ಕುರುಕ್ಷೇತ್ರದ ಯುದ್ಧದ ಫಲಿತಾಂಶದ ಬಗ್ಗೆ ಈ 7 ಜನರಿಗೆ ಮೊದಲೇ ತಿಳಿದಿತ್ತಂತೆ

ಭಾರತ ಸಂಸ್ಕೃತಿಗಳ ತವರು. ದೇಶದ ಐತಿಹ್ಯದಲ್ಲಿ ಕಲ್ಪನೆಗಳೂ ಬೆರೆತುಹೋಗಿ ಒಂದು ಸುಂದರ ಕಥೆಯಂತೆ ಕಾಣುತ್ತಿದೆ. ಆದ್ರಲ್ಲೂ ಹಿಂದೂ ಧರ್ಮದಲ್ಲಿ ಮಹಾಭಾರತ ಹಾಗೂ ರಾಮಾಯಣಕ್ಕೆ ಪಾವಿತ್ರತೆಯ ಸ್ಥಾನವನ್ನು ನೀಡಲಾಗಿದೆ. ಮಹಾಭಾರತ ಜೀವನದಲ್ಲಿ ಒಬ್ಬರು ಅಳವಡಿಸಿಕೊಳ್ಳಬೇಕಾದ ಹಲವು ಮಹತ್ವದ ವಿಷಯಗಳನ್ನು ಕಲಿಸಲಿದೆ..
ಹೀಗಾಗಿ ದೇಶದಲ್ಲಿ ಮಾತ್ರವಲ್ಲದೇ ವಿದೇಶದಲ್ಲೂ ಕೂಡ ನಮ್ಮ ಹಿಂದೂ ಧರ್ಮದ ಹೆಮ್ಮೆಯ ಗ್ರಂಥ ಮಹಾಭಾರತಕ್ಕೆ ಸಾಕಷ್ಟು ಪ್ರಾಧ್ಯಾನತೆ ನೀಡಲಾಗುತ್ತಿದೆ..
ಅಲ್ಲದೆ ಮಹಾಭಾರತದಲ್ಲಿ ಬರುವ ಅದರಲ್ಲಿ ಬರುವ ಪ್ರತಿಯೊಂದು ಪಾತ್ರವನ್ನು ದೇವರೆಂದೇ ಪರಿಗಣಿಸಲಾಗುತ್ತದೆ. ಈ ಎಲ್ಲಾ ಪಾತ್ರಗಳು ಕೂಡ ಊಹೆಗೂ ನಿಲುಕದ ಪಾತ್ರಗಳಾಗಿವೆ. ಅದರಲ್ಲೂ ಮಹಾಭಾರತದಲ್ಲಿ ಕಾಣುವ ಪಾತ್ರಗಳು ವಿಭಿನ್ನ ಹಾಗೂ ವಿಶೇಷ. ಮಹಾಭಾರತವು ನ್ಯಾಯ ಮತ್ತು ಅನ್ಯಾಯದ ನಡುವೆ ನಡೆದ ದೊಡ್ಡ ಯುದ್ಧವೆಂದೇ ಪರಿಗಣಿಸಲಾಗುತ್ತದೆ. ಜೊತೆಗೆ 18 ದಿನಗಳ ಕಾಲ ನಡೆದ ಕುರುಕ್ಷೇತ್ರ ಯುದ್ಧವನ್ನು ನ್ಯಾಯ ಹಾಗೂ ಅನ್ಯಾಯದ ನಡುವಿನ ಹೋರಾಟ ಎಂದು ಹೇಳಲಾಗುತ್ತದೆ. ವಿಶೇಷ ಅಂದರೆ ಇಂತಹ ಮಹಾಭಾರತ ಮೊದಲೇ ನಡೆಯುತ್ತದೆ ಎಂದು ಮಹಾಭಾರತ ಕಾಲದಲ್ಲಿ ಜೀವಿಸಿದ್ದ, ಅಲ್ಲಿ ಪಾತ್ರಧಾರಿಗಳಾಗಿದ್ದ 7 ಜನರಿಗೆ ಮೊದಲೇ ತಿಳಿದಿದ್ದಂತೆ.. ಹಾಗಿದ್ರೆ 7 ಜನರು ಯಾರು ಎಂಬ ಮಾಹಿತಿ ಇಲ್ಲಿದೆ.

