ಹಡಪದ ಸಮಾಜದ ಅಭಿವೃದ್ಧಿಗಾಗಿ ಸರ್ಕಾರದ ಯೋಜನೆಗಳು ಬೇಕಾಗಿದೆ: ಗುಡ್ಡಪ್ಪ ಹಡಪದ.

12 ನೆಯ ಶತಮಾನದ ಮಹಾಶರಣ ಬಸವಣ್ಣನವರ ಅನುಭವ ಮಂಟಪದಲ್ಲಿ ಆಪ್ತ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ ಮಹಾಶರಣ ಹಡಪದ ಅಪ್ಪಣ್ಣನವರ ತತ್ವ ಆದರ್ಶ ಗುಣಗಳನ್ನು ಸಮಾಜ ಬಾಂಧವರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ತಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಿ ಸಮಾಜವನ್ನು ಮುಖ್ಯ ವಾಹಿನಿಗೆ ತರಬೇಕು ಎಂದು ಸಮಾಜದ ಮುಖಂಡ ವೀರಣ್ಣ ಹಡಪದ ಹೇಳಿದರು.

ಅವರು ಲಕ್ಷ್ಮೇಶ್ವರ ಪಟ್ಟಣದಲ್ಲಿ ಏರ್ಪಡಿಸಿದ್ದ ಹಡಪದ ಅಪ್ಪಣ್ಣನವರ 888ನೇಯ ಜಯಂತಿಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಹಾಶರಣ ಹಡಪದ ಅಪ್ಪಣ್ಣನವರ ಪತ್ನಿ ಲಿಂಗಮ್ಮನವರು ಸುಮಾರು ವಚನಗಳನ್ನು ನಾಡಿಗೆ ಕೊಟ್ಟಿದ್ದಾರೆ. ನಾವೆಲ್ಲರೂ ವಚನಗಳನ್ನು ಓದುವ ಮುಖಾಂತರ ತಮ್ಮ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸುವುದರ ಮುಖಾಂತರ ಸಮಾಜದ ಮಕ್ಕಳನ್ನು ಮುಖ್ಯವಾಹಿನಿಗೆ ತರಬೇಕು ಎಂದು ಸಮಾಜ ಬಾಂಧವರಿಗೆ ಕರೆ ನೀಡಿದರು.

ಅತೀ ಹಿಂದುಳಿದ ಹಡಪದ ಸಮಾಜದ ಅಭಿವೃದ್ಧಿಗಾಗಿ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತರಬೇಕು ಎಂದು ಹೇಳಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಯಾದಗಿರಿ :ಉತ್ತಮ ಮಳೆಯಾದ್ರೂ ಬೆಳೆಗೆ ಸೀಗುತ್ತಿಲ್ಲ ರಸಗೊಬ್ಬರ.

Tue Jul 26 , 2022
ರಸಗೊಬ್ಬರಕ್ಕಾಗಿ ರೈತರ ಪರದಾಟ!! ಉತ್ತಮ ಮಳೆಯಾದ್ರೂ ಬೆಳೆಗೆ ಸೀಗುತ್ತಿಲ್ಲ ರಸಗೊಬ್ಬರ. 24 ಸಾವಿರ ಟನ್ ಬೇಡಿಕೆಯಿದ್ದ ರಸಗೊಬ್ಬರ ಪೂರೈಕೆಯಾಗಿದ್ದ ಕೇವಲ ೯ ಸಾವಿರ ಟನ್ .ಬೇಳಿಗ್ಗೆ 3 ಗಂಟೆಯಿಂದ ಕಾಯುತ್ತಾ ನಿಂತ ರೈತರಿಗೆ ಸೀಗದ ಗೊಬ್ಬರ. ರಸಗೊಬ್ಬರದ ಅಭಾವ ಖಾಸಗಿಯಲ್ಲಿ ನಕಲಿ ಗೊಬ್ಬರ ಮಾರಾಟ. ಸರ್ಕಾರಿ ಕೇಂದ್ರಗಳ ಮೊರೆಹೋದ ರೈತರು . ಜಿಲ್ಲೆಯ್ಯಾದಂತಹ ರಸಗೊಬ್ಬರಕ್ಕಾಗಿ ರೈತರ ಆಹಾಹಾಕಾರ.. *ಯಾದಗಿರಿ ಜಿಲ್ಲೆಯ ಶಹಾಪೂರ ತಾಲೂಕಿನ ಕಚೇರಿ ಮುಂದೆ ಜಮಾಯಿಸಿದ ಸಾವಿರಾರು ರೈತರು […]

Advertisement

Wordpress Social Share Plugin powered by Ultimatelysocial