ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟ ಕನ್ನಡದಲ್ಲಿ ಭಾವಗೀತೆ.

 

ಪದ್ಮಾ ಕುಮಟಾ ಪ್ರಥಮ ಚಿತ್ರ ಚೋಮನದುಡಿಯಲ್ಲಿಯೇ ಪ್ರತಿಭೆ ತೋರಿ ರಾಷ್ಟ್ರ ಪ್ರಶಸ್ತಿ ಪಡೆದವರು. ಕಣಗಾಲರ ‘ಫಲಿತಾಂಶ’ ಚಿತ್ರದಲ್ಲಿ ಅವರು ಜೈಜಗದೀಶ್ ಮುಂದೆ, “ಅವರೇ ಕಾಳು ಉಪ್ಪಿಟ್ಟು ತಂದಿದೀನಿ ತೊಗೊಳ್ಳಿ” ಅಂತ ಉತ್ಸಾಹದಿಂದ ನುಡಿಯುತ್ತ ಅಭಿನಯಿಸಿದ್ದು ಇನ್ನೂ ನೆನಪಲ್ಲಿದೆ. ಅವರು ಹಲವಾರು ಕಿರುತೆರೆಯ ಧಾರವಾಹಿಗಳಲ್ಲಿದ್ದರು. ಅಭಿನಯಿಸುವ ಸಂದರ್ಭದಲ್ಲೇ ನಿಧನರಾದ ಕರ್ಮಜೀವಿ. ಕೆಲವೊಂದು ಕಲಾವಿದರನ್ನು ಒಂದೆರಡು ಚಿತ್ರಗಳ ಕೆಲವೇ ನಿಮಿಷಗಳಲ್ಲಿ ಕಂಡಿದ್ದರೂ ಅವರು ಉಳಿಸುವ ನೆನಪು ಅಪಾರವಾದದ್ದು. ಅಂತಹ ಕಲಾವಿದರ ಸಾಲಿನಲ್ಲಿ ಪದ್ಮಾ ಕುಮಟ ಸಹಾ ಒಬ್ಬರು.ಪದ್ಮಾ ಕುಮಟಾ 2017 ವರ್ಷ ಈ ಸಮಯದಲ್ಲಿ ಲೋಕದಿಂದ ಅಸ್ತಮಿಸಿದರು. ಒಬ್ಬ ವ್ಯಕ್ತಿ ಜೀವನದಲ್ಲಿ ತಾನು ಮಾಡಿದ ಕೆಲಸ ಎಷ್ಟೇ ದೊಡ್ಡದಿರಲಿ ಚಿಕ್ಕದಿರಲಿ, ತೋರಿದ ಶ್ರದ್ಧೆ ಮಾತ್ರಾ ಅಮರ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕೃಷಿ ವಿಜ್ಞಾನಿ ಎಂ.ಮಹಾದೇವಪ್ಪ

Mon Mar 6 , 2023
  ಡಾ.ಎಂ.ಮಹಾದೇವಪ್ಪ ಭಾರತದಲ್ಲಿ ಹೈಬ್ರಿಡ್ ಭತ್ತದ ಯೋಜನೆಯ ಪಿತಾಮಹರಾಗಿ, ನಾಡಿನ ಶ್ರೇಷ್ಠ ಕೃಷಿ ವಿಜ್ಞಾನಿಗಳಾಗಿ, ಪದ್ಮಭೂಷಣ ಪ್ರಶಸ್ತಿ ಪುರಸ್ಕೃತರಾಗಿ ಹೆಸರಾಗಿದ್ದವರು. ಇಂದು ಅವರ ಸಂಸ್ಮರಣಾ ದಿನ. ರಾಜ್ಯ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಖ್ಯಾತಿ ಹೊಂದಿದ್ದ ಮಹಾದೇವಪ್ಪ ಅವರು 1937ರ ಆಗಸ್ಟ್ 4ರಂದುಚಾಮರಾಜನಗರ ಜಿಲ್ಲೆಯ ಮಾದಾಪುರದಲ್ಲಿ ಜನಿಸಿದರು. ತಂದೆ ಮಾದಪ್ಪ. ತಾಯಿ ಪುಟ್ಟಬಸಮ್ಮ. ಸ್ಥಳೀಯ ಶಾಲೆಯಲ್ಲಿಯೇ ಕಲಿತ ಇವರು ನಂತರ ಮೈಸೂರು, ಕೊಯಮತ್ತೂರಿನಲ್ಲಿ ಉನ್ನತ ವ್ಯಾಸಂಗ ನಡೆಸಿದರು.ಮಹಾದೇವಪ್ಪನವರು ಮೈಸೂರಿನ ಸಿ.ಎಫ್.ಟಿ.ಆರ್.ಐ ನಲ್ಲಿ […]

Advertisement

Wordpress Social Share Plugin powered by Ultimatelysocial