18 ದಿನ ನಡೆದ ಯುದ್ಧದಲ್ಲಿ ಬದುಕುಳಿದ 18 ಮಹನೀಯರು:
ಕುರುವಂಶದ ಕೌರವರು ಮತ್ತು ಪಾಂಡವರ ನಡುವೆ 18 ದಿನಗಳ ಕಾಲ ನಡೆದ ಕುರುಕ್ಷೇತ್ರ ಯುದ್ಧದಲ್ಲಿ ಅಸಂಖ್ಯಾತ ಯೋಧರು ಭಾಗವಹಿಸಿದ್ದರು.. 18 ದಿನ ನಡೆದ ಮಹಾಭಾರತ ಯುದ್ಧದಲ್ಲಿ ಕೇವಲ ಹದಿನೆಂಟು ಮಂದಿ ದಿಗ್ಗಜರು ಮಾತ್ರ ಬದುಕಿ ಉಳಿದರು. ಇನ್ನೂ ಆಶ್ಚರ್ಯ ಅಂದ್ರೆ ಮಹಾಭಾರತ ಯುದ್ಧ ನಡೆಯುತ್ತದೆ ಹಾಗೂ ಅದರಲ್ಲಿ ಪಾಂಡವರು ಗೆಲುವು ಸಾಧಿಸಲಿದ್ದಾರೆ ಎಂದು ಯುದ್ಧಕ್ಕೆ ಮುಂಚೆ ಮಹಾಭಾರತ ಯುದ್ಧದಲ್ಲಿ ಭಾಗಿಯಾಗಿದ್ದ ಕೆಲವರಿಗೆ ತಿಳಿದಿತ್ತು.

1)ಶ್ರೀ ಕೃಷ್ಣ:

ಮಹಾಭಾರತದ ಸಂಪೂರ್ಣ ಸೂತ್ರದಾರಿ ಶ್ರೀಕೃಷ್ಣ ಪರಮಾತ್ಮ.. ಯುದ್ಧದ ಸಮಯದಲ್ಲಿ ಅರ್ಜುನನಿಗೆ ಭಗವದ್ಗೀತೆ ಬೋಧನೆ ಮಾಡಿ ಜೀವನದ ಹಲವು ಸಾರಗಳನ್ನು ತಿಳಿಸಿದ ಶ್ರೀಕೃಷ್ಣನಿಗೆ, ಮಹಾಭಾರತ ಯುದ್ಧ ನಡೆಯುವುದು ಮತ್ತು ಅದರಲ್ಲಿ ಪಾಂಡವರು ಜಯಶಾಲಿಯಾಗಲಿದ್ದಾರೆ ಎಂಬುದು ಮೊದಲೇ ತಿಳಿದಿತ್ತು. ಅಲ್ಲದೇ ಯುದ್ಧ ಆರಂಭವಾಗುವ ಕೆಲವು ದಿನಗಳ ಮುಂಚೆ ಶ್ರೀಕೃಷ್ಣ ದ್ರೌಪದಿಗೆ ಫಲಿತಾಂಶದ ಬಗ್ಗೆ ಮತ್ತು ಅವಳ ಐದು ಮಕ್ಕಳು ಸಾವನ್ನಪ್ಪುವ ಬಗ್ಗೆ ಹೇಳಿದ್ದ ಎನ್ನಲಾಗಿದೆ.

2) ಭೀಷ್ಮ:

 ಗಂಗಾಪುತ್ರ ಭೀಷ್ಮ ಕುರುಕ್ಷೇತ್ರ ಯುದ್ಧದಲ್ಲಿ ಕೌರವರ ಪರ ನಿಂತು ಹೋರಾಟ ಮಾಡಿದರು, ಕೊನೆಗೆ ಯುದ್ಧದಲ್ಲಿ ಪಾಂಡವರು ಗೆಲ್ಲುವುದು ಎಂಬುದು ಅವರಿಗೆ ತಿಳಿದಿತ್ತು.. ಆದರೆ ವಿಧಿ ಇಲ್ಲದೆ ಅವರು ಕೌರವರ ಪರ ನಿಂತು ಪಾಂಡವರ ವಿರುದ್ಧ ಯುದ್ಧ ಮಾಡಬೇಕಾಯಿತು.

