ಎಂ. ವಿ. ಗೋಪಾಲಸ್ವಾಮಿ ಮನಃಶಾಸ್ತ್ರದ ಪ್ರಾಧ್ಯಾಪಕರು

ಮನಃಶಾಸ್ತ್ರದ ಪ್ರಾಧ್ಯಾಪಕರಾದ ಪ್ರೊ. ಎಂ. ವಿ. ಗೋಪಾಲಸ್ವಾಮಿ ಅವರು ಕರ್ನಾಟಕದಲ್ಲಿ ರೇಡಿಯೋ ಪ್ರಸಾರ, ಮೈಸೂರು ವಿಶ್ವವಿದ್ಯಾಲಯದಲ್ಲಿ ಮನಃಶಾಸ್ತ್ರ ವಿಭಾಗದ ಸ್ಥಾಪನೆ, ಮಕ್ಕಳ ಶಿಶುವಿಹಾರ ಸ್ಥಾಪನೆ ಮುಂತಾದ ಅನೇಕ ಕಾರ್ಯಗಳಿಂದ ಅವಿಸ್ಮರಣೀಯರೆನಿಸಿದ್ದಾರೆ.
ಎಂ. ವಿ. ಗೋಪಾಲಸ್ವಾಮಿ ಅವರು 1896ರ ಡಿಸೆಂಬರ್ 31ರಂದು ತಮಿಳುನಾಡಿನಲ್ಲಿ ಜನಿಸಿದರು. ಮದರಾಸಿನ ಪಾಚಿಯಪ್ಪ ಕಾಲೇಜಿನಲ್ಲಿ ಪದವಿ ಪಡೆದು, ಉನ್ನತ ಸಂಶೋಧನಾ ವ್ಯಾಸಂಗಕ್ಕೆ ಲಂಡನ್ನಿಗೆ ಹೋದರೆ ಭಾರತದಲ್ಲಿನ ಪದವಿಗೆ ಮಾನ್ಯತೆ ಇಲ್ಲ ಎಂಬ ಕಾರಣದಿಂದ ಅಲ್ಲಿ ಮತ್ತೊಂದು ಪದವಿ ಪಡೆದರು. ನಂತರ ಲಂಡನ್ನಿನ ಯೂನಿವರ್ಸಿಟಿ ಕಾಲೇಜಿನಲ್ಲಿ ಡಾ. ಚಾರಲ್ಸ್ ಸ್ಪಿಯರ್ಮನ್ ಅವರ ಮಾರ್ಗದರ್ಶನದಲ್ಲಿ ಮನಃಶಾಸ್ತ್ರದಲ್ಲಿ ಪಿಎಚ್.ಡಿ ಗಳಿಸಿದರು.ಯುನೈಟೆಡ್ ಕಿಂಗ್ಡಂನಿಂದ ಮೈಸೂರಿಗೆ ಬಂದ ಪ್ರೊ. ಎಂ. ವಿ. ಗೋಪಾಲಸ್ವಾಮಿ ಅವರು, ಮೈಸೂರು ವಿಶ್ಬವಿದ್ಯಾಲಯದಲ್ಲಿ 1924ರಲ್ಲಿ ದೇಶದಲ್ಲೇ ಎರಡನೆಯದಾದ ಮನಃಶಾಸ್ತ್ರ ವಿಭಾಗವನ್ನು ಪ್ರಾರಂಭಿಸಿದರು. ತಾವು ತಮಿಳಿಗರಾದರೂ ತಮ್ಮ ಮಕ್ಕಳನ್ನು ಕನ್ನಡದಲ್ಲೇ ಮಾತಾಡಬೇಕೆಂದು ಒತ್ತಾಯಿಸಿ ಮೈಸೂರು ರಾಜ್ಯವನ್ನು ಅಪಾರವಾಗಿ ಪ್ರೀತಿಸುತ್ತಾ ಬಂದರು.
