ಕಾನೂನು ವಿವಾದ ಪರಿಹರಿಸಲು ಆನ್ ಲೈನ್ ಮೂಲಗಳ ಬಗ್ಗೆ ಎಚ್ಚರದಿಂದಿರಿ.

ವದೆಹಲಿ – ಪ್ರಪಂಚದಾದ್ಯಂತದ ಜ್ಞಾನಕ್ಕೆ ಉಚಿತವಾಗಿ ಒದಗಿಸುವ ಆನ್‌ಲೈನ್ ಮೂಲಗಳ ಉಪಯುಕ್ತತೆಯನ್ನು ಅಂಗೀಕರಿಸಲಾಗಿದೆ; ಆದರೆ ಕಾನೂನು ವಿವಾದ ಬಗೆಹರಿಸುವುದಕ್ಕಾಗಿ ಈ ಮೂಲಗಳ ಉಪಯೋಗ ಮಾಡುವಾಗ ಎಚ್ಚರದಿಂದಿರಬೇಕೆಂದು, ಸರ್ವೋಚ್ಚ ನ್ಯಾಯಾಲಯ ಒಂದು ಮೊಕ್ಕದಮೆಯ ಆಲಿಕೆಯ ಸಮಯದಲ್ಲಿ ಸ್ಪಷ್ಟವಾಗಿ ಪ್ರತಿಪಾದಿಸಿದೆ.

ಕೇಂದ್ರ ಅಬಕಾರಿ ಶುಲ್ಕ ಕಾನೂನು, ೧೯೮೫ ರ ಅಡಿಯಲ್ಲಿ ಆಮದು ಮಾಡಿಕೊಂಡಿರುವ ‘ಆಲ್ ಇನ್ ಒನ್ ಇಂಟಿಗ್ರೇಟೆಡ್ ಡೆಕ್ಸ್ ಟಾಪ್ ಕಂಪ್ಯೂಟರ್’ನ ಯೋಗ್ಯ ವರ್ಗೀಕರಣದ ಹಿನ್ನೆಲೆಯಲ್ಲಿ ಒಂದು ಮೊಕದ್ದಮೆಯ ಕುರಿತು ನ್ಯಾಯಾಲಯ ಈ ಪ್ರತಿಪಾದನೆ ಮಾಡಿದೆ.

ನ್ಯಾಯಾಲಯವು, `ವಿಕಿಪಿಡಿಯಾ’ದಂತಹ ಆನ್ ಲೈನ್ ಮೂಲಗಳ ಮೇಲೆ ಸಂಪೂರ್ಣವಾಗಿ ಅವಲಂಬಿಸುವುದು ಯೋಗ್ಯವಲ್ಲ. ಈ ಮೂಲಗಳು ಜ್ಞಾನದ ಖಜಾನೆಯಾಗಿದ್ದರೂ, ಅದು ಬೇರೆ ಬೇರೆ ಜನರು ಪೂರೈಸಿರುವ ಮಾಹಿತಿಯ ಆಧಾರ ಮತ್ತು ಉಪಯೋಗಿಸಿರುವ ಜನರಿಂದ ಸಂಗ್ರಹಿಸಿರುವ ಆಧಾರದಲ್ಲಿ ಇರುತ್ತದೆ. ಆದ್ದರಿಂದ ಸತ್ಯ ಸತ್ಯತೆಯ ದೃಷ್ಟಿಯಿಂದ ಇಂತಹ ಆನ್ ಲೈನ್ ಮೂಲಗಳ ಮೇಲೆ ಅವಲಂಬಿಸಿರುವುದು ಯೋಗ್ಯವಲ್ಲ. ಈ ಮೂಲ ದಾರಿ ತಪ್ಪಿಸಬಹುದು. ನ್ಯಾಯವಾದಿಗಳು ಹೆಚ್ಚು ವಿಶ್ವಾಸಾರ್ಹ ಮತ್ತು ಪ್ರಾಮಾಣಿಕ ಮೂಲಗಳ ಮೇಲೆ ಅವಲಂಬಿಸಬೇಕು, ಇದಕ್ಕಾಗಿ ನ್ಯಾಯಾಲಯ ಮತ್ತು ನ್ಯಾಯಾಂಗ ಅಧಿಕಾರಿ ಇವರು ಪ್ರಯತ್ನಿಸಬೇಕು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬಿಬಿಸಿ ನ್ಯೂಸ್ ನಿಂದ ಭಾರತದ ಪ್ರಧಾನಿ ನರೇಂದ್ರ ಮೋದಿ ಇವರ ಬಗ್ಗೆ ಮುಸಲ್ಮಾನರಿಂದ ದ್ವೇಷಪೂರಿತ ಸರಣಿ.

Fri Jan 20 , 2023
ನವದೆಹಲಿ – ಬ್ರಿಟನ್ನಿನ ಸಂಸದ ಲಾರ್ಡ್ ರಾಮಿ ರೇಂಜರ್ ಇವರು ಗುಜರಾತನ ೨೦೦೨ ರಲ್ಲಿ ನಡೆದ ಗಲಭೆಯ ಬಗ್ಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಇವರ ವಿರುದ್ಧ ನಿರ್ಮಿಸಿದ ಸರಣಿಯ ಕುರಿತು ‘ಬಿಬಿಸಿ ನ್ಯೂಸ್’ ಈ ವಾರ್ತಾ ವಾಹಿನಿಯನ್ನು ಕಟುವಾಗಿ ಟೀಕಿಸಿದ್ದಾರೆ. ಸಂಸದ ರಾಮಿ ಇವರು, ‘ಬಿಬಿಸಿ ನ್ಯೂಸ್’ ಭಾರತದ ಕೋಟ್ಯಾಂತರ ಜನರ ಭಾವನೆಗೆ ಧಕ್ಕೆ ತಂದಿದೆ ಮತ್ತು ಪ್ರಜಾಪ್ರಭುತ್ವದ ಪದ್ಧತಿಯಿಂದ ಆಯ್ಕೆಯಾಗಿರುವ ಭಾರತದ ಪ್ರಧಾನಿ ಹಾಗೂ ಭಾರತೀಯ ಪೋಲಿಸ್, […]

Advertisement

Wordpress Social Share Plugin powered by Ultimatelysocial