ಕಾಡು ಜೇನು ಹೆಚ್ಚು ಆರೋಗ್ಯಕರ ಏಕೆ?

ನೀವು ಕಾಡು ಜೇನು ತುಪ್ಪ ಟೇಸ್ಟ್ ಮಾಡಿದ್ದೀರಾ? ಈ ಜೇನು ತುಪ್ಪ ಸಾಮಾನ್ಯವಾಗಿ ಸಿಗುವ ಜೇನು ತುಪ್ಪಗಿಂತ ಹೇಗೆ ಭಿನ್ನವಾಗಿರುತ್ತದೆ ಎಂಬುವುದು ಗೊತ್ತೇ? ಕಾಡು ಜೇನು ಇತರ ಜೇನುಗಿಂತ ಏಕೆ ಹೆಚ್ಚು ಆರೋಗ್ಯಕರ? ಎಂಬೆಲ್ಲಾ ಮಾಹಿತಿ ತಿಳಿಯೋಣ:ಕಾಡು ಜೇನು ಹಾಗೂ ಸಾಮಾನ್ಯವಾಗಿ ಸಿಗುವ ಎರಡೂ ಜೇನನ್ನು ಜೇನು ಹುಳಗಳೇ ತಯಾರಿಸುವುದು. ಆದರೆ ಸಾಮಾನ್ಯವಾಗಿ ಸಿಗುವ ಜೇನಿಗಿಂತ ಕಾಡುಜೇನು ತುಂಬಾನೇ ಆರೋಗ್ಯಕರ. ಏಕೆಂದರೆ ಕಾಡುಜೇನಿನಲ್ಲಿ ಪೋಷಕಾಶಗಳು ಅಧಿಕ ಇರುತ್ತವೆ. ಏಕೆಂದರೆ ಕಾಡು ಜೇನು ನೊಣಗಳಿಗೆ ಕಾಡಿನಲ್ಲಿ ಹಲವಾರು ಔಷಧೀಯ ಗಿಡಗಳ ಹೂವಿನ ರಸ ಸಿಗುತ್ತದೆ, ಅವುಗಳನ್ನು ಸಂಗ್ರಹಿಸಿ ಜೇನು ತಯಾರಿಸುತ್ತದೆ, ಹೀಗಾಗಿ ಕಾಡಿನ ಜೇನಿನಲ್ಲಿ ಪೋಷಕಾಂಶಗಳು ತುಂಬಾನೇ ಅಧಿಕವಾಗಿರುತ್ತದೆ.ಕಾಡುಜೇನಿನಲ್ಲಿ ಸಾಮಾನ್ಯವಾಗಿ 22 ಅಮೈನೋ ಆಮ್ಲ, 31 ಭಿನ್ನ ಖನಿಜಾಂಶಗಳು ಹಾಗೂ ಅನೇಕ ಬಗೆಯ ವಿಟಮಿನ್ಸ್ ಇರುತ್ತವೆ. ಅಲ್ಲದೆ ಕಾಡು ಜೇನಿನಲ್ಲಿ ಮಾತ್ರ 30 ಬಗೆಯ ಬಯೋಆಕ್ಟಿವ್ ಸಸ್ಯಗಳ ಅಂಶಗಳಿರುತ್ತದೆ. ಅಲ್ಲದೆ ಇದರಲ್ಲಿ ಪಾಲಿಫೀನೋಲ್ಸ್ ಎಂಬ antioxidants ಇರುತ್ತದೆ. ಈ ಆಯಂಟಿಆಕ್ಸಿಡೆಂಟ್ ಹೃದಯಾಘಾತ, ಕ್ಯಾನ್ಸರ್ ಈ ಬಗೆಯ ಕಾಯಿಲೆ ತಡೆಗಟ್ಟುವ ಔಷಧೀಯ ಗುಣವನ್ನು ಹೊಂದಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬಾಳೆಹೂವಿನಲ್ಲಿರುವ ʼಔಷಧೀಯʼ ಗುಣ ತಿಳಿದ್ರೆ ಅಚ್ಚರಿಪಡ್ತೀರಾ!

Fri Dec 30 , 2022
ಮಹಿಳೆಯರ ಸೌಂದರ್ಯ ಹೆಚ್ಚಿಸುವ ಹೂವು, ಆರೋಗ್ಯಕ್ಕೂ ಒಳ್ಳೆಯದು. ಉತ್ತಮ ಆರೋಗ್ಯಕ್ಕೆ ಈ ಹೂವುಗಳನ್ನು ತಿನ್ನಿ…ಆರೋಗ್ಯದಿಂದ ಇರುವುದನ್ನು ರೂಢಿಸಿಕೊಳ್ಳಿ. ಅಷ್ಟಕ್ಕೂ ಯಾವುದು ಈ ಹೂವು ಅಂತೀರಾ? ಬಾಳೆ ಹೂವು.ಬಾಳೆ ಹೂವಿನಲ್ಲಿ ಪ್ರೋಟೀನ್, ಫಾಸ್ಫರಸ್, ಐರನ್, ಕಾಪರ್, ಪೊಟಾಷಿಯಮ್, ಕ್ಯಾಲ್ಶಿಯಮ್, ಕಾರ್ಬೋಹೈಡ್ರೇಟ್ ಗಳಿವೆ.ಇದರ ಸಾಂಬಾರು ಮಾಡಿಕೊಂಡು ತಿಂದರೆ ಸಾಕಷ್ಟು ಪ್ರಯೋಜನಗಳಿವೆ. ಬಾಳೆ ಹೂವಿನಲ್ಲಿರುವ ಇಥನಾಲ್ ಅಂಶ ಗಾಯವನ್ನು ಬೇಗ ಗುಣವಾಗುವಂತೆ ಮಾಡುತ್ತದೆ. ಹಾಗೂ ಇನ್ಫೆಕ್ಷನ್ ಕಡಿಮೆ ಮಾಡಲು ಸಹಾಯಕ. ಬಾಳೆ ಹೂವಿನಲ್ಲಿರುವ ಆಂಟಿ […]

Advertisement

Wordpress Social Share Plugin powered by Ultimatelysocial