‘ಲಾಭ್ ಸಿಂಗ್ ಉಗೋಕೆ’. 35ವರ್ಷದ ಈತ 2013ರಿಂದ ಆಮ್ ಆದ್ಮಿ ಪಕ್ಷದ ಕಾರ್ಯಕರ್ತ

ಈತ ‘ಲಾಭ್ ಸಿಂಗ್ ಉಗೋಕೆ’. 35ವರ್ಷದ ಈತ 2013ರಿಂದ ಆಮ್ ಆದ್ಮಿ ಪಕ್ಷದ ಕಾರ್ಯಕರ್ತ.ತನ್ನ ಸ್ವಂತ ಊರು ‘ಉಗೋಕೆ’ಯಲ್ಲಿ ಸಣ್ಣದೊಂದು ಮೊಬೈಲ್ ರಿಪೇರಿ ಶಾಪ್ ನ ಮಾಲಿಕ.
ಈತ ಪಂಜಾಬಿನ ಈ ಸಲದ ಚುನಾವಣೆಯಲ್ಲಿ ಭದೌರ್ ಕ್ಷೇತ್ರದಿಂದ ಆಮ್ ಆದ್ಮಿ ಪಕ್ಷದ ಹುರಿಯಾಳಾಗಿ ಕಣಕ್ಕಿಳಿದಿದ್ದ. ಭದೌರ್ ಕ್ಷೇತ್ರ 2017ರಲ್ಲೂ ಅಮ್ ಆದ್ಮಿಯ ವಶದಲ್ಲೇ ಇದ್ದಂತಹ ಕ್ಷೇತ್ರ. ಆದರೆ ಆ ಪಕ್ಷದಿಂದ ಗೆದ್ದು ಶಾಸಕನಾಗಿದ್ದ ಪರ್ಮಾಳ್ ಸಿಂಗ್ ಧೌಲ 2021ರಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಪಕ್ಷಾಂತರ ಮಾಡಿದ್ದ.ಹಾಗೂ 2022ರ ಚುನಾವಣೆಗಾಗಿ ತನ್ನ ಕ್ಷೇತ್ರವನ್ನ ಹಾಲಿ ಮುಖ್ಯಮಂತ್ರಿ ಹಾಗೂ 2022ರ ಚುನಾವಣೆಗೂ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಬಿಂಬಿಸಲ್ಪಟ್ಟಿದ್ದ ಚರಣ್ಜಿತ್ ಸಿಂಗ್ ಚನ್ನಿಗಾಗಿ ತ್ಯಾಗ ಮಾಡಿದ್ದ..
ಪರ್ಮಾಳ್ ಸಿಂಗ್ ನ ವಯುಕ್ತಿಕ ಪ್ರಭೆ ಹಾಗೂ ಚರಣ್ ಜಿತ್ ಸಿಂಗ್ ನ ಆಡಳಿತ ಬಲ ಹಾಗೂ ಲಾಭ್ ಸಿಂಗ್ ಉಗೋಕೆಯ ಆರ್ಥಿಕ ಪರಿಸ್ಥಿತಿ ಮತ್ತು ರಾಜಕೀಯ ನಾಯಕನಾಗಿ ಇದ್ದ ಅನನುಭವದಿಂದ ಈ ಬಾರಿ ಈ ಕ್ಷೇತ್ರದಲ್ಲಿ ಚರಣ್ಜಿತ್ ಸಿಂಗ್ ಚನ್ನಿಯ ಗೆಲುವು ನಿರಾಳ ಅನ್ನೋದು ಬಹುತೇಕ ರಾಜಕೀಯ ಪಂಡಿತರ ಅಭಿಪ್ರಾಯವಾಗಿತ್ತು.
ಹೀಗಿರುವಾಗ ನಿನ್ನೆ ಪಲಿತಾಂಶ ಪ್ರಕಟವಾಗಿದೆ.ರಾಜಕೀಯ ಪಂಡಿತರು ಈ ಕ್ಷೇತ್ರದ ಕಡೆ ಬೆರಗುಗಣ್ಣಿನಿಂದ ನೋಡಲಾರಂಭಿಸಿದ್ದಾರೆ.
ಯಾಕೆಂದರೆ. ಭಾವಿ ಮುಖ್ಯಮಂತ್ರಿ ಅಭ್ಯರ್ಥಿಯಾಗಿದ್ದ ಚನ್ನಿಯ ವಿರುದ್ಧ ಒಬ್ಬ ಸಾಮಾನ್ಯ ಮೊಬೈಲ್ ರಿಪೇರಿಯಂಗಡಿಯ ಮಾಲಿಕ ಗೆಲುವು ಸಾಧಿಸಿದ್ದಾನೆ.
ಅದೂ ಅಂತಿಂತಹ ಗೆಲುವಲ್ಲ.ಬರೋಬ್ಬರಿ 37,558 ಮತಗಳ ಗೆಲುವು.ಲಾಭ್ ಸಿಂಗ್ ಉಗೋಕೆ ಪಡೆದದ್ದು 63967 ಮತಗಳಾದರೆ ಚನ್ನಿ ಪಡೆದದ್ದು ಕೇವಲ 26409 ಮತಗಳು. ಚನ್ನಿ ಪಡೆದ ಮತಗಳು ಲಾಭ್ ಸಿಂಗ್ ಉಗೋಕೆ ಜಯಶಾಲಿಯಾದ ಮತಗಳಿಗಿಂತ 11159 ಕಡಿಮೆ.

