ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಕಡ್ಡಾಯಗೊಳಿಸಿ ಆದೇಶ ಹೊರಡಿಸಲಾಗಿದೆ.

 

ನವದೆಹಲಿ, ಏಪ್ರಿಲ್ 22; ನವದೆಹಲಿಯಲ್ಲಿ ಹೊಸ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆಯಾಗುತ್ತಿರುವ ಹಿನ್ನಲೆಯಲ್ಲಿ ಸೋಂಕು ಹರಡುವಿಕೆ ತಡೆಗೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಕಡ್ಡಾಯಗೊಳಿಸಿ ಆದೇಶ ಹೊರಡಿಸಲಾಗಿದೆ.

ಶುಕ್ರವಾರ ದೆಹಲಿ ಸರ್ಕಾರ ಈ ಕುರಿತು ಆದೇಶ ಹೊರಡಿಸಿದೆ. ಸಾರ್ವಜನಿಕ ಸ್ಥಳದಲ್ಲಿ ಜನರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಒಂದು ವೇಳೆ ಮಾಸ್ಕ್ ಧರಿಸದಿದ್ದರೆ 500 ರೂ. ದಂಡ ವಿಧಿಸಲಾಗುತ್ತದೆ ಎಂದು ಆದೇಶದಲ್ಲಿ ಎಚ್ಚರಿಸಲಾಗಿದೆ.

ಖಾಸಗಿ ಕಾರುಗಳಲ್ಲಿ ಸಂಚಾರ ನಡೆಸುವ ಜನರು ಮಾಸ್ಕ್ ಧರಿಸುವುದಕ್ಕೆ ವಿನಾಯಿತಿ ನೀಡಲಾಗಿದೆ. ಈಗಾಗಲೇ ಹಲವು ರಾಜ್ಯಗಳು ಮಾಸ್ಕ್ ಕಡ್ಡಾಯಗೊಳಿಸಿದ್ದು, ಈಗ ಈ ಪಟ್ಟಿಗೆ ದೆಹಲಿ ಸೇರಿದೆ.

ನೋಯ್ಡಾದಲ್ಲಿ ಈಗಾಗಲೇ ಮಾಸ್ಕ್ ಧರಿಸುವುದು ಕಡ್ಡಾಯಗೊಳಿಸಲಾಗಿದೆ. ಶುಕ್ರವಾರ ಮಾಸ್ಕ್ ಧರಿಸದ 100 ಜನರಿಗೆ ದಂಡವನ್ನು ಸಹ ವಿಧಿಸಲಾಗಿದೆ. ಬುಧವಾರ ದೆಹಲಿ ಲೆಫ್ಟಿನೆಂಟ್ ಗೌರ್ನರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಲು ತೀರ್ಮಾನ ಕೈಗೊಳ್ಳಲಾಗಿತ್ತು.

ಇಂದು ಸರ್ಕಾರ ಈ ಕುರಿತು ಅಧಿಕೃತ ಆದೇಶ ಹೊರಡಿಸಿದೆ. ದೆಹಲಿ ಸರ್ಕಾರ ಶಾಲೆಗಳಲ್ಲಿ ಕೋವಿಡ್ ಹರಡುವಿಕೆ ತಡೆ ಬಗ್ಗೆ ಹೆಚ್ಚಿನ ಗಮನ ಹರಿಸುತ್ತಿದೆ. ಶಾಲೆಗಳಲ್ಲಿ ಅನುಸರಿಸಬೇಕಾದ ಮಾರ್ಗಸೂಚಿಯನ್ನು ಶುಕ್ರವಾರ ಬಿಡುಗಡೆ ಮಾಡಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಅಮೇರಿಕನ್ ಕಲಾತ್ಮಕ ಪಿಯಾನೋ ವಾದಕ ನಿಕೋಲಸ್ ಏಂಜೆಲಿಚ್ ನಿಧನರಾದರು!

Fri Apr 22 , 2022
ಪ್ರಣಯ ಮತ್ತು ಸಮಕಾಲೀನ ರೆಪರ್ಟರಿ ಎರಡರಲ್ಲೂ ಉತ್ತಮ ಸಾಧನೆ ಮಾಡಿದ ಅಮೇರಿಕನ್ ಪಿಯಾನೋ ವಾದಕ ನಿಕೋಲಸ್ ಏಂಜೆಲಿಚ್ ಅವರು ಸೋಮವಾರ ತಮ್ಮ 51 ನೇ ವಯಸ್ಸಿನಲ್ಲಿ ನಿಧನರಾದರು ಎಂದು ಅವರ ಏಜೆಂಟ್ ಘೋಷಿಸಿದರು, ಇದು ಶಾಸ್ತ್ರೀಯ ಸಂಗೀತದ ಜಗತ್ತಿನಲ್ಲಿ ಗೌರವದ ಸುರಿಮಳೆಯನ್ನು ಪ್ರೇರೇಪಿಸಿತು. “ಹುಟ್ಟಿನಿಂದ ಅಮೇರಿಕನ್, ಆದರೆ ಪ್ಯಾರಿಸ್ನಲ್ಲಿ ವಾಸಿಸುತ್ತಿದ್ದ ನಿಕೋಲಸ್ ಉಸಿರಾಟದ ಕಾಯಿಲೆಯಿಂದ ಬಳಲುತ್ತಿದ್ದರು” ಎಂದು ಕಲಾತ್ಮಕ ಸಂಸ್ಥೆ ಜಾಕ್ವೆಸ್ ಥೆಲೆನ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ, ನಿಕೋಲಸ್ ಏಂಜೆಲಿಚ್ […]

Advertisement

Wordpress Social Share Plugin powered by Ultimatelysocial