LIC:ಐಪಿಓಗಾಗಿ ಎಲ್​ಐಸಿ ಜೊತೆಗೆ ಪಾನ್​ ಕಾರ್ಡ್ ಲಿಂಕ್​ ಮಾಡಲು ಇಲ್ಲಿದೆ ಟಿಪ್ಸ್;

 

ಭಾರತೀಯ ಜೀವ ವಿಮಾ ನಿಗಮದ ಮೆಗಾ ಐಪಿಓ ಪ್ರಸಕ್ತ ಹಣಕಾಸು ವರ್ಷದ ಅಂತ್ಯದಲ್ಲಿ ಹೊರಬೀಳಲಿದೆ. ಆದರೂ ಸಹ ಎಲ್​​ಐಸಿ ಪಾಲಿಸಿದಾರರು ತಮ್ಮ ಪಾನ್​ ಕಾರ್ಡ್​ನ್ನು ಪಾಲಿಸಿಯ ಜೊತೆಗೆ ಲಿಂಕ್​ ಮಾಡುವುದು ಅತ್ಯಂತ ಅವಶ್ಯಕವಾಗಿದೆ.

ಎಲ್​ಐಸಿಯು ಇತ್ತೀಚಿಗೆ ತನ್ನೆಲ್ಲ ಪಾಲಿಸಿದಾರರಿಗೆ ಅನ್ವಯವಾಗುವಂತೆ ಕಂಪನಿಯ ಮುಂಬರುವ ಐಪಿಓ ಚಂದಾದಾರಿಕೆಗೆ ಸಂಬಂಧಿಸಿದಂತೆ ಸಾರ್ವಜನಿಕ ಪ್ರಕಟಣೆಯನ್ನು ಹೊರಡಿಸಿದೆ.

ಕಂಪನಿಯ ದಾಖಲೆಗಳಲ್ಲಿ ತಮ್ಮ ಪಾನ್​ ಕಾರ್ಡ್​ನ್ನು ಲಿಂಕ್​ ಮಾಡಿದರೆ ಮಾತ್ರ ಅದರ ಮುಂಬರುವ ಐಪಿಓದ ಚಂದಾದಾರರಾಗಬಹುದು ಎಂದು ಹೇಳಿದೆ.

ನಮ್ಮ ಪಾಲಿಸಿದಾರರ ಹಿತದೃಷ್ಟಿಯಿಂದ, LIC ದಾಖಲೆಗಳಲ್ಲಿ PAN ಅನ್ನು ನವೀಕರಿಸಲು ಪಾಲಿಸಿದಾರರಿಗೆ ಕರೆ ನೀಡುವ ಜಾಹೀರಾತುಗಳನ್ನು ನೀಡುತ್ತಿದ್ದೇವೆ ಎಂದು LIC ಹೇಳಿದೆ.

ಆನ್​ಲೈನ್​​ನಲ್ಲಿ ಎಲ್​ಐಸಿಗೆ ಪಾನ್​ ಕಾರ್ಡ್​ ದಾಖಲೆ ಅಪ್​ಡೇಟ್​ ಮಾಡಲು ಇಲ್ಲಿದೆ ಮಾರ್ಗ :

1. www.licindia.in ಅಥವಾ https://licindia.in/Home/Online-PAN-Registration ಗೆ ಭೇಟಿ ನೀಡಿ.

2. ನಿಮ್ಮ ಪಾಲಿಸಿ ಸಂಖ್ಯೆ, ಪಾನ್​. ಜನ್ಮ ದಿನಾಂಕ ಹಾಗೂ ಇಮೇಲ್​ ಐಡಿಯನ್ನು ನೀವು ಒದಗಿಸಬೇಕಾಗುತ್ತದೆ.

3. ಈ ಲಿಂಕ್​​ನಲ್ಲಿ ನೀವು ನಿಮ್ಮೆಲ್ಲ ಎಲ್​ಐಸಿ ಪಾಲಿಸಿಗಳ ದಾಖಲೆಯನ್ನು ಅಪ್​ಡೇಟ್​ ಮಾಡಬೇಕು.

