ಎಂ. ಎನ್. ಶೇಷಗಿರಿ

ಎಂ. ಎನ್. ಶೇಷಗಿರಿ
ಎಂ. ಎನ್. ಶೇಷಗಿರಿ ಸುಗಮ ಸಂಗೀತ ಲೋಕದಲ್ಲಿ ಹೆಸರಾಗಿದ್ದವರು.
ಶೇಷಗಿರಿ ಹಾವೇರಿ ಜಿಲ್ಲೆಯ ಹೊಸರಿತ್ತಿಯಲ್ಲಿ 1930ರ ಫೆಬ್ರವರಿ 23ರಂದು ಜನಿಸಿದರು. ತಂದೆ ನಿಂಗಪ್ಪ. ತಾಯಿ ಗಂಗಮ್ಮ. ಓದಿದ್ದು ಮುಲ್ಕಿ ಪರೀಕ್ಷೆ ಮತ್ತು ಕನ್ನಡ ಜಾಣ ಪರೀಕ್ಷೆ. ಮುಂಬಯಿಯಲ್ಲಿ ಇಂಟರ್ ಮೀಡಿಯೆಟ್ ಡ್ರಾಯಿಂಗ್ ಹಾಗೂ ಗಂಧರ್ವ ಮಹಾವಿದ್ಯಾಲಯದಿಂದ ಉನ್ನತ ಹಂತದವರೆಗಿನ ಸಂಗೀತ ಪದವಿ ಪಡೆದರು. ಬಡಗಿತನ, ಕರಕುಶಲ, ಮಣ್ಣಿನ ಮೂರ್ತಿಗಳ ರಚನೆ, ಚಿತ್ರಕಲೆ, ಭಜನೆ, ಸಂಗೀತ ಇವೆಲ್ಲ ಕಲೆಗಳೂ ಇವರ ಮನೆತನಕ್ಕೆ ಬಂದ ಬಳುವಳಿಯಾಗಿತ್ತು. ಹೊಸರಿತ್ತಿಯ ನೀಲಕಂಠ ಬುವಾ, ರಾಮಬುವಾ ಮಕೋಳ ಇವರ ವಂಶ ಪರಂಪರೆಯಲ್ಲಿ ಬಂದವರು.
ಶೇಷಗಿರಿ 1951ರಲ್ಲಿ ಪ್ರಾಥಮಿಕ ಶಿಕ್ಷಕರಾಗಿ ಸೇವೆ ಪ್ರಾರಂಭಿಸಿ, ಸಂಗೀತ ಶಿಕ್ಷಕರಾಗಿ ಬಡ್ತಿ ಪಡೆದು 1988ರಲ್ಲಿ ನಿವೃತ್ತರಾದರು. ಶಾಲಾ ಶಿಕ್ಷಕರಾಗಿ ಸಂಗೀತ ಶಿಕ್ಷಣ ನೀಡಿದರು. ಆಕಾಶವಾಣಿ ಧಾರವಾಡ ಕೇಂದ್ರದ ಕಲಾವಿದರಾದರು. ದೂರದರ್ಶನದ ಮೂಲಕ ಹಲವಾರು ಕಾರ್ಯಕ್ರಮಗಳನ್ನು ನೀಡಿದರು. ಹಲವಾರು ಧ್ವನಿಸುರಳಿಗಳಿಗೆ ಧ್ವನಿಯಾದರು. ಕವನ ರಚಿಸಿ ರಾಗ ಸಂಯೋಜಿಸಿದ್ದರ ಜೊತೆಗೆ ಸಂಗೀತ ಶಾಸ್ತ್ರದ ಕುರಿತು ಹಲವಾರು ಪುಸ್ತಕಗಳ ರಚನೆ ಮಾಡಿದರು. ಸಂಗೀತ ಪ್ರಾತ್ಯಕ್ಷಿಕೆ ನೀಡಿದರು.
ಖ್ಯಾತ ಹಾಡುಗಾರ್ತಿ ಸಂಗೀತ ಕಟ್ಟಿ ಇವರ ಶಿಷ್ಯವರ್ಗದಲ್ಲಿದ್ದರು.
ಬೆಳಗಾವಿಯ ಲಿಂಗರಾಜ ಜಯಂತಿ, ಮುರುಘರಾಜೇಂದ್ರಮಠ, ಲಯನ್ಸ್ ಕ್ಲಬ್, ಕಾಗಿನೆಲೆ ಕನಕ ಗುರುಪೀಠ, ಕನ್ನಡ ಸಂಸ್ಕೃತಿ ಇಲಾಖೆ, ಸಾಹಿತ್ಯ ಪರಿಷತ್ತಿನ ಸಮ್ಮೇಳನ, ಪುಟ್ಟರಾಜ ಗವಾಯಿ ಕ್ಷೇತ್ರ ಸೇರಿದಂತೆ ಇವರ ಕಾರ್ಯಕ್ರಮಗಳು ವ್ಯಾಪಕವಾಗಿ ನಡೆದವು.
ಶೇಷಗಿರಿ ಅವರಿಗೆ ಟಾಗೋರ್ ಶತಮಾನೋತ್ಸವ ಗೌರವ, ಕನಕದಾಸರ ೪ನೇ ಶತಮಾನೋತ್ಸವ ಗೌರವ, ಸಂತ ಶಿಶುನಾಳ ಪ್ರಶಸ್ತಿ, ಸಂಗೀತ ಸುಧಾಕರ ಪ್ರಶಸ್ತಿ ಮುಂತಾದ ಅನೇಕ ಗೌರವಗಳು ಸಂದಿದ್ದವು.
ಶೇಷಗಿರಿ ಅವರು 2005ರ ಫೆಬ್ರವರಿ 15ರಂದು ನಿಧನರಾದರು.ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಐಪಿಎಲ್ನಿಂದ ಎಂಎಸ್ ಧೋನಿ ನಿವೃತ್ತಿ - ಸಿಎಸ್ಕೆ ಅಧಿಕಾರಿ ತಂಡದ ನಾಯಕನ ಭವಿಷ್ಯದ ಬಗ್ಗೆ ಅಪ್ಡೇಟ್!

Tue Mar 15 , 2022
ಭಾರತದ ಮಾಜಿ ನಾಯಕ ಮತ್ತು ಪ್ರಸ್ತುತ ಚೆನ್ನೈ ಸೂಪರ್ ಕಿಂಗ್ಸ್ (CSK) ನಾಯಕ ಎಂಎಸ್ ಧೋನಿ 2021 ರಲ್ಲಿ ತಂಡವು ಗೆದ್ದ ಇಂಡಿಯನ್ ಪ್ರೀಮಿಯರ್ ಲೀಗ್ ಪ್ರಶಸ್ತಿಯನ್ನು ರಕ್ಷಿಸಲು ಸಿದ್ಧರಾಗಿದ್ದಾರೆ. ಅವರು ಈ ವರ್ಷ ದಾಖಲೆ ಸಮನಾದ ಐದನೇ ಐಪಿಎಲ್ ಪ್ರಶಸ್ತಿಯನ್ನು ಗೆಲ್ಲಲು ನೋಡುತ್ತಿದ್ದಾರೆ. ಆದಾಗ್ಯೂ, ಅವರ ಐಪಿಎಲ್ ಭವಿಷ್ಯದ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ. ಭಾರತದ ಅತ್ಯಂತ ಯಶಸ್ವಿ ನಾಯಕ ಈಗಾಗಲೇ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾಗಿದ್ದಾರೆ. “ಇದು ಅವರ […]

Advertisement

Wordpress Social Share Plugin powered by Ultimatelysocial