ಮಾನ್ವಿ: ಉದ್ಘಾಟನೆಯಾಗದ ಕಾಲೇಜು ಕಟ್ಟಡಗಳು

ಮಾನ್ವಿ: ಪಟ್ಟಣದ ಬಾಷುಮಿಯಾ ಸಾಹುಕಾರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ಕೊಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ 6 ಕಟ್ಟಡಗಳು ಉದ್ಘಾಟನೆ ಭಾಗ್ಯ ಕಾಣದಿರುವುದು ಸ್ಥಳೀಯರು ಹಾಗೂ ವಿದ್ಯಾರ್ಥಿಗಳ ಅಸಮಾಧಾನಕ್ಕೆ ಕಾರಣವಾಗಿದೆ.2016-17ನೇ ಸಾಲಿನಲ್ಲಿ ರೈಟ್ಸ್ ಸಂಸ್ಥೆ ವತಿಯಿಂದ ವಿಶೇಷ ಅಭಿವೃದ್ಧಿ ಯೋಜನೆ ಅಡಿ ₹1ಕೋಟಿ ವೆಚ್ಚದಲ್ಲಿ 5 ತರಗತಿ ಕೊಠಡಿಗಳು ಮತ್ತು ₹70 ಲಕ್ಷ ವೆಚ್ಚದಲ್ಲಿ 10 ಹೆಚ್ಚುವರಿ ತರಗತಿಗಳ ಕಟ್ಟಡ ನಿರ್ಮಾಣ ಪೂರ್ಣಗೊಂಡು 2 ವರ್ಷಗಳು ಗತಿಸಿವೆ.ಕೆಆರ್‌ಐಡಿಎಲ್ ಸಂಸ್ಥೆ ವತಿಯಿಂದ ₹1 ಕೋಟಿ ವೆಚ್ಚದಲ್ಲಿ 6 ತರಗತಿ ಕೊಠಡಿಗಳ ಕಟ್ಟಡ ವರ್ಷದ ಹಿಂದೆ ಪೂರ್ಣಗೊಂಡಿದ್ದರೂ ಹಸ್ತಾಂತರಗೊಂಡಿಲ್ಲ. 2019-20ನೇ ಸಾಲಿನ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ) ಅನುದಾನದಲ್ಲಿ ₹96 ಲಕ್ಷ ವೆಚ್ಚದಲ್ಲಿ 6 ತರಗತಿ ಕೊಠಡಿಗಳು ಮತ್ತು ₹51 ಲಕ್ಷ ವೆಚ್ಚದಲ್ಲಿ ಸಭಾಂಗಣ ಕಟ್ಟಡ ಕಾಮಗಾರಿಗಳು ಪೂರ್ಣಗೊಂಡು 6 ತಿಂಗಳ ಹಿಂದೆ ಹಸ್ತಾಂತರಗೊಂಡಿವೆ.ಕಳೆದ ತಿಂಗಳು ₹1.15 ಕೋಟಿ ವೆಚ್ಚದಲ್ಲಿ ಪ್ರಯೋಗಾಲಯ ಮತ್ತು 2 ಹೆಚ್ಚುವರಿ ತರಗತಿ ಕೊಠಡಿಗಳ ಕಟ್ಟಡ ಕಾಮಗಾರಿ ಪೂರ್ಣಗೊಂಡಿದೆ. ಆದರೆ ಸದರಿ ಕಟ್ಟಡಗಳ ಉದ್ಘಾಟನೆ ವಿಳಂಬವಾಗಿರುವುದು ಸ್ಥಳೀಯರ ಅಚ್ಚರಿಗೆ ಕಾರಣವಾಗಿದೆ.ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಕಾಲೇಜಿನಲ್ಲಿ ಬಿ.ಎ, ಬಿ.ಕಾಂ ಹಾಗೂ ಬಿ.ಎಸ್ಸಿ ಪದವಿ ತರಗತಿಗಳಲ್ಲಿ ಒಟ್ಟು 1,630 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಈ ಬಾರಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಪ್ರವೇಶ ಪಡೆದಿರುವ ಕಾರಣಹಳೆಯ ಕಟ್ಟಡದಲ್ಲಿ ವಿದ್ಯಾರ್ಥಿಗಳಿಗೆ ಕೊಠಡಿಗಳ ಕೊರತೆ ಉಂಟಾಗಿದೆ.ವಿಭಾಗವಾರು ಪ್ರತ್ಯೇಕ ತರಗತಿಗಳ ನಿರ್ವಹಣೆಗೆ ಸಮಸ್ಯೆಯಾಗಿದೆ. ಹೊಸ ಕಟ್ಟಡಗಳ ಉದ್ಘಾಟನೆಯಾದರೆ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ವಿಭಾಗದ ಪದವಿ ತರಗತಿಗಳ ಪ್ರತ್ಯೇಕ ನಿರ್ವಹಣೆಗೆ ಸಾಧ್ಯ. ಕಾಲೇಜಿನ ಪ್ರಾಂಶುಪಾಲರು ಹಾಗೂ ಕಾಲೇಜು ಅಭಿವೃದ್ಧಿ ಮಂಡಳಿ ಪದಾಧಿಕಾರಿಗಳು ನೂತನ ಕಟ್ಟಡಗಳನ್ನು ಶೀಘ್ರ ಉದ್ಘಾಟನೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ವಿದ್ಯಾರ್ಥಿಗಳು ಮನವಿಮಾಡಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕೇಶವ ನಿಧಿ ತೀರ್ಥ ಸ್ವಾಮೀಜಿ ಲಿಂಗೈಕ್ಯ

Sun Jan 30 , 2022
ಮುಳಬಾಗಿಲು: ನಗರದ ಶ್ರೀಪಾದರಾಜರ ಮಠದ ಪೀಠಾಧ್ಯಕ್ಷ ಕೇಶವನಿಧಿ ತೀರ್ಥ ಶ್ರೀಪಾದಂ ಅವರು ಶುಕ್ರವಾರ ಹರಿಪಾದಸೇರಿದರು.ಬೆಂಗಳೂರಿನ ಚಾಮರಾಜಪೇಟೆಯ ಶ್ರೀಮಠದಲ್ಲಿ ಪಾರ್ಥಿವ ಶರೀರದ ದರ್ಶನಕ್ಕೆ ಇಟ್ಟು ನಂತರ ಮುಳಬಾಗಿಲು ಮೂಲ ಮಠದ ಹೊರವಲಯದ ನರಸಿಂಹತೀರ್ಥದಲ್ಲಿ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು.ಮಧ್ಯಾಹ್ನ ಬೃಂದಾವನ ಕಾರ್ಯಕ್ರಮ ನಡೆಯಿತು. ಮಠದ ಶ್ರೀಗಳಾದ ಸುಜಯನಿಧಿ ತೀರ್ಥರು ಬೃಂದಾವನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.ಕೇಶವನಿಧಿ ತೀರ್ಥ ಅವರ ಪೂರ್ವಾಶ್ರಮದ ಹೆಸರು ಕೆ. ಕೇಶವಮೂರ್ತಿ. ಬಿ.ಇ ಪದವೀಧರರಾಗಿದ್ದ ಶ್ರೀಗಳು 2009ರ ಮಾರ್ಚ್‌ 12ರಂದು ಮಠಾಧೀಶರಾಗಿ […]

Advertisement

Wordpress Social Share Plugin powered by Ultimatelysocial