ಮದ್ವೆ ಆಸೆ ಹುಟ್ಟಿಸಿ ಕೈಕೊಟ್ಟ ವಿಚ್ಛೇದಿತ ಮಹಿಳೆಗಾಗಿ ಮಾಡಬಾರದ್ದು ಮಾಡಿಬಿಟ್ಟ ಮಂಡ್ಯದ ಯುವಕ

 

ನಗರದ ಕುವೆಂಪುನಗರ ಬಡಾವಣೆಯ ಡಿಟಿಡಿಸಿ ಕೊರಿಯರ್​ ಅಂಗಡಿಯಲ್ಲಿ ಕಳೆದ ಸೋಮವಾರ ಸಂಜೆ ನಡೆದಿದ್ದ ಮಿಕ್ಸರ್​ ಗ್ರೈಂಡರ್​ ಸ್ಫೋಟ ಪ್ರಕರಣಕ್ಕೆ ಸ್ಫೋಟಕ ತಿರುವು ಸಿಕ್ಕಿದೆ. ವಿಚ್ಛೇದಿತ ಮಹಿಳೆ ಮೇಲಿನ ಪ್ರೀತಿಗಾಗಿ ಹಾಗೂ ಆಕೆಯಿಂದಾದ ಮೋಸಕ್ಕೆ ಪ್ರತಿಕಾರ ತೀರಿಸಿಕೊಳ್ಳಲು ಪಾಗಲ್​ ಪ್ರೇಮಿಯೊಬ್ಬ ಮಾಡಿದ ಅವಾಂತರಕ್ಕೆ ಅಮಾಯಕ ಕುಟುಂಬ ಕಣ್ಣೀರು ಹಾಕುತ್ತಿದೆ.ಪಾಗಲ್​ ಪ್ರೇಮಿ ಮತ್ತು ಆತನನ್ನು ವಂಚಿಸಿದ್ದ ಮಹಿಳೆ ಇಬ್ಬರೂ ಈಗ ಪೊಲೀಸರ ವಶದಲ್ಲಿದ್ದಾರೆ.ಹಾಸನದ ಕುವೆಂಪುನಗರ ಬಡಾವಣೆಯ 41 ವರ್ಷ ವಯಸ್ಸಿನ ವಿಚ್ಛೇದಿತ ಮಹಿಳೆ ಈ ದುರಂತ ಪ್ರಕರಣದ ಕೇಂದ್ರಬಿಂದು. ಈಕೆ ವರಾನ್ವೇಷಣೆಗಾಗಿ ಮ್ಯಾಟ್ರಿಮೋನಿ ವೆಬ್​ಸೈಟ್​ವೊಂದರಲ್ಲಿ ತನ್ನ ಫೋಟೊ ಮತ್ತು ವಿವರ ಪ್ರಕಟಿಸಿದ್ದಳು. ಇದನ್ನು ಗಮನಿಸಿದ ಮೂಲತಃ ಮಂಡ್ಯ ಜಿಲ್ಲೆಯ, ಹಾಲಿ ಬೆಂಗಳೂರಿನಲ್ಲಿ ವಾಸವಾಗಿರುವ ಅನೂಪ್​ಕುಮಾರ್​, ಮಹಿಳೆಯನ್ನು ಮೆಚ್ಚಿಕೊಂಡು ಮದುವೆ ಪ್ರಸ್ತಾಪ ಮುಂದಿಟ್ಟಿದ್ದ. ಈ ಪ್ರಸ್ತಾಪಕ್ಕೆ ಮೊದಲು ಒಪ್ಪಿಗೆ ಸೂಚಿಸಿ ಆತನೊಂದಿಗೆ ಕೆಲ ದಿನಗಳ ಕಾಲ ಪ್ರೀತಿಯಿಂದ ಓಡಾಡಿದ್ದಳು.ವಿವಿಧ ಕಾರಣ ಹೇಳಿಕೊಂಡು ಅನೂಪ್​ ಕುಮಾರ್​ನಿಂದ ಲಕ್ಷಾಂತರ ರೂ. ವಸೂಲಿ ಮಾಡಿದ್ದಳು. ಆದರೆ ಕೆಲವೇ ದಿನಗಳಲ್ಲಿ ಅನೂಪ್​ನ ಪ್ರೀತಿ ಮತ್ತು ಮದುವೆ ಪ್ರಸ್ತಾಪ ನಿರಾಕರಿಸಿ ದೂರವಾಗಿದ್ದಳು ಎನ್ನಲಾಗಿದೆ. ಇದರಿಂದ ತೀವ್ರ ಹತಾಶೆಗೆ ಒಳಗಾದ ಅನೂಪ್​ಕುಮಾರ್​, ತಾನು ಕೊಟ್ಟಿದ್ದ ಹಣ ವಾಪಸ್​ ಕೇಳಿದಾಗ ಮಹಿಳೆ ಏನೇನೊ ನೆಪ ಹೇಳಿ ನುಣಚಿಕೊಂಡಿದ್ದಳು. ಈ ನಡುವೆ ಹಾಸನಕ್ಕೂ ಬಂದ ಅನೂಪ್​ ಕುಮಾರ್​, ಮಹಿಳೆಯ ಮನೆ ಎದುರು ಗಲಾಟೆ ಮಾಡಿದ್ದ. ಆತನ ವಿರುದ್ಧ ಪೊಲೀಸ್​ ಠಾಣೆ ಮತ್ತು ರಾಜ್ಯ ಮಹಿಳಾ ಆಯೋಗಕ್ಕೂ ಮಹಿಳೆ ದೂರು ನೀಡಿದ್ದಳು. ಇದು ಅನೂಪ್​ನನ್ನು ಮತ್ತಷ್ಟು ಕೆರಳಿಸಿತ್ತು. ತನಗೆ ಮೋಸ ಮಾಡಿದವಳಿಗೆ ಒಂದು ಗತಿ ಕಾಣಿಸಲೇಬೇಕೆಂದು ನಿರ್ಧರಿಸಿದ.