ಲಂಡನ್‌ನಲ್ಲಿ ನರ್ಸ್‌ ಕೆಲಸದ ಆಮಿಷ 34 ಲಕ್ಷ ರೂ. ದೋಚಿದ್ದ ಸೈಬರ್‌ ವಂಚಕನ ಸೆರೆ.

 

ಲಂಡನ್‌ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಸ್ಟಾಫ್‌ ನರ್ಸ್‌ ಹುದ್ದೆ ಕೊಡಿಸುವುದಾಗಿ ನಂಬಿಸಿ ಮಹಿಳೆಯೊಬ್ಬರಿಂದ 34 ಲಕ್ಷ ರೂ.ವರ್ಗಾವಣೆ ಮಾಡಿಸಿಕೊಂಡು ವಂಚಿಸಿದ್ದ ಸೈಬರ್‌ ವಂಚಕನನ್ನು ಈಶಾನ್ಯ ವಿಭಾಗದ ಸೈಬರ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ. ನೈಜೀರಿಯಾ ಮೂಲದ ನೊಕೊಚಾ ಕಾಸ್ಮೀರ್‌ ಇಕೆಂಬಾ (39) ಬಂಧಿತ.ನೊಕೊಚಾ ಬ್ಯಾಂಕ್‌ ಅಕೌಂಟ್‌ಗೆ ಟ್ರಾನ್ಸ್‌ಫರ್‌ ಮಾಡಿಸಿಕೊಂಡಿದ್ದ ಐದು ಲಕ್ಷ ರೂ.ಗಳನ್ನು ಫ್ರೀಜ್‌ ಮಾಡಿಸಲಾಗಿದೆ. ವಂಚನೆಗೆ ಬಳಸಿದ್ದ ಸಿಮ್‌ ಕಾರ್ಡ್‌, ಒಂದು ಲ್ಯಾಪ್‌ಟಾಪ್‌, ಎರಡು ಡೆಬಿಟ್‌ ಕಾರ್ಡ್‌, ಪಾಸ್‌ಪೋರ್ಟ್‌ ಜಪ್ತಿ ಮಾಡಲಾಗಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದರು.ದುಬೈನಲ್ಲಿ ನರ್ಸ್‌ ಆಗಿ ಸೇವೆ ಸಲ್ಲಿಸಿ ಮೂರು ವರ್ಷಗಳ ಹಿಂದೆ ನಗರಕ್ಕೆ ಆಗಮಿಸಿದ್ದ ವಿನುತಾ (ಹೆಸರು ಬದಲಿಸಲಾಗಿದೆ) ಎಂಬುವವರು ದೊಡ್ಡಗುಬ್ಬಿಯಲ್ಲಿ ನೆಲೆಸಿದ್ದಾರೆ. ಕಳೆದ ವರ್ಷ ನವೆಂಬರ್‌ನಲ್ಲಿ ಯುಕೆ (ಲಂಡನ್‌) ಆಸ್ಪತ್ರೆಯಲ್ಲಿ ದುಬಾರಿ ಸಂಬಳದ ಹುದ್ದೆ ಖಾಲಿಯಿರುವುದಾಗಿ ಸಂದೇಶವೊಂದು ಅವರ ಇ-ಮೇಲ್‌ಗೆ ಬಂದಿತ್ತು.ಅದನ್ನು ನಂಬಿದ್ದ ವಿನುತಾ ದೂರವಾಣಿ ಮೂಲಕ ಸಂಪರ್ಕಿಸಿದ ವೇಳೆ ಆರೋಪಿ ನೊಕೊಚಾ, ಅದು ತಿಂಗಳಿಗೆ 4.5 ಲಕ್ಷ ರೂ. ಸಂಬಳದ ಹುದ್ದೆಯಾಗಿದ್ದು, ಆಫರ್‌ ಲೆಟರ್‌ ಕೊಡಿಸುವುದಾಗಿ ಹೇಳಿದ್ದ. ಬಳಿಕ ಕೆಲಸದ ಪ್ರೊಸೆಸಿಂಗ್‌ ಶುಲ್ಕ, ಕ್ಲಿಯರೆನ್ಸ್‌ ಸರ್ಟಿಫಿಕೇಟ್‌ ಶುಲ್ಕ ಎಂದು ಹೇಳಿ, ಹಂತ- ಹಂತವಾಗಿ 34.07 ಲಕ್ಷ ರೂ.ಗಳನ್ನು ವಿವಿಧ ಅಕೌಂಟ್‌ಗಳಿಗೆ ಹಣ ಹಾಕಿಸಿಕೊಂಡಿದ್ದ. ಕೆಲದಿನಗಳ ಬಳಿಕ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಇದರಿಂದ ಮೋಸ ಹೋಗಿರುವುದು ಗೊತ್ತಾಗಿ ವಿನುತಾ ಪೊಲೀಸರಿಗೆ ದೂರು ನೀಡಿದ್ದರು ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದರು.ವಂಚನೆಗೆ ಬಳಸಿದ್ದ ಬ್ಯಾಂಕ್‌ ಖಾತೆ, ಮೊಬೈಲ್‌ ನಂಬರ್‌ ಸೇರಿ ತಾಂತ್ರಿಕ ಅಂಶಗಳನ್ನು ಆಧರಿಸಿ ಹರಿಯಾಣದ ಫರೀದಾಬಾದ್‌ನಲ್ಲಿ ನೆಲೆಸಿದ್ದ ಆರೋಪಿ ನೊಕೊಚಾನನ್ನು ಬಂಧಿಸಲಾಯಿತು. ಆರೋಪಿ ವಿರುದ್ಧ ಹೈದರಾಬಾದ್‌ ಹಾಗೂ ತಮಿಳುನಾಡಿನ ಕರೂರು ಪೊಲೀಸ್‌ ಠಾಣೆಗಳಲ್ಲಿಯೂ ಪ್ರಕರಣಗಳಿರುವುದು ವಿಚಾರಣೆ ವೇಳೆ ಗೊತ್ತಾಗಿದೆ,” ಎಂದು ಅಧಿಕಾರಿ ಹೇಳಿದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸರ್ವೀಸ್ ರಸ್ತೆ ಸಂಪೂರ್ಣ ಆಗುವವರೆಗೂ ಎಕ್ಸ್ ಪ್ರೆಸ್ ವೇಯ ಟೋಲ್ ಸಂಗ್ರಹ ಮುಂದೂಡಲಾಗಿದೆ.

