ಕಾಂಗ್ರೆಸ್ ಭವಿಷ್ಯ ಯಡಿಯೂರಪ್ಪ ನಡೆ ಮೇಲೆ ಅವಲಂಭಿಸಿದೆ!ಹೆಚ್ ಡಿ ಕೆ

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಮುಂದಿನ ನಡೆ ಮೇಲೆ ಕಾಂಗ್ರೆಸ್ ನಾಯಕರ ಪರಿಸ್ಥಿತಿ ಅವಲಂಬಿತವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ( Ex CM HD Kumaraswamy ) ಕಾಂಗ್ರೆಸ್ ನಾಯಕರಿಗೆ  ತಿರುಗೇಟು ನೀಡಿದ್ದಾರೆ.

ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಇಂದು ನಡೆದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು ಅವರು, ಕಾಂಗ್ರೆಸ್ ನಾಯಕರ ಪರಿಸ್ಥಿತಿ ಏನಿದೆ ಎಂಬುದು ಗೊತ್ತಿದೆ. ಯಡಿಯೂರಪ್ಪ ಮುಂದೆ ಏನು ಮಾಡುತ್ತಾರೆ ಎಂಬುದನನ್ನು ನೋಡಿಕೊಂಡು ಹೀಗೆ ಮಾಡುತ್ತಿದ್ದಾರೆ. ಈ ಹಿಂದೆ ಯಡಿಯೂರಪ್ಪನವರು ಬೇರೆ ಪಕ್ಷ ಕಟ್ಟಿದ್ದ ದಿನದ ಲೆಕ್ಕಾಚಾರವನ್ನು ಕಾಂಗ್ರೆಸ್ ನಾಯಕರು ಹಾಕಿದ್ದಾರೆ. ಪತ್ರಿಕೆಯೊಂದರಲ್ಲಿ ಬಂದಿರುವ ಆಂತರಿಕ ವರದಿ ನೋಡಿದ್ದೇನೆ. ಆ ವರದಿಯಲ್ಲಿ ಮೂರು ರೀತಿಯ ಪ್ರತಿಕ್ರಿಯೆ ಇದೆ. ಕಾಂಗ್ರೆಸ್ ನಾಯಕರ ಪರಿಸ್ಥತಿ ಏನಿದೆ ಎಂಬುದು ಗೊತ್ತಿದೆ ಎಂದರು.

ನಾವು ಒಂದು ಸ್ಥಾನ ಇಲ್ಲದೇ ಇದ್ದಾಗಲೂ ನಾವು ಗೆದ್ದಿದ್ದೇವೆ. ವಿಧಾನ ಪರಿಷತ್ ಚುನಾವಣೆ ಬೇರೆ, ವಿಧಾನಸಭೆ ಚುನಾವಣೆ ಬೇರೆ. ಅವರು ಆಂತರಿಕ ಸಮೀಕ್ಷೆ ಮಾಡಲಿ. ನಮಗೆ ಯಾವುದೇ ಆತಂಕ ಇಲ್ಲ. ನಾವು ನಮ್ಮ ಗುರಿ ಮುಟ್ಟುತ್ತೇವೆ. ಕಾಂಗ್ರೆಸ್ ನವರ ಆಂತರಿಕ ಸಮೀಕ್ಷೆ ಬಗ್ಗೆ ಮಾತನಾಡಲ್ಲ. ಅವರ ಒಳ ಒಪ್ಪಂದ ರಾಜ್ಯಸಭೆಯಲ್ಲಿ ಆಯ್ತು. ಬಿ ಟೀಂ ಅನ್ನುವುದು ಯಾರು ಅಂತ ಗೊತ್ತಾಗಿದೆ ಎಂದು ಅವರು ವಾಗ್ದಾಳಿ ನಡೆಸಿದರು.