ವಿಚ್ಛೇದಿತ ಮಹಿಳೆಗೆ ಮೊದಲು ಸೀರೆ ಕೊರಿಯರ್​ ಮಾಡಿದ ಅನೂಪ್​, ಎರಡನೇ ಬಾರಿ ಎಲ್​ಇಡಿ ಬಲ್ಬ್​ಗಳ ಸೀರಿಯಲ್​ ಸೆಟ್​ ಕಳುಹಿಸಿದ್ದ. ಪಾರ್ಸೆಲ್​ನಲ್ಲಿ ವಸ್ತುಗಳ ಜತೆಗೆ ಹಣವನ್ನೂ ಇಟ್ಟು ಕಳುಹಿಸಿದ್ದ ಎಂಬುದು ವಿಚಾರಣೆ ವೇಳೆ ತಿಳಿದು ಬಂದಿದೆ. ಮೂರನೇ ಬಾರಿಗೆ ಮಿಕ್ಸರ್​ ಗ್ರೈಂಡರ್​ನಲ್ಲಿ ಡಿಟೋನೇಟರ್​ ಇಟ್ಟು ಕಳಿಸಿದ್ದ. ಆಕೆ ಸಾಯಬೇಕು, ಇಲ್ಲವೇ ಆಕೆಯ ಸೌಂದರ್ಯ ವಿರೂಪಗೊಳ್ಳಬೇಕು ಎಂಬುದು ಆತನ ಉದ್ದೇಶವಾಗಿತ್ತು.ಬೆಂಗಳೂರಿನ ಪೀಣ್ಯ ಶಾಖೆ ನಾಗಸಂದ್ರದಿಂದ ಕಳುಹಿಸಿದವರ ವಿಳಾಸ ಇಲ್ಲದ ರೊಸಾರಿಯೊ ಗ್ರೈಂಡರ್​ ಹೆಸರಿನ ಮಿಕ್ಸರ್​ ಗ್ರೈಂಡರ್​ ಬಾಕ್ಸ್​ ಹಾಸನದ ಮಹಿಳೆಯ ಮನೆ ವಿಳಾಸ ಹೊತ್ತು ಡಿ.17ರಂದು ಹಾಸನದ ಡಿಟಿಡಿಸಿ ಅಂಗಡಿಗೆ ಬಂದಿದ್ದು, ಅದೇ ದಿನ ಡೆಲಿವರಿ ಬಾಯ್​ ಮಹಿಳೆಯ ಮನೆಗೆ ಕೊಟ್ಟು ಬಂದಿದ್ದ.ಕಳುಹಿಸಿರುವವರ ವಿಳಾಸ ಇಲ್ಲದೆ ಬಂದಿದ್ದ ಮೊದಲ ಎರಡು ಪಾರ್ಸೆಲ್​ಗಳನ್ನು ಸ್ವೀಕರಿಸಿದ್ದ ಮಹಿಳೆ ಅವುಗಳನ್ನು ತೆರೆಯುವ ಸಂದರ್ಭದಲ್ಲಿ ವಿಡಿಯೋ ರೆಕಾರ್ಡ್​ ಮಾಡಿಕೊಂಡಿದ್ದಳು. ಅದೇ ರೀತಿ ಮೂರನೇ ಬಾರಿ ಬಂದಿದ್ದ ಮಿಕ್ಸರ್​ ಗ್ರೈಂಡರ್​ ಬಾಕ್ಸ್​ ತೆರೆದು ವಿಡಿಯೋ ಮಾಡಿಕೊಂಡಿದ್ದಳು. ಆದರೆ ಮಿಕ್ಸರ್ ಗ್ರೈಂಡರ್​ ಬಳಸುವ ಸಾಹಸಕ್ಕೆ ಹೋಗಿರಲಿಲ್ಲ. ಒಂದು ವಾರ ಮಿಕ್ಸರ್​ ಗ್ರೈಂಡರ್​ರನ್ನು ಬಾಕ್ಸ್​ ಸಹಿತ ಹಾಗೇ ಇಟ್ಟಿದ್ದ ಮಹಿಳೆಯು ಡಿ.26ರಂದು ಡಿಟಿಡಿಸಿ ಕೊರಿಯರ್​ ಅಂಗಡಿಗೆ ಬಂದು ‘ಈ ಕೊರಿಯರ್​ ನನಗೆ ಬೇಡ ವಾಪಸ್​ ಕಳುಹಿಸಿ’ ಎಂದು ಹಿಂದಿರುಗಿಸಿದ್ದಳು. ವಾಪಸ್​ ಕಳುಹಿಸಲು 300 ರೂ. ಶುಲ್ಕ ಕೇಳಿದ್ದಕ್ಕೆ, ‘ನನ್ನ ಬಳಿ ಹಣ ಇಲ್ಲ, ಏನಾದರೂ ಮಾಡಿಕೊಳ್ಳಿ’ ಎಂದು ಮಿಕ್ಸಿಯನ್ನು ಅಲ್ಲೇ ಬಿಟ್ಟು ಹೋಗಿದ್ದಳು.ತುಂಬು ಗರ್ಭಿಣಿ ಪತ್ನಿಯನ್ನು ಆಸ್ಪತ್ರೆಗೆ ಕರೆದೊಯ್ಯುವ ತರಾತುರಿಯಲ್ಲಿದ್ದ ಕೊರಿಯರ್​ ಅಂಗಡಿ ಮಾಲೀಕ ಶಶಿಕುಮಾರ್​, ಕೊರಿಯರ್​ ಬಾಕ್ಸ್​ ಎತ್ತಿಡಲು ಹೋದಾಗ ಬಾಕ್ಸ್​ ಮೊದಲೇ ತೆರೆದಿದ್ದ ಕಾರಣ ಮಿಕ್ಸರ್​ ಗ್ರೈಂಡರ್​ ಜಾರಿ ಕೆಳಗೆ ಬಿದ್ದು ಸ್ಫೋಟಗೊಂಡಿದೆ. ಇದರಿಂದ ಶಶಿಕುಮಾರ್​ನ ಬಲಗೈನ ಎರಡು ಬೆರಳುಗಳು ಸಂಪೂರ್ಣ ಪುಡಿ ಆಗಿವೆ. ಯಾರದೋ ತಪ್ಪು, ಯಾರದೋ ದ್ವೇಷಕ್ಕೆ ಅಮಾಯಕ ಶಶಿಕುಮಾರ್​ ತೀವ್ರವಾಗಿ ಗಾಯಗೊಂಡು ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಂತಾಗಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/de…