ಗೋಪಾಲಸ್ವಾಮಿ ಅವರು ರೇಡಿಯೊ ಕುರಿತಾಗಿ ಮಾಡಿದ ಹವ್ಯಾಸಿ ಕಾರ್ಯ ಅವರಿಗೆ, ಅವರ ಎಲ್ಲ ಸಾಧನೆಗಳನ್ಮೂ ಮೀರಿದ ಜನಪ್ರಿಯತೆ ನೀಡಿತು. ಮೈಸೂರಿನಲ್ಲಿ ಅವರು ಬಾಡಿಗೆಗೆ ನೆಲೆಸಿದ್ದ ಸುಂದರವಾದ ‘ವಿಠಲ್ ವಿಹಾರ’ದಲ್ಲಿ ಅವರು 1936ರಲ್ಲಿ ತಮ್ಮ ಸ್ವಂತ ನಿಧಿಯಿಂದ ಭಾರತದ ಮೊದಲ ಖಾಸಗಿ ರೇಡಿಯೊ ಕೇಂದ್ರವನ್ನು ಸ್ಥಾಪಿಸಿದರು. ಅವರಿಗೆ ಆ ಕುರಿತಾಗಿ ಒಂದು ಹವ್ಯಾಸದ ಮನೋಭಾವ ಇತ್ತೇ ವಿನಃ ಅದೊಂದು ದೊಡ್ದ ವ್ಯವಸ್ಥೆಗೆ ನಾಂದಿ ಹಾಡಬಹುದು ಎಂಬ ಪರಿಕಲ್ಪನೆಯೂ ಇದ್ದಿರಲಿಕ್ಕಿಲ್ಲ.ಗೋಪಾಲಸ್ವಾಮಿ ಅವರು ತಮ್ಮ ಸ್ನೇಹಿತ, ರೇಡಿಯೋ ತಂತ್ರಜ್ಞ ಜಗದೀಶ್ ಅವರೊಂದಿಗೆ ಕೆಲವು ಕಾಲ ರೇಡಿಯೋ ಮಾಧ್ಯಮದಲ್ಲಿ ಪ್ರಯೋಗಗಳನ್ನು ನಡೆಸುತ್ತಿದ್ದರು. ನಂತರ ಖಾಸಗಿ ನಿಲ್ದಾಣವನ್ನು ಸ್ಥಾಪಿಸುವ ಆಲೋಚನೆಯೊಂದಿಗೆ ಟ್ರಾನ್ಸ್‌ಮಿಟರ್ ಅನ್ನು ತರಿಸಿಕೊಂಡರು.ಗೋಪಾಲಸ್ವಾಮಿ ಅವರು ರೇಡಿಯೋ ವ್ಯವಸ್ಥೆ ಸ್ಥಾಪಿಸುವಾಗ, ಕಂಬವು 60 ಅಡಿ ಉದ್ದವಾಗಿದ್ದು, ಅದರ ತುದಿಯಲ್ಲಿ ಆಂಟೆನಾವನ್ನು ಕಟ್ಟಬೇಕಾಗಿತ್ತು. ಮಲ್ಲ ಎಂಬ ಕೆಲಸದ ಆಳು ಈ ಸಾಹಸವನ್ನು ಮಾಡಿದರು. ಸುಮಾರು 10 ವರ್ಷ ವಯಸ್ಸಿನ ತಮ್ಮ ಮೊದಲ ಮಗನನ್ನು ಮೈಕ್‌ನಲ್ಲಿ ‘ಬಾ ಬಾ ಬ್ಲ್ಯಾಕ್ ಶೀಪ್’ ಎಂದು ಹಾಡಲು ಮನವೊಲಿಸಿದರು. ಹುಡುಗ ಭಯಭೀತನಾಗಿ ತನ್ನ ಸಾಲುಗಳನ್ನು ಮರೆತು ಕಣ್ಣೀರಿಟ್ಟರೆ, ಗೋಪಾಲಸ್ವಾಮಿ ‘ಯುರೇಕಾ, ಸಕ್ಸಸ್’ ಎಂದು ಸಂಭ್ರಮಿಸಿದರು. ಮೊದಲ ರೇಡಿಯೋ ಪ್ರಸಾರ ಯಶಸ್ವಿಯಾಗಿ ಭಿತ್ತರಗೊಂಡಿತ್ತು.
1935ರ ಸೆಪ್ಟೆಂಬರ್ 10ರಂದು ಭಾರತದ ಪ್ರಥಮ ಖಾಸಗಿ ರೇಡಿಯೋ ಕೇಂದ್ರ ಮೈಸೂರಿನ ಎಂ. ವಿ. ಗೋಪಾಲಸ್ವಾಮಿ ಅವರ ಮನೆಯಲ್ಲಿ ಹಲವು ಆತ್ಮೀಯರ ಒಡನಾಟದಲ್ಲಿ ಆರಂಭಗೊಂಡಿತು.
