ಪ್ರೀತಿಗೆ ಯಾವುದೇ ಗಡಿಗಳಿಲ್ಲ.

ಪ್ರೀತಿಗೆ ಯಾವುದೇ ಗಡಿಗಳಿಲ್ಲ. ಇದು 24 ವರ್ಷದ ಈ ಹುಡುಗಿಯ ವಿಷಯದಲ್ಲಿ ನಿಜವಾಗಿದೆ. ಈ ಹುಡುಗಿ ತನ್ನ ಅಪ್ಪನ ವಯಸ್ಸಿನ ವ್ಯಕ್ತಿಯ ಜೊತೆಗೆ ಮದುವೆಯಾಗಲು ತನ್ನ ಗೆಳೆಯನೊಂದಿಗಿನ ಮದುವೆಯನ್ನು ರದ್ದುಗೊಳಿಸಿ ಸುದ್ದಿಯಾಗಿದ್ದಾಳೆ.

ಅಮೆರಿಕದ ಉತ್ತರ ಕೆರೊಲಿನಾದ 24 ವರ್ಷದ ಅಮಂಡಾ ಕ್ಯಾನನ್ ಎಂಬಾಕೆ ಕಾಲೇಜಿನಿಂದಲೂ ಹುಡುಗನೊಬ್ಬನನ್ನು ಪ್ರೀತಿಸುತ್ತಿದ್ದಳು.

ನಂತರ 2017 ರಲ್ಲಿ ಏಸ್ ಎಂಬ 54 ವರ್ಷದ ವ್ಯಕ್ತಿಯನ್ನು ಭೇಟಿಯಾದಳು. ಅತ್ತ ಏಸ್​ ಡಿವೋರ್ಸ್​ ಪಡೆದಿದ್ದ. ಇದಾದ ಮೇಲೆ ಮತ್ತೆ ಮದುವೆಯಾಗುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದ.

ಆದರೆ ಆತ ಅಮಂಡಾಳನ್ನು ಭೇಟಿಯಾದ ನಂತರ ತನ್ನ ಪ್ರತಿಜ್ಞೆಯನ್ನು ಮುರಿದ. ಆಕೆಯ ಸೌಂದರ್ಯಕ್ಕೆ ಮನಸೋತ. ಇತ್ತ ಯುವತಿಯೂ ಆತನಿಗೆ ಒಲಿದಳು. ಬಾಯ್​ಫ್ರೆಂಡ್​ ಜೊತೆ ಸಂಬಂಧ ಮುರಿದಳು. 4 ವರ್ಷಗಳ ಕಾಲ ಪರಸ್ಪರ ಡೇಟಿಂಗ್ ಮಾಡಿದ ನಂತರ ಮದುವೆಯಾಗಿದ್ದಾರೆ.

ಡೈಲಿ ಸ್ಟಾರ್ ವರದಿಯ ಪ್ರಕಾರ, ಏಸ್ ತನ್ನ ಹಿಂದಿನ ಮದುವೆಯಿಂದ ಇಬ್ಬರು ಮಕ್ಕಳಾದ ಪೇಟನ್ (21) ಮತ್ತು ಕೇಡ್ (20) ಎಂಬ ಮಕ್ಕಳಿಗೆ ತಂದೆಯಾಗಿದ್ದಾನೆ. ಆದರೆ ಇದರಿಂದ ನನಗೆ ಸಮಸ್ಯೆ ಇಲ್ಲ ಎಂದು ಯುವತಿ ಹೇಳಿದ್ದಾಳೆ. ಏಸ್​ದು ನನ್ನ ಅಪ್ಪನ ವಯಸ್ಸು. ಆದರೂ ನನಗೆ ಸಮಸ್ಯೆ ಇಲ್ಲ ಎಂದಿದ್ದಾಳೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಅಧಿವೇಶನದ ಬಳಿಕ ನಾಲ್ವರು ಶಾಸಕರು ಪಕ್ಷಕ್ಕೆ ಗುಡ್ ಬೈ!

Sun Feb 19 , 2023
ಬೆಂಗಳೂರು : ಚುನಾವಣೆ ಹೊತ್ತಲ್ಲೇ ಜೆಡಿಎಸ್ ಬಿಗ್ ಶಾಕ್ ಎದುರಾಗಿದ್ದು, ಅಧಿವೇಶನ ಮುಕ್ತಾಯದ ಫೆ. 24 ರ ನಂತರ ನಾಲ್ವರು ಶಾಸಕರು ಜೆಡಿಎಸ್ ಗೆ ಗುಡ್ ಬೈ ಹೇಳಲಿದ್ದಾರೆ. ಕೋಲಾರದ ಶಾಸಕ ಕೆ.ಶ್ರೀನಿವಾಸ ಗೌಡ, ಅರಸೀಕೆರೆ ಶಾಸಕ ಕೆ.ಎಂ. ಶಿವಲಿಂಗೇಗೌಡ, ಅರಕಲಗೂಡಿನ ಎ.ಟಿ. ರಾಮಸ್ವಾಮಿ, ಗುಬ್ಬಿಯ ಎಸ್.ಆರ್. ಶ್ರೀನಿವಾಸ್ ಜೆಡಿಎಸ್ ಗೆ ರಾಜೀನಾಮೆ ನೀಡಲಿದ್ದಾರೆ. ಅಧಿವೇಶನ ಮುಗಿಯುತ್ತಿದ್ದಂತೆ ಅಧಿಕೃತವಾಗಿ ಜೆಡಿಎಸ್ ಪಕ್ಷಕ್ಕೆ ರಾಜೀನಾಮೆ ನೀಡಲಿದ್ದಾರೆ ಎನ್ನಲಾಗಿದೆ. ಶ್ರೀನಿವಾಸಗೌಡ, ಶಿವಲಿಂಗೇಗೌಡ ಹಾಗೂ […]

Advertisement

Wordpress Social Share Plugin powered by Ultimatelysocial