Tue Feb 28 , 2023
   ಸರ್ವೀಸ್ ರಸ್ತೆಗಳು ಪೂರ್ಣಗೊಳ್ಳುವವರೆಗೂ ಮೈಸೂರು-ಬೆಂಗಳೂರು ಎಕ್ಸ್ ಪ್ರೆಸ್ ವೇನಲ್ಲಿ ಟೋಲ್ ಸಂಗ್ರಹವನ್ನು ಮುಂದೂಡಲಾಗಿದೆ ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದ್ದಾರೆ. ಈ ಬಗ್ಗೆ ಅವರು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸಹ ಈ ಬಗ್ಗೆ ಪ್ರಕಟಣೆ ಹೊರಡಿಸಿದ್ದು ಬೆಂಗಳೂರು- ನಿಡಘಟ್ಟದವರೆಗೆ ಈಗ ನಿಗದಿಪಡಿಸಿರುವ ಟೋಲ್ ಅನ್ನು ಮಾರ್ಚ್ 14ರಿಂದ ಟೋಲ್ ದುಬಾರಿ ಆಯ್ತು ಎಂದು ಸಾರ್ವಜನಿಕ ವಲಯದಿಂದ ವಿರೋಧ ಬರುತ್ತಿದ್ದಂತೆ ಇಂತಹ […]

Advertisement

Wordpress Social Share Plugin powered by Ultimatelysocial