ಮೈಸೂರು ವಾಸುದೇವಾಚಾರ್ಯರು, ಎಚ್. ವಿ. ರಾಮರಾವ್ ಅವರ ವಯೊಲಿನ್ ವಾದನ ಮತ್ತು ವೆಂಕಟೇಶ್ ದೇವರ್ ಅವರ ಮೃದಂಗವಾದನದೊಂದಿಗೆಮೊದಲ ರೇಡಿಯೊ ಸಂಗೀತ ಕಚೇರಿ ನೀಡಿದರು.
ಅಂದಿನ ದಿನದಲ್ಲಿ ರಿಸೀವರ್ ಸೆಟ್‌ಗಳ ಬೆಲೆ ಸುಮಾರು 300 ರೂಪಾಯಿ. ಅಷ್ಟು ದೊಡ್ಡ ಮೊತ್ತದ ಹಣ ಕೊಟ್ಟು ಜನಸಾಮಾನ್ಯರಿಗೆ ಅದನ್ನು ಕೊಳ್ಳುವುದು ಸಾಧ್ಯವೇ ಇರಲಿಲ್ಲ. ಹೀಗಾಗಿ ಗೋಪಾಲಸ್ವಾಮಿ ಅವರು ಮೈಸೂರು ನಗರದ ಪಾರ್ಕ್‌ಗಳಲ್ಲಿ ರಿಸೀವರ್ ಸೆಟ್‌ಗಳನ್ನು ಅಳವಡಿಸಲು ವ್ಯವಸ್ಥೆ ಮಾಡಿದರು. ಆ ಮೂಲಕ ಮೈಸೂರಿನ ನಾಗರಿಕರು ಕಾರ್ಯಕ್ರಮಗಳನ್ನು ಆಲಿಸಲು ಅನುಕೂಲವಾಗುವಂತೆ ಧ್ವನಿವರ್ಧಕಗಳಿಗೆ ಸಂಪರ್ಕ ಕಲ್ಪಿಸಲಾಯಿತು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸದ್ಯೋಜಾತ ಭಟ್ಟ ಮಹಾನ್ ಇಚ್ಛಾಶಕ್ತಿಯ ದ್ಯೋತಕರು

Sat Dec 31 , 2022
   ಸದ್ಯೋಜಾತ ಭಟ್ಟರು ತಮ್ಮ ಹೆಸರಿನಂತೆಯೇ ಮಹಾನ್ ಇಚ್ಛಾಶಕ್ತಿಯ ದ್ಯೋತಕರು. ಅವರ ಪ್ರಸಿದ್ಧ ಪುಸ್ತಕಗಳಲ್ಲಿನ ‘ಕಾಲಯಾನ’ ಎಂಬ ಶೀರ್ಷಿಕೆ ಅವರನ್ನು ಕುರಿತು ಇನ್ನಷ್ಟು ಹೇಳುತ್ತದೆ. ಕಾಲಗಳ ನಡುವೆ ನಮ್ಮನ್ನು ಸಂಚಲಿಸುವಂತೆ ಮಾಡುವ ಅಪೂರ್ವತೆ ಅವರ ಬರಹಗಳಲ್ಲಡಗಿದೆ. ಫೇಸ್ಬುಕ್ ಅಂದರೆ ಮೂಗು ಮುರಿಯುವವರು ಮೊದಲು ನಮ್ಮ ಸದ್ಯೋಜಾತ ಭಟ್ಟರು ಅವರ ಫೇಸ್ಬುಕ್ ಅನ್ನು ಅಚ್ಚುಕಟ್ಟಾಗಿ ಬಾಳೆಲೆಯ ಮಾಡಿ ಅದರ ಮೇಲೆ ಪ್ರತಿನಿತ್ಯ ಬಡಿಸುತ್ತಿರುವ ಕಾಲಾತೀತ ಲೋಕದ ರಸಪಾಕವನ್ನು ಒಮ್ಮೆ ಸವಿಯಬೇಕು. ಅಪಾರ […]

Advertisement

Wordpress Social Share Plugin powered by Ultimatelysocial