ಒಂದು ಸಮಯದಲ್ಲಿ ದೈತ್ಯ ಶಕ್ತಿಯಾಗಿದ್ದ ಪಕ್ಷವೊಂದರ ಈ ದಯನೀಯ ಸ್ಥಿತಿ,ಕೆಲವೇ ವರ್ಷಗಳ ಹಿಂದೆಯಷ್ಟೆ ಉಗಮಿಸಿದ ಪಕ್ಷವೊಂದರ ಈ ಯಶಸ್ಸು ರಾಜಕೀಯ ಪಾಠಗಳೆಷ್ಟೋ ಕಲಿಸಬಹುದು.ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ರಷ್ಯಾದ ಪಡೆಗಳು ಖೆರ್ಸನ್ ಪ್ರದೇಶದ ಮೇಲೆ ಹಿಡಿತ ಸಾಧಿಸಿದವು!

Tue Mar 15 , 2022
ಮಾರ್ಚ್ 3 ರಂದು ಭೂಪ್ರದೇಶದ ಹೆಸರಿನ ರಾಜಧಾನಿಯನ್ನು ಮೊದಲು ವಶಪಡಿಸಿಕೊಂಡ ನಂತರ, ಖೆರ್ಸನ್‌ನ ಸಂಪೂರ್ಣ ಪ್ರದೇಶವನ್ನು ಪಡೆಗಳು ನಿಯಂತ್ರಣಕ್ಕೆ ತೆಗೆದುಕೊಂಡಿವೆ ಎಂದು ರಷ್ಯಾದ ರಕ್ಷಣಾ ಸಚಿವಾಲಯದ ಉನ್ನತ ಅಧಿಕಾರಿಯೊಬ್ಬರು ಹೇಳಿದ್ದಾರೆ. ಸ್ವಾಧೀನವನ್ನು ದೃಢೀಕರಿಸಿ, ಸಚಿವಾಲಯದ ಅಧಿಕೃತ ಪ್ರತಿನಿಧಿ ಮೇಜರ್ ಜನರಲ್ ಇಗೊರ್ ಕೊನಾಶೆಂಕೋವ್, ‘ಡೊನೆಟ್ಸ್ಕ್ ಪೀಪಲ್ಸ್ ರಿಪಬ್ಲಿಕ್’ ನ ಪಡೆಗಳು ಉಕ್ರೇನಿಯನ್ ರಕ್ಷಣೆಯನ್ನು ಭೇದಿಸಿ ಪ್ಯಾಂಟೆಲಿಮೊನೊವ್ಕಾದ ವಸಾಹತು ನಿಯಂತ್ರಣವನ್ನು ತೆಗೆದುಕೊಂಡವು ಎಂದು ಹೇಳಿದರು ಎಂದು ಆರ್ಟಿ ನ್ಯೂಸ್ ವರದಿ ಮಾಡಿದೆ. […]

Advertisement

Wordpress Social Share Plugin powered by Ultimatelysocial