ಭಾರತೀಯ ಗಾನ ಕೋಗಿಲೆ, ಭಾರತ ರತ್ನ ಲತಾ ಮಂಗೇಶ್ಕರ್ (92) ಅವರು ಇಂದು ಭಾರತೀಯ ಗಾನ ಕೋಗಿಲೆ, ಭಾರತ ರತ್ನ ಲತಾ ಮಂಗೇಶ್ಕರ್ (92) ಅವರು ಇಂದು ನಿಧನ

ಮುಂಬೈ, ಫೆ.6- ಭಾರತೀಯ ಗಾನ ಕೋಗಿಲೆ, ಭಾರತ ರತ್ನ ಲತಾ ಮಂಗೇಶ್ಕರ್ (92) ಅವರು ಇಂದು ವಿವಶರಾಗಿದ್ದಾರೆ.ತಮ್ಮ ಸಿರಿಕಂಠದಿಂದ ಭಾರತೀಯ ಚಿತ್ರರಂಗದಲ್ಲಿ 36 ಭಾಷೆಗಳಲ್ಲಿ ಹಾಡಿದ್ದ ಅವರ ಹಾಡು ಸ್ತಬ್ಧಗೊಂಡಿದೆ.ತಮ್ಮ 13ನೆ ವಯಸ್ಸಿನಲ್ಲೇ ಗಾಯನ ಆರಂಭಿಸಿದ್ದ ಲತಾ ಅವರು ಸುಮಾರು ಏಳು ದಶಕಗಳ ಕಾಲ ಭಾರತದ ಮಧುರ ಕಂಠದ ಗಾಯಕಿ ಎಂಬ ಹಿರಿಮೆಗೆ ಪಾತ್ರರಾಗಿದ್ದರು.1929ರ ಸೆಪ್ಟೆಂಬರ್ 28ರಂದು ಮಧ್ಯ ಪ್ರದೇಶದ ಇಂದೋರ್‍ನಲ್ಲಿ ಸಂಗೀತಗಾರ ದೀನನಾಥ್ ಮಂಗೇಶ್ಕರ್ ಮತ್ತು ಸೇವಂತಿ ಮಂಗೇಶ್ಕರ್ ಅವರ ಪುತ್ರಿಯಾಗಿ ಜನಿಸಿದ ಲತಾ ಅವರ ಮೊದಲ ಹೆಸರು ಹೇಮಾ.ಬಾಲ್ಯದಲ್ಲೇ ರಂಗಭೂಮಿಯಲ್ಲಿ ಗುರುತಿಸಿಕೊಂಡಿದ್ದ ಲತಾ ಅವರಿಗೆ ಅವರ ತಂದೆಯೇ ಮೊದಲ ಗುರು. ಅವರಲ್ಲಿದ್ದ ಅಸಾಧಾರಣ ಪ್ರತಿಭೆಗೆ ನೀರೆರೆದು ಪೋಷಿಸಿದ್ದರು.ಮುಂಬೈನ ಪ್ರತಿಷ್ಠಿತ ಬ್ರಿಡ್ಜ್ ಕ್ಯಾಂಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಲತಾ ಕೊನೆಯುಸಿರೆಳೆದಿದ್ದಾರೆ.ಜನವರಿ 8ರಂದು ಕೋವಿಡ್ ಪಾಸಿಟಿವ್ ಹಿನ್ನೆಲೆಯಲ್ಲಿ ಸಿಟಿ ಆಸ್ಪತ್ರೆಗೆ ದಾಖಲಾಗಿದ್ದರು. ಅವರ ಹೆಚ್ಚಿನ ಚಿಕಿತ್ಸೆಗಾಗಿ ಬ್ರಿಡ್ಜ್‍ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗಿತ್ತು. ಜನವರಿ 3ರಂದು ಕೋವಿಡ್‍ನಿಂದ ಹೊರಬಂದಿದ್ದರು.ಗಾಯನ ಲೋಕದ ದಂತಕತೆ ಎನಿಸಿದ್ದ ಲತಾ ಅವರು ಕಳೆದ ವಾರ ಚೇತರಿಸಿಕೊಂಡಿದ್ದರು. ಆದರೆ, ನಿನ್ನೆ ಮತ್ತೆ ಆರೋಗ್ಯ ಹದಗೆಟ್ಟಿದ್ದರಿಂದ ವೆಂಟಿಲೇಟರ್ ಅಳವಡಿಸಿ ಚಿಕಿತ್ಸೆ ನೀಡಲಾಯಿತು.ಅವರ ಮೊದಲು 1948ರಲ್ಲಿ ಮಜಬೂರ್ ಎಂಬ ಚಿತ್ರದ ದಿಲ್‍ಮೆರಾ ಥೋಡಾ ಎಂಬ ಚಿತ್ರಗೀತೆಯಿಂದ ಪಾದಾರ್ಪಣೆ ಮಾಡಿದರೂ 1949ರಲ್ಲಿ ಹಾಡಿದ ಆಯೆಗಾ ಆನೆವಾಲಾ ಎಂಬ ಮಹಲ್ ಚಿತ್ರದಿಂದ ಜನಪ್ರಿಯತೆ ಗಳಿಸಿದರು.ಅಲ್ಲಿಂದ ಹಿಂದಿರುಗಿ ನೋಡದ ಲತಾ ಅವರು, ಭಾರತೀಯ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದ ಅಪ್ರತಿಮೆ ಗಾಯಕಿಯಾಗಿ ಬೆಳೆದರು.ಅವರ ಅದೆಷ್ಟೋ ಹಾಡುಗಳು ಜನಪ್ರಿಯವಾಗಿ ಚಿತ್ರರಂಗದ ಅಮರಗೀತೆಗಳಾಗಿ ಉಳಿದಿವೆ.36 ಭಾಷೆಗಳಲ್ಲಿ ಒಟ್ಟು 30 ಸಾವಿರಕ್ಕೂ ಅಕ ಹಾಡುಗಳನ್ನು ಹಾಡಿರುವ ಲತಾ ಅವರು ಹಿಂದಿ ಭಾಷೆಯೊಂದರಲ್ಲೇ 1000ಕ್ಕೂ ಹೆಚ್ಚು ಹಾಡು ಹಾಡಿ ಭಾರತದ ಪ್ರತಿಷ್ಠಿತ ಪ್ರಶಸ್ತಿಗಳಾದ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು 1989ರಲ್ಲಿ, ಪದ್ಮವಿಭೂಷಣ ಪ್ರಶಸ್ತಿಯನ್ನು 1999ರಲ್ಲಿ ಹಾಗೂ 2001ರಲ್ಲಿ ಭಾರತರತ್ನ ಪ್ರಶಸ್ತಿಗೆ ಭಾಜನರಾದವರು. ಇದಲ್ಲದೆ, ನ್ಯಾಷನಲ್ ಫಿಲ್ಮ್‍ಫೇರ್ ಅವಾರ್ಡ್, ಜೀವಮಾನ ಸಾಧನೆ ಪುರಸ್ಕಾರದಂತಹ ಹತ್ತು-ಹಲವು ಪ್ರಶಸ್ತಿ ಪುರಸ್ಕಾರಗಳು ಅವರನ್ನು ಕೈಬೀಸಿ ಕರೆದಿವೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಪಂಜಾಬ್‌ನಲ್ಲಿ ಶಿರೋಮಣಿ ಅಕಾಲಿದಳದೊಂದಿಗಿನ ಮೈತ್ರಿ ಕೆಟ್ಟ ದಾಂಪತ್ಯ ಎಂದ ಬಿಜೆಪಿ