3) ವೇದವ್ಯಾಸ:

 ಮಹಾಭಾರತ ಬೀಸಿದ ವೇದವ್ಯಾಸರಿಗೆ ಮಹಾಭಾರತದ ಯುದ್ಧ ಹಾಗೂ ಕುರುಕ್ಷೇತ್ರ ಯುದ್ಧದ ಬಗ್ಗೆ ಮೊದಲೇ ತಿಳಿದಿತ್ತು. ಅಲ್ಲದೆ ಯುದ್ಧದ ಬಗ್ಗೆ ದೃತರಾಷ್ಟ್ರನಿಗೆ ಹಲವು ಭಾರಿ ಯುದ್ಧದ ಬಗ್ಗೆ ವಿವರ ನೀಡಿದರು. ಆದರೆ ವೇದವ್ಯಾಸರ ಮಾತು ತಿಳಿಯದೆ ಯುದ್ಧಕ್ಕೆ ಮುಂದಾಗಿ ಕುರುಕುಲದ ನಾಶವಾಯಿತು.

4)ಸಹದೇವ:

 ಪಾಂಡವರಲ್ಲಿ ಕೊನೆಯವನಾದ ಸಹದೇವನಿಗೆ ತ್ರಿಕಾಲಜ್ಞಾನ ಇತ್ತು. ಪಾಂಡು ಮಹಾರಾಜಾ ಸತ್ತ ವೇಳೆ ಪಾಂಡುವಿನ ತಲೆಯ ಮೂರು ಭಾಗಗಳನ್ನು ಸಹದೇವ ತಿಂದಿದ್ದರಿಂದ ಆತಾ ತ್ರಿಕಾಲದರ್ಶಿಯಾಗಿ ಇದ್ದನು. ಆದರೆ ಮಹಾಭಾರತ ಯುದ್ಧ ಸಂಭವಿಸಲಿದೆ ಎಂದು ಯಾರಿಗಾದ್ರೂ ಹೇಳಿದ್ರೆ ಸಾವು ಸಂಭವಿಸಲಿ ಎಂದು ಶ್ರೀಕೃಷ್ಣ ಶಾಪ ನೀಡಿದ್ದ. ಹೀಗಾಗಿಯೇ ಮಹಾಭಾರತ ಯುದ್ಧ ನಡೆದು ಅದರಲ್ಲಿ ಪಾಂಡವರು ಗೆಲುವು ಸಾಧಿಸಲಿದ್ದಾರೆ ಎಂದು ತಿಳಿದಿದ್ದರೂ ಸಹ ಸಹದೇವ ಇದರ ಬಗ್ಗೆ ಮಾತನಾಡಿರಲಿಲ್ಲ..

5)​ಸಂಜಯ:

 ದೃತರಾಷ್ಟ್ರನ ಸಾರಥಿಯಾದ ಸಂಜೆಯ ಶ್ರೀಕೃಷ್ಣನ ಪರಮಭಕ್ತ.. ಸಂಜಯನಿಗೆ ಮಹರ್ಷಿ ವೇದವ್ಯಾಸರು ದಿವ್ಯದರ್ಶನ ನೀಡಿದ್ದರಿಂದ ಆತನು ಅರಮನೆಯ ಅಂಗಳದಲ್ಲಿಯೇ ಕುರಿತು, ಮಹಾಭಾರತ ಯುದ್ಧದ ಬಗ್ಗೆ ಸಂಪೂರ್ಣ ತಿಳಿದುಕೊಂಡಿದ್ದನ್ನು..