ಸರ್ವೇ ಮೂಲಕ ಸತ್ಯ ತಿರುಚುವ ಯತ್ನ

ಬಿಜೆಪಿ ಹಾಗೂ ಕಾಂಗ್ರೆಸ್ ಅಧಿಕಾರ ಹಿಡಿಯಬೇಕೆಂದು ದೊಡ್ಡ ದೊಡ್ಡ ಸರ್ವೇ ಮಾಡುವ ಕಂಪನಿ ಜೊತೆ ಸೇರಿ ತಿರುಚುವ ಕೆಲಸ ಮಾಡುತ್ತಿವೆ. ರಾಷ್ಟ್ರೀಯ ಪಕ್ಷಗಳ ಪರಿಸ್ಥಿತಿ ಬಗ್ಗೆ ಮಾಧ್ಯಮಗಳೇ ಹೇಳುತ್ತಿವೆ. ನಮಗೆ ಯಾವುದೇ ಆತಂಕ ಇಲ್ಲ. ನಮ್ಮ ಗುರಿ‌ಮುಟ್ಟಲೇ ಬೇಕು ಎಂಬ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ. ರಾಜ್ಯದ ಜನತೆ ವಿಶ್ವಾಸದಲ್ಲಿ ಸ್ವತಂತ್ರ ಸರ್ಕಾರ ತರಬೇಕೆಂದು ನಾವು ಹೊರಟಿದ್ದೇವೆ ಎಂದು ಅವರು ಹೇಳಿದರು.

ಜೆಡಿಎಸ್ ಶಾಸಕರು ಸಿದ್ದರಾಮಯ್ಯ ಅವರ ಸಂಪರ್ಕದಲ್ಲಿ ಇದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಹೆಚ್ ಡಿಕೆ, ಕೆಲವರು ಅವರ ವಿಶ್ವಾಸದಲ್ಲಿ ಇರಬಹುದು. ಆದರೆ ಅವರಲ್ಲೇ ಗೊಂದಲ ಇದೆ. ಆಷಾಢ ಮಾಸದ ನಂತರ ಅದು ಹೊರ ಬರುತ್ತದೆ ಎಂದು ಅವರು ಪ್ರತಿಪಾದಿಸಿದರು.

ದೇಶದಲ್ಲಿ ಮುಳುಗಿ‌ಹೋದ ಹಡಗಿನಲ್ಲಿ ಹೋದರೆ ಏನು ಪ್ರಯೋಜನ? ಕಾಂಗ್ರೆಸ್ ಎಲ್ಲ ಕಡೆ ಮುಳುಗುತ್ತಿದೆ. ವಾಸ್ತವಾಂಶ ಹೇಳುತ್ತಿದ್ದೇನೆ. 123 ರ ನಮ್ಮ ಗುರಿಯಲ್ಲಿ ಹಲವಾರು ಸಮಸ್ಯೆ, ಅಡೆತಡೆಗಳಿವೆ. ಇಲ್ಲ ಅಂತ ಹೇಳಲ್ಲ. ನಮ್ಮ ಗುರಿ ತಲುಪುವ ಕಡೆ ಗಮನಹರಿಸುತ್ತೇವೆ ಎಂದರು.

ಎಸಿಬಿ ಮೇಲೆ ಹೆಚ್ ಡಿಕೆ ಕಿಡಿ

ಎಸಿಬಿ ಗೆ ಕೋರ್ಟ್ ಚಾಟಿ ಬೀಸಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ ಅವರು, ಈ ರಾಜ್ಯದಲ್ಲಿ ಲೋಕಾಯುಕ್ತ, ಎಸಿಬಿಯಿಂದಾಗಲಿ ನಡೆದ ದಾಳಿ ಪ್ರಯೋಜನವಿಲ್ಲ. ಸಾವಿರಾರು ದಾಳಿ ಆಗಿದೆ. ಎಷ್ಟು ಜನರ ಮೇಲೆ ಕ್ರಮ ಆಗಿದೆ ಹೇಳಿ. ರಾಜ್ಯದ ಗೌರವಾನ್ವಿತ ನ್ಯಾಯಾಲಯದಲ್ಲಿ ಎಸಿಬಿ ಮುಖ್ಯಸ್ಥರೇ ಭ್ರಷ್ಟರು ಅಂತ ಹೇಳಿದ್ದಾರೆ. ಇದಕ್ಕಿಂತ ನಾಚಿಕೆಪಡುವ ಪ್ರಸಂಗ ಮತ್ತೊಂದಿಲ್ಲ ಎಂದರು.