Sun Feb 6 , 2022
  ಶನಿವಾರ ಪಂಜಾಬ್ ವಿಧಾನಸಭಾ ಚುನಾವಣಾ ಪ್ರಚಾರದಲ್ಲಿ ಸಕ್ರಿಯವಾಗಿರುವ ಕೇಂದ್ರ ಸಚಿವ ಮತ್ತು ಹಿರಿಯ ಬಿಜೆಪಿ ನಾಯಕ ಹರ್ದೀಪ್ ಸಿಂಗ್ ಪುರಿ ಅವರು ಶಿರೋಮಣಿ ಅಕಾಲಿದಳದೊಂದಿಗಿನ ಹಿಂದಿನ ಮೈತ್ರಿಯನ್ನು ಕೆಟ್ಟ ಮದುವೆ ಎಂದು ಕರೆದರು ಮತ್ತು ಅವರೊಂದಿಗೆ ಚುನಾವಣಾ ನಂತರದ ಮೈತ್ರಿ ಸಾಧ್ಯತೆಯನ್ನು ತಳ್ಳಿಹಾಕಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ. SAD ನೊಂದಿಗೆ ಯಾವುದೇ ಮೈತ್ರಿ ಬೇಡ ಎಂದು ಸ್ಪಷ್ಟವಾಗಿ ಹೇಳಿದ ಪುರಿ, ಪಂಜಾಬ್‌ನಲ್ಲಿ ತನ್ನ ವ್ಯಾಪ್ತಿಯನ್ನು ಮತ್ತು ಕ್ಷಿತಿಜವನ್ನು […]

Advertisement

Wordpress Social Share Plugin powered by Ultimatelysocial