4. ನಿಮ್ಮ ಪಾಲಿಸಿಯಲ್ಲಿ ಪಾನ್​ ಕಾರ್ಡ್ ಲಿಂಕ್​ ಆಗಿದೆಯೋ ಅಥವಾ ಇಲ್ಲವೋ ಎಂದು ಪರಿಶೀಲಿಸಲು www.licindia.in OR https://linkpan.licindia.in/UIDSeedingWebApp/getPolicyPANStatus ಗೆ ಭೇಟಿ ನೀಡಿ.

5. ಇದನ್ನು ಹೊರತುಪಡಿಸಿ ನೀವು ಎಲ್​ಐಸಿ ಏಜೆಂಟ್​ನ್ನು ಸಂಪರ್ಕಿಸುವ ಮೂಲಕವೂ ಪಾನ್​ ಕಾರ್ಡ್ ಲಿಂಕ್​ ಮಾಡಬಹುದು.

LIC, LIC ಕಾಯ್ದೆ 1956 ರ ಅಡಿಯಲ್ಲಿ ರಚಿಸಲಾದ ಶಾಸನಬದ್ಧ ನಿಗಮವಾಗಿದೆ, ಇದು ಸಂಪೂರ್ಣವಾಗಿ ಸರ್ಕಾರದ ಒಡೆತನದ ಭಾರತದ ಪ್ರಮುಖ ಜೀವ ವಿಮಾ ಕಂಪನಿಯಾಗಿದೆ.

ಇದು ಭಾರತದ ಹೊರಗೆ ಮೂರು ಶಾಖೆಗಳನ್ನು ಹೊಂದಿದೆ – ಬ್ರಿಟನ್​​, ಫಿಜಿ ಮತ್ತು ಮಾರಿಷಸ್, ಸಿಂಗಾಪುರದಲ್ಲಿ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆ ಮತ್ತು ಬಹ್ರೇನ್, ಕೀನ್ಯಾ, ಶ್ರೀಲಂಕಾ, ನೇಪಾಳ, ಸೌದಿ ಅರೇಬಿಯಾ ಮತ್ತು ಬಾಂಗ್ಲಾದೇಶದಲ್ಲಿ ಜಂಟಿ ಉದ್ಯಮಗಳನ್ನು ಹೊಂದಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಓಡಿಹೋದ ಪತ್ನಿಯನ್ನ ಹುಡುಕಿಕೊಟ್ಟವರಿಗೆ ಐದು ಸಾವಿರ ಬಹುಮಾನ ಘೋಷಿಸಿದ ಪತಿ.!

Tue Dec 28 , 2021
ಪತ್ನಿ ಹಾಗೂ ಮಗು ಕಾಣೆಯಾಗಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ವ್ಯಕ್ತಿಯೊಬ್ಬ ಇಬ್ಬರನ್ನು ಹುಡುಕಿಕೊಟ್ಟವರಿಗೆ ಐದು ಸಾವಿರ ಬಹುಮಾನ ನೀಡುವುದಾಗಿ ಘೋಷಿಸಿದ್ದಾನೆ. ಕೆಲಸದ ನಿಮಿತ್ತ ಹೈದರಾಬಾದ್‌ನಲ್ಲಿದ್ದಾಗ ಆತನ ಪತ್ನಿ ಮಗುವಿನೊಂದಿಗೆ ಮನೆಯ ಕಿಟಕಿ ಒಡೆದು ಓಡಿ ಹೋಗಿದ್ದಾಳೆ. ಬಂಗಾಳದ ಪಿಂಗ್ಲಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ವೃತ್ತಿಯಲ್ಲಿ ಬಡಗಿಯಾಗಿರುವ ಪತಿ, ಪತ್ನಿ ಮತ್ತು ಮಗುವನ್ನು ಹುಡುಕಿಕೊಂಡು ಬೇರೆ ಬೇರೆ ಸ್ಥಳಗಳಿಗೆ ಭೇಟಿ ನೀಡಿದ್ದು ವ್ಯರ್ಥವಾಗಿದೆ. ಕೊನೆಯ ಉಪಾಯವಾಗಿ, ಅವರು […]

Advertisement

Wordpress Social Share Plugin powered by Ultimatelysocial