ಮಕ್ಕಳ ಕೂದಲು ಉದುರುವ ಸಮಸ್ಯೆಗೆ ಇಲ್ಲಿದೆ ʼಮದ್ದುʼ:

ಕೂದಲು ಉದುರುವುದು ಈಗ ಸಾಮಾನ್ಯ ಎನ್ನುವಂತಾಗಿದೆ. ಹದಗೆಟ್ಟ ಜೀವನಶೈಲಿ,‌ ಮಲೀನ ವಾತಾವರಣ ಇದಕ್ಕೆ ಕಾರಣವಾಗಿದೆ. ವಯಸ್ಕರಲ್ಲಿ ಕೂದಲು ಉದುರುವುದು ಸಾಮಾನ್ಯ. ಆದ್ರೆ ಇತ್ತೀಚಿನ ದಿನಗಳಲ್ಲಿ ಮಕ್ಕಳಿಗೂ ಈ ಸಮಸ್ಯೆ ಕಾಡ್ತಿದೆ. ಇದು ಪಾಲಕರನ್ನು ಚಿಂತೆಗೀಡು ಮಾಡಿದೆ.

ಮಕ್ಕಳ ಕೂದಲು ಉದುರುವ ಸಮಸ್ಯೆಗೆ ಇಲ್ಲಿದೆ ಪರಿಹಾರ.

ಮಕ್ಕಳಲ್ಲಿ ಭಾಗಶಃ ಕೂದಲು ಉದುರುವಿಕೆಯ ಸ್ಥಿತಿಯನ್ನು ಟ್ರೈಕೊಟಿಲೊಮೇನಿಯಾ ಎಂದು ಕರೆಯಲಾಗುತ್ತದೆ.

ಭ್ರಂಗರಾಜ್ ಎಣ್ಣೆಯಲ್ಲಿರುವ ಮೆಥನಾಲ್ ಎಂಬ ಪೋಷಕಾಂಶವು ಕೂದಲಿನ ಬೆಳವಣಿಗೆಯನ್ನು ಸರಳಗೊಳಿಸುತ್ತದೆ. ಈ ಎಣ್ಣೆಯಿಂದ ಕೂದಲಿಗೆ ಮಸಾಜ್ ಮಾಡುವುದ್ರಿಂದ ನೆತ್ತಿಯಲ್ಲಿ ರಕ್ತ ಪರಿಚಲನೆ ಸುಲಭವಾಗುತ್ತದೆ. ಕೂದಲು ಉದುರುವಿಕೆಯನ್ನು ತಡೆಯುತ್ತದೆ.

ನೆಲ್ಲಿಕಾಯಿ ವಿಟಮಿನ್-ಸಿ ಜೊತೆಗೆ ಕ್ವೆರ್ಸೆಟಿನ್ ನಂತಹ ಅನೇಕ ಪಾಲಿಫಿನೋಲಿಕ್ ಸಂಯುಕ್ತಗಳನ್ನು ಹೊಂದಿರುತ್ತದೆ. ಈ ಪೋಷಕಾಂಶಗಳಿಂದ ಸಮೃದ್ಧವಾಗಿರುವ ನೆಲ್ಲಿಕಾಯಿಯನ್ನು ಕೂದಲಿಗೆ ಹಾಕುವುದ್ರಿಂದ ಕೂದಲಿನ ಬೆಳವಣಿಗೆ ಸುಲಭವಾಗುತ್ತದೆ.

ಈರುಳ್ಳಿ ರಸವನ್ನು ಕೂದಲಿಗೆ ಹಾಕುವುದ್ರಿಂದ ಕೂದಲಿನ ಬೆಳವಣಿಗೆ ಹೆಚ್ಚಾಗುತ್ತದೆ. ಕೂದಲು ಒಡೆಯುವುದನ್ನು ತಡೆಯುತ್ತದೆ. ಮಕ್ಕಳಿಗೆ ಇದು ಪ್ರಯೋಜನಕಾರಿ.

ಬಾದಾಮಿ ಎಣ್ಣೆಯಲ್ಲಿ ವಿಟಮಿನ್ ಡಿ ಮತ್ತು ಇ ಹಾಗೂ ಕ್ಯಾಲ್ಸಿಯಂ, ಮೆಗ್ನೀಸಿಯಮ್ ಮತ್ತು ಕಬ್ಬಿಣವಿದೆ. ಬಾದಾಮಿ ಎಣ್ಣೆಯಲ್ಲಿ ಕಂಡುಬರುವ ಈ ಪೋಷಕಾಂಶಗಳು ಕೂದಲು ಉದುರದಂತೆ ನೋಡಿಕೊಳ್ಳುತ್ತವೆ. ಕೂದಲ ಬೆಳವಣಿಗೆಗೆ ಸಹಾಯ ಮಾಡುತ್ತವೆ.

ತೆಂಗಿನ ಎಣ್ಣೆ ಎಲ್ಲರ ಮನೆಯಲ್ಲೂ ಸಿಗುತ್ತದೆ. ಇದ್ರಿಂದ ನೆತ್ತಿಗೆ ಮಸಾಜ್ ಮಾಡಿದ್ರೆ ಕೂದಲು ಉದುರುವುದನ್ನು ತಡೆಯಬಹುದು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸರ್ ರಾಜ್ಯ ಮತ್ತೆ ಲಾಕ್​​ಡೌನ್ ಆಗತ್ತಾ? | CM Basavaraj Bommai | Lock Down | Speed News kannada |

Sun Jan 2 , 2022
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada Please follow and like us:

Advertisement

Wordpress Social Share Plugin powered by Ultimatelysocial