ಮಾಧವನ ಪಾತ್ರದ ಗಟ್ಟಿತನ ನನಗೆ ಬಹಳ ಹಿಡಿಸಿತು

ಕಿರುತೆರೆಯ ಜನಪ್ರಿಯ ಧಾರಾವಾಹಿ ‘ಶ್ರೀರಸ್ತು ಶುಭಮಸ್ತು’ ಕಥೆ, ಪಾತ್ರ ಸೇರಿದಂತೆ ಸಾಕಷ್ಟು ವಿಶೇಷಗಳೊಂದಿಗೆ ವೀಕ್ಷಕರ ಗಮನ ಸೆಳೆಯುತ್ತಿದೆ. ಪಾತ್ರಗಳೂ ಪ್ರೇಕ್ಷಕರಿಗೆ ಇಷ್ಟವಾಗಿವೆ. ಅದರಲ್ಲೂ ಮಾಧವ ಪಾತ್ರ ಮಹಿಳೆಯರ ಹೃದಯ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಈ ಪಾತ್ರದಲ್ಲಿ ಅಭಿನಯಿಸಿರುವ ನಟ ಹಾಗೂ ರಂಗಭೂಮಿ ಕಲಾವಿದ ಅಜಿತ್‌ ಹಂದೆ ತಮ್ಮ ಪಾತ್ರದ ಜನಪ್ರಿಯತೆ ಹಾಗೂ ವೃತ್ತಿ ಬಗ್ಗೆ ಲವಲವಿಕೆಯೊಂದಿಗೆ ಮಾತನಾಡಿದ್ದಾರೆ.ಧಾರಾವಾಹಿ ಪ್ರಾರಂಭವಾಗಿ ಕೆಲವೇ ಕಂತುಗಳು ಮುಗಿದಿವೆ. ಆದರೆ ಕಡಿಮೆ ಅವಧಿಯಲ್ಲೇ ಮಾಧವ ಪಾತ್ರ ಪ್ರೇಕ್ಷಕರಿಗೆ ಹಿಡಿಸಿರುವುದು ಖುಷಿಯ ವಿಚಾರ. ಮುಂದೆಯೂ ಈ ಪಾತ್ರಕ್ಕೆ ಮತ್ತು ಧಾರಾವಾಹಿಗೆ ಜನರ ಅಭಿಮಾನ ಸಿಕ್ಕಿ ಪಾತ್ರ ಮತ್ತಷ್ಟು ಯಶಸ್ವಿಯಾಗಲಿ ಎಂದು ಕೇಳಿಕೊಳ್ಳುತ್ತೇನೆ. ಹೊರಾಂಗಣ ಶೂಟಿಂಗ್‌ ಇರಲಿ ಮತ್ತು ಯಾವುದೇ ಕಾರ್ಯಕ್ರಮಕ್ಕೆ ಹೋಗಲಿ ಜನ ನನ್ನನ್ನು ಪಾತ್ರದ ಮೂಲಕ ಗುರುತಿಸುತ್ತಿರುವುದು ನನಗೆ ಬಹಳ ಖುಷಿ ನೀಡಿದೆ. ಪಾತ್ರದ ಯಶಸ್ಸು ನಿರ್ಮಾಪಕರು ಮತ್ತು ನಿರ್ದೇಶಕರಿಗೆ ಸಲ್ಲಬೇಕು.ಹೌದು. ಪಾತ್ರಕ್ಕಿಂತ ನನ್ನ ನಿಜ ವಯಸ್ಸು ಸಣ್ಣದು. ನನಗೆ ನಾಲ್ಕು ವರ್ಷದ ಪುಟ್ಟ ಮಗ ಇದ್ದಾನೆ. ಆದರೆ ಕೂದಲು ಬೇಗ ಬೆಳ್ಳಗಾಗಿದೆ. ಅದಕ್ಕೆ ಕಪ್ಪು ಬಣ್ಣ ಹಚ್ಚಲು ನನಗೆ ಇಷ್ಟವಿಲ್ಲ. ಸ್ವಾಭಾವಿಕವಾಗಿರಲು ಬಯಸುತ್ತೇನೆ. ಎಲ್ಲೋ ಒಂದು ಕಡೆ ನಾನು ಈಗ ನಿರ್ವಹಿಸುತ್ತಿರುವ ಪಾತ್ರಕ್ಕೂ ಅದರ ಅಗತ್ಯತೆ ಇತ್ತು. ಈ ಪಾತ್ರಕ್ಕೆ ನೀವೇ ಮಾಡಬೇಕು, ನೀವೇ ಇದಕ್ಕೆ ಸೂಕ್ತ ಎಂಬ ಅವಕಾಶ ನನ್ನನ್ನರಸಿ ಬಂದಾಗ ತುಸು ಅಳುಕಿತ್ತು. ಆದರೆ ಕಥೆ ಹಾಗೂ ಪಾತ್ರದ ವಿವರಣೆ ಕೇಳಿದಾಗ ಇದರಲ್ಲಿ ಅಭಿನಯಿಸಲೇಬೇಕೆಂಬ ಉತ್ಸಾಹ ಹೆಚ್ಚಾಯ್ತು. ಅಭಿನಯಕ್ಕೆ ಇರುವ ಉತ್ತಮ ಸ್ಕೋಪ್‌ ಮತ್ತು ಮಾಧವ ಎಂಬ ಪ್ರಮುಖ ಪಾತ್ರದ ಗಟ್ಟಿತನ ನನಗೆ ಬಹಳ ಹಿಡಿಸಿತು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/de….

