಿಗಳ ದೂರಿನ ಅನ್ವಯ ರಸ್ತೆಗೆ ಇಳಿದ ಪಿಎಸೈ ಪುಂಡರಿದ ಹತ್ತಾರು ದ್ವಿಚಕ್ರ ವಾಹನ ವಶಕ್ಕೆ ಪಡೆದ ಪೊಲೀಸರ ತಂಡ ಮೈದಾನ, ಕಾಲೇಜು, ಟೀಅಂಗಡಿ ಸಮೀಪ ಕಾರ್ಯಚರಣೆಮಫ್ತಿವೇಷ ಮತ್ತ ಮುಖಕ್ಕೆ ಮಾಸ್ಕ್ ಧರಿಸಿ ಪಿಲ್ಡಿಗಿಳಿದ ಪಿಎಸೈಪಿಎಸೈ ಚೇತನ್‌ಗೌಡ ಮಫ್ತಿ ಕಾರ್ಯಚರಣೆಗೆ ಅಪಾರ ಮೆಚ್ಚುಗೆ ಪುಂಡರಿದ ಪ್ರತಿನಿತ್ಯ ರಾಗಿಂಗ್ ಮತ್ತು ವಿನಾಕಾರಣ ಹಾರನ್ ಕಿರಿಕಿರಿ ಕಡಿವಾಣಕ್ಕೆ ಮಫ್ತಿಯಲ್ಲಿಯೇ ಪಿಲ್ಡಿಗಿಳಿದ ಕೊರಟಗೆರೆ ಪಿಎಸೈ ಚೇತನ್‌ಗೌಡ.. ಶಾಲಾ-ಕಾಲೇಜು ಪ್ರಾರಂಭಕ್ಕೂ ಮುನ್ನಾ ಮತ್ತು ಮುಕ್ತಾಯದ ನಂತರವು ಸಾವಿರಾರು ವಿದ್ಯಾರ್ಥಿಗಳ ನಡುವೆ ಕಾಣದಂತೆ ಕಾವಲು ಕಾಯುವ ರೀತಿಯಲ್ಲಿಯೇ ಪೊಲೀಸರ ಕಾರ್ಯಚರಣೆ ನಡೆದಿದೆ.

ಕೊರಟಗೆರೆ ಪಟ್ಟಣದ ಸರಕಾರಿ ಬಸ್ ನಿಲ್ದಾಣ, ಸಂತೇಮೈದಾನ, ಬಾಲಕಿಯರ ಪ್ರೌಢಶಾಲೆ, ಪ್ರಥಮದರ್ಜೆ ಕಾಲೇಜು, ಸರಕಾರಿ ಪದವಿಪೂರ್ವ ಕಾಲೇಜು, ಖಾಸಗಿ ಬಸ್ ನಿಲ್ದಾಣ, ಟೀ ಅಂಗಡಿ ಮತ್ತು ಸಾರ್ವಜನಿಕ ಪ್ರದೇಶದಲ್ಲಿ ಕೆಲಸವೇ ಇಲ್ಲದೇ ವಿನಾಕಾರಣ ತಿರುಗಾಡುವ ಪುಂಡರಿಗೆ ಬಿಸಿಮುಟ್ಟಿಸುವ ಕೆಲಸವನ್ನು ಪಿಎಸೈ ಚೇತನ್‌ಗೌಡ ನೇತೃತ್ವರ ಪೊಲೀಸರ ತಂಡ ಮಾಡಿದೆ.

ದ್ವಿಚಕ್ರ ವಾಹನ ಸವಾರರು ರಸ್ತೆಯಲ್ಲಿ ಬೈಕ್ ವಿಲಿಂಗ್ ಮಾಡೋದು ವಿದ್ಯಾರ್ಥಿಗಳಿಗೆ ರಸ್ತೆ ಬೀಡದೇ ಅಡ್ಡಾದಿಡ್ಡಿ ವಾಹನ ಚಲಾಯಿಸುವುದು ಹೆಣ್ಣು ಮಕ್ಕಳನ್ನು ಹಿಂದೆಯಿದ ಚುಡಾಯಿಸುವ ಕೆಲಸ ಜೋರಾಗಿ ಹಾರನ್ ಹೊಡೆದು ಕಿರಿಕಿರಿ ಉಂಟು ಮಾಡೋದು ರಸ್ತೆಯ ಮಧ್ಯೆ ಕಾದು ಕುಳಿತು ಸಮಸ್ಯೆ ಸೃಷ್ಟಿಸೋದು ಸೇರಿದಂತೆ ಹತ್ತಾರು ದೂರುಗಳು ಪೊಲೀಸರ ಗಮನಕ್ಕೆ ಬಂದಾಕ್ಷಣವೇ ಪೀಲ್ಡಿಗಿಳಿದು ಕಾರ್ಯಚರಣೆ ನಡೆಸಿದ್ದಾರೆ.