6) ದ್ರೋಣಾಚಾರ್ಯರು:

ದ್ರೋಣಾಚಾರ್ಯರು ಕಮ್ ರವರು ಹಾಗೂ ಪಾಂಡವರಿಗೂ ಗುರುಗಳು.. ಶ್ರೀಕೃಷ್ಣ ಎಲ್ಲಿರುತ್ತಾರೋ ಅಲ್ಲಿ ವಿಜಯ ಇರುತ್ತದೆ ಎಂದು ಅರಿತಿದ್ದ ಗುರು ದ್ರೋಣಾಚಾರ್ಯರು ದಿವ್ಯ ದೃಷ್ಟಿ ಹೊಂದಿದ್ದರು.ಇದರ ಮೂಲಕವೇ ಪಾಂಡವರು ಗೆಲುವು ಸಾಧಿಸುವ ಬಗ್ಗೆ ಅವರು ಮುಂಚೆಯೇ ಕಳೆದುಕೊಂಡಿದ್ದರು.

7)​ಕೃಪಾಚಾರ್ಯ:

ಕೃಪಾಚಾರ್ಯರು ಯುದ್ಧದ ಫಲಿತಾಂಶವನ್ನು ಸಹ ನಿರೀಕ್ಷಿಸಿದ್ದರು ಎಂದು ಹೇಳಲಾಗುತ್ತದೆ. ಅವರು ಬಹುಶಃ ದೈವಿಕ ದರ್ಶನವನ್ನು ಹೊಂದಿದ್ದರು. ಏಕೆಂದರೆ ದಿವ್ಯದೃಷ್ಟಿ ಹೊಂದಿದವರು ಮಾತ್ರ ಶ್ರೀಕೃಷ್ಣನ ವಿಶ್ವರೂಪವನ್ನು ನೋಡಬಲ್ಲರು. ಕೃಪಾಚಾರ್ಯರು ಶ್ರೀ ಕೃಷ್ಣನ ವಿಶ್ವರೂಪವನ್ನೂ ನೋಡಿದ್ದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ರಾಮು ಬ್ಯಾನರ್‌ನಲ್ಲಿ ಹೊಸ ಸಿನಿಮಾ 'ಸಿಂಹ': ಮಾಲಾಶ್ರೀಗೆ ಶಿವಣ್ಣ ಕೊಟ್ಟ ಮಾತೇನು?

Wed Dec 29 , 2021
ಕೋಟಿ ನಿರ್ಮಾಪಕ ರಾಮು ಅಗಲಿದ ಬಳಿಕ ಇದೇ ಮೊದಲ ಬಾರಿಗೆ ಮಾಲಾಶ್ರೀ ವೇದಿಕೆ ಮೇಲೆ ಕಾಣಿಸಿಕೊಂಡಿದ್ದರು. ನಿರ್ಮಾಪಕ ರಾಮು ನಿರ್ಮಿಸಿದ್ದ ಕೊನೆಯ ಸಿನಿಮಾ ‘ಅರ್ಜುನ್ ಗೌಡ’ ಚಿತ್ರದ ಪ್ರಿ ರಿಲೀಸ್ ಇವೆಂಟ್‌ ಕಾರ್ಯಕ್ರಮದಲ್ಲಿ ಕನಸಿನ ರಾಣಿ ಮಾಲಾಶ್ರೀ ಭಾಗವಹಿಸಿದ್ದರು. ರಾಮು ನೆನಪಿಗಾಗಿ, ಅವರ ಬ್ಯಾನರ್‌ನಲ್ಲಿ ನಟಿಸಿದ ಕನ್ನಡದ ಎಲ್ಲಾ ನಟರೂ ಒಂದೇ ವೇದಿಕೆ ಮೇಲೆ ಸೇರಿದ್ದರು. ಕ್ರೇಜಿಸ್ಟಾರ್ ರವಿಚಂದ್ರನ್, ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್, ರಿಯಲ್‌ಸ್ಟಾರ್ ಉಪೇಂದ್ರ, ಗೋಲ್ಡನ್ ಸ್ಟಾರ್ ಗಣೇಶ್, […]

Advertisement

Wordpress Social Share Plugin powered by Ultimatelysocial