ಮದುವೆಯಾಗ್ತೇನೆಂದು ನಂಬಿಸಿ ದುಬಾರಿ ಗಿಫ್ಟನ್ನೂ ಪಡೆದು, ರೇಪ್​ ಮಾಡಿದ ಸ್ಯಾಂಡಲ್​ವುಡ್​ ನಟಿಯ ಅಣ್ಣ!

ಬೆಂಗಳೂರು: ಯುವತಿಯೊಬ್ಬಳನ್ನು ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಸ್ಯಾಂಡಲ್​ವುಡ್ ನಟಿಯ ಅಣ್ಣನ ವಿರುದ್ಧ ಎಫ್​ಐಆರ್​ ದಾಖಲಾಗಿದೆ.

ಪ್ರಸಿದ್ಧ ನಟಿಯ ಅಣ್ಣ ಕೀರ್ತಿಚಂದ್ರ ಎಂಬಾತನ‌ ವಿರುದ್ಧ ಯುವತಿ ದೂರು ನೀಡಿದ್ದು, ಆತನ ವಿರುದ್ಧ ಬೆಂಗಳೂರಿನ ಬಸವನಗುಡಿ‌ ಮಹಿಳಾ‌ ಠಾಣೆಯಲ್ಲಿ ಕೇಸ್ ದಾಖಲು ಮಾಡಲಾಗಿದೆ.

ಶಾದಿ ಡಾಟ್​ ಕಾಮ್​ ಮೂಲಕ 2021 ರ ಮೇ ನಲ್ಲಿ ಕೀರ್ತಿಚಂದ್ರನಿಗೆ ಯುವತಿ ಪರಿಚಯವಾಗಿತ್ತು. ನಂತರ ಪರಸ್ಪರ ಮೊಬೈಲ್​ ನಂಬರ್ ವಿನಿಮಯ ಮಾಡಿಕೊಂಡಿದ್ದರು. ಮದುವೆಯಾಗುವುದಾಗಿ ಯುವತಿಗೆ ಆತ ನಂಬಿಸಿದ್ದ.

ಇದಾದ ಬಳಿಕ ಕೀರ್ತಿಚಂದ್ರನ ಹುಟ್ಟುಹಬ್ಬಕ್ಕೆ ಯುವತಿ ಐ ಫೋನ್ ಗಿಫ್ಟ್ ನೀಡಿದ್ದಳು. ನಂತರ ಲ್ಯಾಪ್​ಟಾಪ್​ ಹಾಗೂ ಆಯಪಲ್ ವಾಚ್ ಕೂಡ ನೀಡಿದ್ದಳು. ನಂತರ ಖಾಸಗಿ ಹೋಟೆಲ್ ಒಂದಕ್ಕೆ ಕರೆಸಿಕೊಂಡಿದ್ದ ಕೀತ್ರಿಚಂದ್ರ ಅಲ್ಲಿ ತನ್ನ ಮೇಲೆ ಅತ್ಯಾಚಾರ ಮಾಡಿದ್ದಾಗಿ ಯುವತಿ ಆರೋಪಿಸಿದ್ದಾಳೆ.

ಇಷ್ಟಾದ ಬಳಿದ ಸಂಪರ್ಕಕ್ಕೆ ಸಿಗದೆ ಆತ ತಲೆಮರೆಸಿಕೊಂಡಿರುವುದಾಗಿ ದೂರಿರುವ ಯುವತಿ, ಅತ್ಯಾಚಾರದ ಕೇಸ್​ ದಾಖಲಿಸಿದ್ದಾಳೆ. ತನಿಖೆ ಮುಂದುವರೆದಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಹಿಜಾಬ್ ಗಲಾಟೆ: ಕರ್ನಾಟಕ ಹೈಕೋರ್ಟ್ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದ, ಮುಸ್ಲಿಂ ವಿದ್ಯಾರ್ಥಿಗಳು!

Wed Mar 16 , 2022
ಹಿಜಾಬ್ ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್ ತೀರ್ಪಿನ ವಿರುದ್ಧ ಕರ್ನಾಟಕದ ಮುಸ್ಲಿಂ ವಿದ್ಯಾರ್ಥಿಗಳು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಉಡುಪಿಯ ಆರು ಮುಸ್ಲಿಂ ವಿದ್ಯಾರ್ಥಿಗಳು ಈ ತೀರ್ಪನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದಾರೆ. ಮುಸ್ಲಿಂ ವಿದ್ಯಾರ್ಥಿನಿ ನಿಬಾ ನಾಜ್ ಪರವಾಗಿ ವಿಶೇಷ ರಜೆ ಅರ್ಜಿ ಸಲ್ಲಿಸಲಾಗಿದೆ. ಕರ್ನಾಟಕ ಶಿಕ್ಷಣ ಕಾಯಿದೆಯಲ್ಲಿ ವಿದ್ಯಾರ್ಥಿಗಳು ಕಡ್ಡಾಯವಾಗಿ ಸಮವಸ್ತ್ರ ಧರಿಸಲು ಅವಕಾಶವಿಲ್ಲ ಮತ್ತು ಹಿಜಾಬ್ ಧರಿಸುವ ಹಕ್ಕು ಖಾಸಗಿತನದ ಹಕ್ಕಿನ ವ್ಯಾಪ್ತಿಗೆ ಒಳಪಡುತ್ತದೆ ಎಂಬುದನ್ನು ಗಮನಿಸಲು ಹೈಕೋರ್ಟ್ […]

Advertisement

Wordpress Social Share Plugin powered by Ultimatelysocial