ಮೊದಲ ರಾತ್ರಿ ಮುಗಿಸಿ ಬೆಳಗಿನ ಜಾವವೇ ಎಸ್ಕೇಪ್​ ಆದ ವರ: ನಂತ್ರ ವಧುವಿಗೆ ತಿಳಿದಿದ್ದು ಘೋರ ಸತ್ಯ!

ಅಡೂರು: ಮದುವೆಯಾಗಿ ಮೊದಲ ರಾತ್ರಿಯ ಬಳಿಕ ವಧುವಿನ ಮನೆಯಲ್ಲಿದ್ದ ಚಿನ್ನಾಭರಣ ಮತ್ತು ಹಣವನ್ನು ಕದ್ದು ಪರಾರಿಯಾಗಿದ್ದ ವರನನ್ನು ಪೊಲೀಸರು ಬಂಧಿಸಿದ್ದಾರೆ.ಕೇರಳದ ಕಾಯಂಕುಲಂ ನಿವಾಸಿ ಅಜರುದ್ದೀನ್​ ರಶೀದ್​ (30) ಎಂಬಾತನನ್ನು ಕೇರಳದ ಅಡೂರು ಪೊಲೀಸರು ಬಂಧಿಸಿದ್ದು, 30 ಸವರನ್​ ಚಿನ್ನ ಮತ್ತು 2.75 ಲಕ್ಷ ರೂಪಾಯಿ ನಗದನ್ನು ವಶಕ್ಕೆ ಪಡೆದುಕೊಂಡಿದ್ದಾರೆ.ಅಜರುದ್ದೀನ್​ ಪಹಕುಲಂ ಮೂಲದ ಮಹಿಳೆಯನ್ನು ಜನವರಿ 30ರಂದು ಎಸ್​.ಎಚ್​.ಆಡಿಟೋರಿಯಂನಲ್ಲಿ ಮದುವೆಯಾಗಿದ್ದ. ಸಂಪ್ರದಾಯದಂತೆ ವಧುವಿನ ಮನೆಯುಲ್ಲಿ ಮೊದಲ ರಾತ್ರಿ ನಡೆದಿತ್ತು. ಬೆಳಗಿನ ಜಾವ 3 ಗಂಟೆ ಸುಮಾರಿಗೆ ಸ್ನೇಹಿತನಿಗೆ ಅಪಘಾತವಾಗಿದೆ ಎಂದು ಅಜರುದ್ದೀನ್​ ಮನೆ ಬಿಟ್ಟಿದ್ದಾನೆ.ಇದಾದ ಬಳಿಕ ಆತನಿಗೆ ಫೋನ್​ ಮಾಡಿದರೆ ಸ್ವಿಚ್​ ಆಫ್​ ಅಂತಾ ಕೇಳಿಬಂದಿದೆ. ಇದೇ ಸಂದರ್ಭದಲ್ಲಿ ವಧುವಿನ ಮನೆಯಲ್ಲಿ 30 ಸವರನ್​ ಚಿನ್ನ ಮತ್ತು 2.75 ಲಕ್ಷ ರೂ. ಹಣ ಕಾಣೆಯಾಗಿರುವುದು ತಿಳಿಯುತ್ತದೆ. ಇದರಿಂದ ಅನುಮಾನಗೊಂಡ ವಧುವಿನ ಮನೆಯವರು ತಕ್ಷಣ ದೂರು ಸಹ ದಾಖಲಿಸುತ್ತಾರೆ.ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಇಳಿಯುವ ಅಡೂರು ಪೊಲೀಸರಿಗೆ ಆರೋಪಿ ಅಜರುದ್ದೀನ್​ ಕುರಿತು ಸ್ಫೋಟಕ ಸಂಗತಿಯೊಂದು ತಿಳಿಯುತ್ತದೆ. ಎರಡು ವರ್ಷಗಳ ಹಿಂದೆ ಅಲಪ್ಪುಳದ ಚೆಪ್ಪಾಡ್​​ ಎಂಬಲ್ಲಿ ಯುವತಿಯೊಬ್ಬಳನ್ನುಮದುವೆಯಾಗಿದ್ದ ಎಂಬ ಸಂಗತಿ ಬಯಲಾಗುತ್ತದೆ. ಆತ ಮೊದಲ ಪತ್ನಿಯೊಂದಿಗೆ ಇದ್ದಾನೆ ಎಂಬ ಮಾಹಿತಿ ತಿಳಿದ ಪೊಲೀಸರು ತಕ್ಷಣ ಕಾರ್ಯಾಚರಣೆ ನಡೆಸಿ, ಆತನನ್ನು ಬಂಧಿಸಿದ್ದು, ಕೋರ್ಟ್​ ಮುಂದೆ ಹಾಜರುಪಡಿಸಿದ್ದಾರೆ. ಇತ್ತ ಘನ ಘೋರ ಸತ್ಯ ತಿಳಿದ ವಧು ಮದುವೆ ಆರಂಭದಲ್ಲೇ ಈ ರೀತಿ ಆಯ್ತಲ್ಲ ಅಂತಾ ಆಘಾತಕ್ಕೆ ಒಳಗಾಗಿದ್ದಾಳೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಆರ್ಟಿಕಲ್ 370 ರದ್ದತಿ ಬಳಿಕ ಕಾಶ್ಮೀರದಲ್ಲಿ ಭಾರಿ ಸಂಖ್ಯೆಯ ಉಗ್ರರ ಹತ್ಯೆ : ಮಾಹಿತಿ

Wed Feb 2 , 2022
ಶ್ರೀನಗರ : ಜಮ್ಮು ಮತ್ತು ಕಾಶ್ಮೀರದಲ್ಲಿ ಆರ್ಟಿಕಲ್ 370 ರದ್ದತಿ ನಂತರ 439 ಭಯೋತ್ಪಾದಕರ ಹತ್ಯೆಯಾಗಿದೆ ಎಂದು ರಾಜ್ಯಸಭೆಗೆ ಮಾಹಿತಿ ನೀಡಲಾಗಿದೆ.ರಾಜ್ಯಸಭೆಯಲ್ಲಿ ರಾಜ್ಯಖಾತೆಯ ಸಚಿವ ನಿತ್ಯಾನಂದ ರೇ ಅವರು ಈ ಮಾಹಿತಿ ನೀಡಿದ್ದು, ಸೇನಾಪಡೆಗಳು ಕಾರ್ಯಾಚರಣೆ ನಡೆಸಿ 439 ಉಗ್ರರನ್ನು ಹತ್ಯೆಗೈದಿರುವ ಬಗ್ಗೆ ವಿವರ ನೀಡಿದರು.ಈ ಅವಧಿಯಲ್ಲಿ 98 ನಾಗರಿಕರು ಮತ್ತು 109 ಭದ್ರತಾ ಸಿಬ್ಬಂದಿ ಪ್ರಾಣ ಕಳೆದುಕೊಂಡಿದ್ದಾರೆ ಮತ್ತು 541 ಭಯೋತ್ಪಾದಕ ಘಟನೆಗಳು ವರದಿಯಾಗಿವೆ ಎಂದು ತಿಳಿಸಿದರು.ಓರ್ವ ಉಗ್ರನ […]

Advertisement

Wordpress Social Share Plugin powered by Ultimatelysocial