ಎಡಿಜಿಪಿ ಅಧಿಕಾರಿಯೇ ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ ಎಂದು ಹೇಳಿದೆ. ಇದು ನಾಚಿಕೆಗೇಡಿನ ಸಂಗತಿ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ದಾಳಿ ವೇಳೆ ಕೆಜಿ, ರಾಶಿಗಟ್ಟಲೆ ಚಿನ್ನ ಬೆಳ್ಳಿ ವಶಪಡಿಸಿಕೊಂಡಿರುವುದನ್ನು ತೋರಿಸಲಾಗುತ್ತದೆ. ಆದರೆ, ಭ್ರಷ್ಟ ಅಧಿಕಾರಿಗಳ ಮೇಲೆ ಯಾವುದಾದರೂ ಒಂದು ಕ್ರಮ ಆಗಿದೆಯಾ?. ರಾಜಕಾರಣಿಗಳ ಮೇಲೆ ಅಥವಾ ಚಿಕ್ಕ ಪುಟ್ಟ ನೌಕರರು ಸಿಗುತ್ತಾರೆ. ವಿಧಾನಸಭಾ ಕಲಾಪದಲ್ಲಿ ಚರ್ಚೆ ಮಾಡಿದೆ. ಮಂಡ್ಯ, ರಾಮನಗರ ಪ್ರಾಧಿಕಾರದಲ್ಲಿ ಕೋಟಿಗಟ್ಟಲೆ ಅವ್ಯವಹಾರ ನಡೆದಿಯಲ್ಲಾ, ಒಂದು ರೂಪಾಯಿಯಾದ್ರೂ ವಾಪಸ್ ಬಂತಾ? ಸರ್ಕಾರಿ‌ ಭೂಮಿ ವಾಪಸ್ ಬಂತಾ? ಇದು ಈ ರಾಜ್ಯದ ವ್ಯವಸ್ಥೆ. ಇದೇನು ಆಶ್ವರ್ಯ ತರುವ ವಿಚಾರ ಅಲ್ಲ, ನಿರಂತರವಾಗಿ ನಡೆದುಕೊಂಡು ಬರುತ್ತಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಸಿದ್ದರಾಮಯ್ಯಅವರು ಸಿಎಂ ಆದಾಗ ಒಬ್ಬ ಐಎಎಸ್ ಅಧಿಕಾರಿ ಮನೆ ಮೇಲೆ ದಾಳಿಯಾಗಿ 5 ಕೋಟಿ ವಶಪಡಿಸಿಕೊಳ್ಳಲಾಯಿತು. ಆ ಅಧಿಕಾರಿಯನ್ನು ಮನೆಗೆ ಕಳುಹಿಸಿದರಾ? ಕ್ರಮ ಕೈಗೊಳ್ಳುವ ಬದಲು ಉನ್ನತ ಹುದ್ದೆ ಕೊಟ್ಟರು. ಮುಂದಿನ ದಿನಗಳಲ್ಲಿ ಈ ಬಗ್ಗೆಯೂ ಜನತೆ ಮುಂದೆ ಇಡುತ್ತೇವೆ ಎಂದು ಹೇಳಿದರು ಅವರು.

ಆದರೆ ನಾನು ಲೋಕಾಯುಕ್ತ, ಎಸಿಬಿ ಮುಚ್ಚಿ ಎಂದು ಹೇಳಲ್ಲ. ಆದರೆ, ಪ್ರಾಮಾಣಿಕ ಅಧಿಕಾರಿಗಳು ಇರಬೇಕಷ್ಟೆ. ಯಾರ ಹಸ್ತಕ್ಷೇಪ ಇಲ್ಲದಂತೆ ಅಧಿಕಾರಿಗಳು ಕೆಲಸ ಮಾಡಬೇಕು ಎಂದು ಅವರು ಅಭಿಪ್ರಾಯಪಟ್ಟರು.

ಕೊಠಡಿಗೆ ಬೆಂಕಿ ಇಟ್ಟವರು ಈಗ ಉನ್ನತ ಹುದ್ದೆ

ಕೋಟ್ಯಂತರ ರೂ. ಅವ್ಯವಹಾರವನ್ನು ಮುಚ್ಚಿಹಾಕಲು ಕಾರ್ಪೊರೇಷನ್ ಕೊಠಡಿಗೆ ಬೆಂಕಿ ಇಟ್ಟದನ್ನು ಅನೇಕರು ಮರೆತಿದ್ದಾರೆ. ಆದರೆ ಬೆಂಕಿ ಇಟ್ಟ ಮಹಾನುಭಾವರು ಸರ್ಕಾರದ ಉನ್ನತ ಹುದ್ದೆಯಲ್ಲಿ ಇದ್ದಾರೆ ಎಂಬ ಅಂಶವನ್ನು ಮಾಜಿ ಮುಖ್ಯಮಂತ್ರಿಗಳು ಪ್ರಸ್ತಾಪ ಮಾಡಿದರು.

