ಮಾಡಿದ್ದು ನಾನು ಹಲವಾರು ಮಹನೀಯರ ಕುರಿತು ವಿಚಾರ ಹುಡುಕಿ ಬರೀತಿರ್ತೀನಿ.

ಮಾಡಿದ್ದು
ನಾನು ಹಲವಾರು ಮಹನೀಯರ ಕುರಿತು ವಿಚಾರ ಹುಡುಕಿ ಬರೀತಿರ್ತೀನಿ.
ಅವರು ಎಷ್ಟೊಂದೆಲ್ಲಾ ಜೀವನದಲ್ಲಿ ಮಾಡಿದ್ರು ಅಂತ ಅಚ್ಚರಿ ಪಡ್ತೀನಿ.
ಅದೆಲ್ಲಾ ಮಾಡಿದ ಕ್ಷಣ, ಕೆಲ ತಾಸು, ಕೆಲವೊಮ್ಮೆ ಆ ದಿನ ಮನತುಂಬಿರುತ್ತೆ,
ನಂತರದಲ್ಲಿ ಅವರ ನೆನಪು ಮತ್ತೊಮ್ಮೆ ಇನ್ಯಾವಾಗಲೋ!
ನಾನು ಏನೋ ಯಾರದ್ದೋ ಬಗ್ಗೆ ಹೇಳಿದ್ದೀನಲ್ಲ ಅಂತ ಕೆಲ ಜನ ಕನಿಕರದಿಂದಲೋ,
ಅವರ ಬಗ್ಗೆ ಯಾವತ್ತೋ ಕೇಳಿದ್ವಿ ಅಂತಾನೋ, ಏನಕ್ಕೋ ಒಂದು ಲೈಕ್ ಅಂತಾರೆ,
ಒಂದಷ್ಟು ಜನ ಏನೋ ಕಣ್ಮುಂದೆ ಇದೆಯಲ್ಲಾ ಓದೋಣ ಅಂತ ಓದಿರ್ಲೂಬಹ್ದು!
ನನಗೆ ಬರೀಬೇಕು ಅಂತ ಅನ್ನಿಸ್ತು, ಅದಕ್ಕೇ ಬರೆದೆ, ಯಾರೋ ನೋಡಿದವರಿಗೆ
‘ನೀನು ಕಿಸಿದದ್ದನ್ನ ನೋಡಿದ್ದೇನೋ ಮಹರಾಯ’ ಅಂತ ಸೂಚಿಸ್ಬೇಕು ಅನ್ನಿಸ್ತು, ಹಾಗ್ ಮಾಡಿದ್ರು.
ಅಂದು ಮಹಾನ್ ಕೆಲಸ ಮಾಡಿದ ಮಹನೀಯರೂ ಅಷ್ಟೇ!
ಎಲ್ರೂ ಅಷ್ಟೇ! ಅವರವರು ಮಾಡಿದ್ದು ಘನವೋ ಲಘುವೋ, ಇಚ್ಛಿಸಿ ಮಾಡ್ತಾರೆ.
ಕೆಲವರು ಮಾತ್ರಾ ಮಾಡಿದ್ದನ್ನ ಅನುಭಾವಿಸಿ ಮಾಡಿರ್ತಾರೆ!
ಮಾಡಿದ್ದನ್ನ ಅನುಭವಿಸಿದ್ದು, ಅನುಭಾವಿಸಿದ್ದು ಮಾತ್ರಾನೇ ಪುಣ್ಯ,
ಉಳಿದದ್ದೆಲ್ಲಾ ಭ್ರಾಂತು.ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮಂಜುಳಾ ಹುಲ್ಲಹಳ್ಳಿ

Tue Mar 29 , 2022
  ಡಾ. ಮಂಜುಳಾ ಹುಲ್ಲಹಳ್ಳಿ ಅವರು ಜನಾನುರಾಗಿ ಕರ್ನಾಟಕ ಸರ್ಕಾರದ ಅಧಿಕಾರಿಗಳಾಗಿ, ಬರಹಗಾರ್ತಿಯಾಗಿ, ಸಾಂಸ್ಕೃತಿಕ ಸಂಘಟಕರಾಗಿ, ಇತಿಹಾಸ ತಜ್ಞರಾಗಿ ಹೆಸರಾಗಿದ್ದಾರೆ. ಮಾರ್ಚ್ 28 ಎಚ್. ಪಿ. ಮಂಜುಳಾ ಅವರ ಹುಟ್ಟುಹಬ್ಬ. ಇವರ ಹುಟ್ಟೂರು ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ಹುಲ್ಲಹಳ್ಳಿ. ತಂದೆ ಎಚ್. ಎಂ. ಪುಟ್ಟಸ್ವಾಮಪ್ಪ. ತಾಯಿ ವನಜಾಕ್ಷಮ್ಮ. ಪ್ರತಿಭಾನ್ವಿತರಾದ ಮಂಜುಳಾ ಅವರು ಉನ್ನತ ಸಾಧನೆಯೊಂದಿಗೆ ಎಂ. ಎ. ಕನ್ನಡಪದವಿಯನ್ನೂ; ಭಾಷಾ ವಿಜ್ಞಾನ, ಜಾನಪದ, ಶರಣ ಸಾಹಿತ್ಯ ವೈವಿಧ್ಯಗಳಲ್ಲಿ ಸ್ನಾತಕೋತ್ತರ […]

Advertisement

Wordpress Social Share Plugin powered by Ultimatelysocial