Please follow and like us:

Leave a Reply

Your email address will not be published. Required fields are marked *

Next Post

ಒಲಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಲು ಸಿದ್ಧರಾಗಿದ್ದ ರೈತರ ʻರಾಣಿ ಮಾʼ

Thu Dec 29 , 2022
  ಸುಸ್ಥಿತಿಯ ಬಂಗಾಳಿ ಕುಟುಂಬದಲ್ಲಿ ಜನಿಸಿದ ಇಳಾ ಮಿತ್ರಾ ಅವಿಭಜಿತ ಭಾರತದಲ್ಲಿ ಮೆಚ್ಚುಗೆ ಪಡೆದ ಕ್ರೀಡಾಪಟುವಾಗಬೇಕೆಂಬ ಕನಸನ್ನು ಹೊಂದಿದ್ದವರು. ಆಕೆ ಕನಸಿಗೆ ನೀರೆರೆದಿದ್ದು ಚಿಕ್ಕ ವಯಸ್ಸಿನಿಂದಲೂ ಪ್ರೋತ್ಸಾಹಿಸಿದ್ದ ಆಕೆ ತಂದೆ ಮಾತ್ರ.ಅವಿಭಜಿತ ಬಂಗಾಳದ ಇತಿಹಾಸದಲ್ಲಿ, ಇಳಾ ಆ ಪ್ರದೇಶದ ರೈತರ ರಾಣಿ ಮಾ ಅಥವಾ ರಾಣಿ ತಾಯಿ ಎಂದು ಗುರುತಿಸಲ್ಪಟ್ಟಿದ್ದಾರೆ.1925 ರಲ್ಲಿ ಕಲ್ಕತ್ತಾದಲ್ಲಿ (ಕೋಲ್ಕತ್ತಾ) ಜನಿಸಿದ ಇಳಾ ಆರು ಮಕ್ಕಳಲ್ಲಿ ಹಿರಿಯಳು. ಆಕೆಯ ತಂದೆ, ಬಂಗಾಳದ ಅಕೌಂಟೆಂಟ್ ಜನರಲ್ ನಾಗೇಂದ್ರನಾಥ್ […]

Advertisement

Wordpress Social Share Plugin powered by Ultimatelysocial