ಕಾಲೇಜು ಸಮಯದಲ್ಲಿ ಅತಿವೇಗದ ಚಾಲನೆ ಮತ್ತು ವಿನಾಕಾರಣ ತಿರುಗಾಡುವ ದ್ವಿಚಕ್ರವಾಹನ, ಆಟೋ ಮತ್ತು ಕಾರುಗಳ ಪೊಟೋ ಸಮೇತ ಎರಡು ದಿನದ ಮುಂಚೆಯೇ ಕೊರಟಗೆರೆ ಪೊಲೀಸರು ಪತ್ತೇ ಹಚ್ಚಿದ್ದಾರೆ. ಪೊಲೀಸರು ಪತ್ತೇಹಚ್ಚಿದ ವಾಹನ ಮತ್ತೇ ವಿನಾಕಾರಣ ರಸ್ತೆಗಿಳಿದ ಮರುಕ್ಷಣವೇ ವಾಹನವನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿ ಪುಂಡ ಯುವಕರಿಗೆ ಖಡಕ್ ಸಂದೇಶವನ್ನು ರವಾನಿಸಿದ್ದಾರೆ.

ಶಾಲಾ-ಕಾಲೇಜು ಆವರಣ, ಟೀಅಂಗಡಿ, ಚಿಲ್ಲರೇ ಅಂಗಡಿ, ಹೊಟೇಲ್‌ನ ಮುಂದೆ ಕಾರಣವೇ ಇಲ್ಲದೇ ಕಾರು, ಆಟೋ ಮತ್ತು ದ್ವಿಚಕ್ರ ವಾಹನ ನಿಲ್ಲಿಸಬಾದ್ರು. ಕಾಲೇಜು ಆಡಳಿತ ಮಂಡಳಿ ಮತ್ತು ಪೋಷಕರು ತಮ್ಮ ಮಕ್ಕಳ ಬಗ್ಗೆ ಜಾಗೃತಿ ವಹಿಸಬೇಕಿದೆ. ವಿದ್ಯಾರ್ಥಿಗಳಿಗೆ ಏನೇ ಸಮಸ್ಯೆ ಆದ್ರು ತಕ್ಷಣ ಪೊಲೀಸರ ಗಮನಕ್ಕೆ ತರಬಹುದಾಗಿದೆ ಎಂದು ಕೊರಟಗೆರೆ ಪಿಎಸೈ ಚೇತನ್‌ಗೌಡ ಜನರಲ್ಲಿ ಮನವಿ ಮಾಡಿದ ಬೇನ್ನಲ್ಲೆ ಸಾರ್ವಜನಿಕ ವಲಯದಲ್ಲಿ ಜನಸ್ನೇಹಿ ಪೊಲೀಸರ ಕಾರ್ಯಚರಣೆಯ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಭಾರತದ ಉದ್ಯೋಗಿಗಳಿಗೆ ಶೇ.15ರಿಂದ 30ರಷ್ಟು ವೇತನ ಏರಿಕೆ.

Wed Jan 18 , 2023
  ನವದೆಹಲಿ: ಭಾರತೀಯ ನೌಕರ ವರ್ಗಕ್ಕೆ ಇದೊಂದು ಗುಡ್ ನ್ಯೂಸ್. ಆರ್ಥಿಕ ಹಿಂಜರಿತದ ಭೀತಿಯ ನಡುವೆಯೂ ಪ್ರಸಕ್ತ ಸಾಲಿನಲ್ಲಿ ಭಾರತದಲ್ಲಿ ಪ್ರತಿಭಾನ್ವಿತ ನೌಕರರು ಶೇ.15ರಿಂದ 30ರವರೆಗೆ ವೇತನ ಹೆಚ್ಚಳವನ್ನು ಪಡೆಯಲಿದ್ದಾರೆ ಎಂಬ ಸಂಗತಿ ಸಮೀಕ್ಷೆಯೊಂದರಿಂದ ಗೊತ್ತಾಗಿದೆ. ಕೋರ್ನ್ ಫೆರಿ ಎಂಬ ಸಲಹಾ ಸಂಸ್ಥೆಯು ಈ ಕುರಿತು ಸಮೀಕ್ಷೆ ನಡೆಸಿದ್ದು, ಏಷ್ಯಾದಲ್ಲೇ ಭಾರತದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವೇತನ ಹೆಚ್ಚಳವಾಗುವ ಸಾಧ್ಯತೆಗಳಿವೆ. ಕಳೆದ ವರ್ಷ ಸರಾಸರಿ ಶೇ.9.4 ರಷ್ಟು ಏರಿಕೆ ಕಂಡಿದ್ದ ಭಾರತದಲ್ಲಿ […]

Advertisement

Wordpress Social Share Plugin powered by Ultimatelysocial