Please follow and like us:

Leave a Reply

Your email address will not be published. Required fields are marked *

Next Post

‘ಬನಾರಸ್’ ಚಿತ್ರದಲ್ಲಿ ಸಂಪೂರ್ಣ ಹಳೆ ಕಾಶಿಯನ್ನು ನೋಡಬಹುದು

Sat Jan 7 , 2023
ಜಯತೀರ್ಥ ನಿರ್ದೇಶನದ ‘ಬನಾರಸ್‌’ ಸಿನಿಮಾ ಕಾವ್ಯಾತ್ಮಕ ಪ್ರೇಮಕಥೆ ಎಂದು ಈ ಹಿಂದೆ ನಿರ್ದೇಶಕರೇ ಹೇಳಿದ್ದರು. ಈ ಚಿತ್ರದಲ್ಲಿ ಪ್ರೇಮಕಥೆಯ ಜತೆಗೆ ಇದುವರೆಗೂ ಕನ್ನಡಿಗರು ಸಿನಿಮಾಗಳಲ್ಲಿ ನೋಡಿರದ ಕಾಶಿಯನ್ನು ತೋರಿಸಲಾಗಿದೆ ಎಂದಿದ್ದಾರೆ ಜಯತೀರ್ಥ. ಬನಾರಸ್‌ ಹಿಂದೂಗಳ ಪವಿತ್ರ ಕ್ಷೇತ್ರ. ಜೀವನ ಪರ್ಯಂತ ಮಾಡಿದ ಪಾಪವನ್ನೆಲ್ಲ ಕಾಶಿಗೆ ಹೋಗಿ ಕಳೆದುಕೊಳ್ಳಬಹುದು ಎಂಬ ಅಭಿಪ್ರಾಯ ಹಲವರಲ್ಲಿದೆ. ಇಂತಹ ಒಂದು ಕ್ಷೇತ್ರದಲ್ಲಿ ಇಡೀ ಸಿನಿಮಾವನ್ನು ಜಯತೀರ್ಥ ಚಿತ್ರೀಕರಣ ಮಾಡಿದ್ದಾರೆ.’ಬನಾರಸ್‌ ಒಂದು ಸಾಂಸ್ಕೃತಿಕ ಶಕ್ತಿ ಕೇಂದ್ರ. ಈ […]

Advertisement

Wordpress Social Share Plugin powered by Ultimatelysocial