ಕಳೆದ ಮೂರು ವರ್ಷ ಬಿಜೆಪಿ ಆಡಳಿತ ಹೇಗಾಯಿತು ಎನ್ನುವುದು ಎಲ್ಲರೂ ಬಲ್ಲರು. ಬಿಬಿಎಂಪಿಗೆ ಆಡಳಿತಾಧಿಕಾರಿಯನ್ನು ನೇಮಿಸಿ ಬಿಜೆಪಿ ಹೇಗೆಲ್ಲಾ ಅಡಳಿತ ನಡೆಸಿತು ಎನ್ನುವುದು ಗೊತ್ತಿದೆ. ಕಳಪೆ ಕಾಮಗಾರಿ, ಕೆಲಸ ಮಾಡದೇ ಹಣ ಲಪಟಾಯಿಸಿರುವ ಬಗ್ಗೆ ಮಾಹಿತಿ, ಮಳೆಗಾಲದಲ್ಲಿ ಆಗುವ ಸಮಸ್ಯೆ ಬಗ್ಗೆ ಮಾತನಾಡುತ್ತಾರೆ. ಆದರೆ ಶಾಶ್ವತ ಪರಿಹಾರ ಇಲ್ಲ. ನಾನು ಸಿಎಂ ಆದಾಗ ಪುಟ್ಟೇನಹಳ್ಳಿ ಭಾಗದಲ್ಲಿ ಏನು ಕೆಲಸ ಮಾಡಿದೆ. ನಾನು ತೆಗೆದುಕೊಂಡ ನಿರ್ಧಾರ ಇಂದು ಎಂತಹ ಮಳೆ ಬಂದರು ಜೆಪಿ ನಗರದ ಜನ ಆರಾಮಾಗಿ ಇದ್ದಾರೆ. ಕೆರೆ ಒತ್ತುವರಿಯಿಂದ ಏನಾಗುತ್ತಿದೆ ಎಂದು ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://plಇay.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ನಮ್ಮ ನಿರ್ಧಾರ ಹಿಂದುತ್ವ & ಅಭಿವೃದ್ಧಿ ಕಾರ್ಯಗಳಿಗೆ ಬದ್ಧವಾಗಿದೆ : ಏಕನಾಥ್ ಶಿಂಧೆ

Thu Jun 30 , 2022
ಮುಂಬೈ : ನಾವು ತೆಗೆದುಕೊಂಡಿರುವ ನಿರ್ಧಾರವು ಬಾಳಾಸಾಹೇಬ್ ಅವರ ಹಿಂದುತ್ವಕ್ಕೆ ಮತ್ತು ನಮ್ಮ ಶಾಸಕರ ಕ್ಷೇತ್ರಗಳಲ್ಲಿನ ಅಭಿವೃದ್ಧಿ ಕಾರ್ಯಗಳಿಗೆ ಬದ್ಧವಾಗಿದೆ ಎಂದು ಮಹಾರಾಷ್ಟ್ರದ ಮುಂದಿನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿರುವ ಏಕನಾಥ್‌ ಶಿಂಧೆ ಹೇಳಿದರು. ರಾಜಭವನದಲ್ಲಿ ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಅವರನ್ನು ಭೇಟಿಯಾದ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಏಕನಾಥ ಶಿಂಧೆ, ‘ನಾವು ತೆಗೆದುಕೊಂಡಿರುವ ನಿರ್ಧಾರವು ಬಾಳಾಸಾಹೇಬ್ ಅವರ ಹಿಂದುತ್ವಕ್ಕೆ ಮತ್ತು ನಮ್ಮ ಶಾಸಕರ ಕ್ಷೇತ್ರಗಳಲ್ಲಿನ ಅಭಿವೃದ್ಧಿ ಕಾರ್ಯಗಳಿಗೆ ಬದ್ಧವಾಗಿದೆ. […]

Advertisement

Wordpress Social Share Plugin powered by Ultimatelysocial