Flashback 2021: ಮತ್ತೆ ಕಾಟ ಕೊಟ್ಟ ಕೊರೊನಾ..!

Flashback 2021: ಮತ್ತೆ ಕಾಟ ಕೊಟ್ಟ ಕೊರೊನಾ..!

ಕೆಎನ್‌ಡಿಜಿಟಲ್‌ಡೆಸ್ಕ್‌: 2021 ಮುಗಿದು 2022 ಬರುವ ಹೊತ್ತಾಯಿತು. ಈ ವರ್ಷ ಕಳೆಯಲು ಇನ್ನೇನು ದಿನಗಣನೆ ಶುರುವಾಗಿದೆ. ಮತ್ತೊಂದು ಹೊಸ ವರ್ಷವನ್ನು ಬರಮಾಡಿಕೊಳ್ಳಲು ಜಗತ್ತು ಸಿದ್ಧವಾಗಿದೆ. ಈ ವರ್ಷ ಕಳೆದು ಹೋಗಿ ಬರುವ ವರ್ಷ ಚೆನ್ನಾಗಿರಲಿ ಎಂಬುದು ಎಲ್ಲರ ಪ್ರಾರ್ಥನೆಯಾಗಿದೆ.

ಭವಿಷ್ಯವನ್ನು ಸ್ವಾಗತಿಸುವ ಹುಮ್ಮಸ್ಸಿನಲ್ಲದೆ ಯುವ ಜನಾಂಗ. ಆದರೆ ನಾವು ಎಷ್ಟೇ ಮುಂದೆ ಸರೆದರು ನಡೆದ ಬಂದ ಹಾದಿಯನ್ನು ಅವಲೋಕಿಸೋದು ಉತ್ತಮ. ಸವೆದು ಬಂದ ದಾರಿಯನ್ನು ಒಮ್ಮೆ ಹಿಂದೆ ತಿರುಗಿ ನೋಡಿದರೆ ಅದೆಷ್ಟೋ ವಿಸ್ಮಯ ಘಟನೆಗಳು ಕಣ್ಣೆದುರು ರಪ್ಪೆಂದು ಬಂದು ಹೋಗುತ್ತವೆ. 2021 ಸಹ ಕೆಲ ಸಿಹಿ ಹಾಗು ಕಹಿ ಘಟನೆಗಳಿಂದ ಮುಗಿದು ಹೋಗುತ್ತಿದೆ.

ಇನ್ನೇನು ಕೆಲವೇ ದಿನಗಳಲ್ಲಿ 2021 ವರ್ಷ ಮನು ಕುಲಕ್ಕೆ ಮತ್ತೊಂದು ವರ್ಷ ಸೇರಿದಂತಾಗುತ್ತದೆ. 2021 ಅನ್ನು ಒಮ್ಮೆ ಅವಲೋಕಿಸಿದಾಗ ಇಲ್ಲಿ ನಡೆದ ಘಟನೆಗಳು ಇಡೀ ಮನುಕುಲಕ್ಕೆ ಪಾಠ ಕಲಿಸಿದೆ. ಮುಂದೆ ಉತ್ತಮ ಮತ್ತು ಆರೋಗ್ಯಕರವಾದ ಭವಿಷ್ಯ ರೂಪಿಸಿಕೊಳ್ಳುವುದು ನಮ್ಮೆಲ್ಲರ ಜವಬ್ದಾರಿಯಾಗಿದೆ. ಇನ್ನು ಈ ವರ್ಷ ನಾವು ನೀವೆಲ್ಲ ಕಳೆದುಕೊಂಡಿದ್ದೇನು ಹಾಗು ಗಳಿಸಿದ್ದೇನು ಎಂಬ ನಿರ್ಧಾರ ನಾವು ಹೇಳುವುದಿಲ್ಲ. ಆ ನಿರ್ಧಾರ ನಿಮ್ಮ ನಿಮ್ಮ ವೈಯಕ್ತಿಕಕ್ಕೆ ಬಿಟ್ಟಿದ್ದೇವೆ. 2021 ಆಲ್ಲಿ ಭಾರತ ಸೇರಿ ವಿದೇಶಗಳಲ್ಲಿ ಘಟಿಸಿದ ಘಟನೆಗಳನ್ನು ಮತ್ತೊಮ್ಮೆ ಮೆಲುಕು ಹಾಗುತ್ತಾ ಮುಂಬರುವ ವರ್ಷವನ್ನು ಬರಮಾಡಿಕೊಳ್ಳೋಣ..

 

ಮತ್ತೆ ಕಾಟ ಕೊಟ್ಟ ಕೊರೊನಾ..!

ಕೊರೊನಾ ಮಹಾಮಾರಿ ಅಬ್ಬರ ತಗ್ಗಲಿಲ್ಲ. 2021ರಲ್ಲಿ ಕೊರನಾದ ಡೆಲ್ಟಾ ವೇರಿಯಂಟ್‌ ಎರಡನೆಯ ಅಲೆ ತನ್ನ ಕ್ರೌರ್ಯತೆ ಮೆರೆಯಿತು. ಎಪ್ರಿಲ್‌ ಮೇ ಆಸುಪಾಸಿನ ತಿಂಗಳಲ್ಲಿ ಕೊರೊನಾಂತಕ ಅಬ್ಬರಿಸಿ ಬೊಬ್ಬರಿಸಿತ್ತು. ಎರಡನೆಯ ಅಲೆಯಲ್ಲಿ ಸಾವು ನೋವುಗಳ ಸಂಖ್ಯೆ ಹೆಚ್ಚಾಗಿಯೇ ಇತ್ತು. ಈ ಬಾರಿ ಆಕ್ಸಿಜನ್‌ ಸಿಲಿಂಡರ್‌, ಅಸ್ಪತ್ರೆಗಳಲ್ಲಿ ಹಾಸಿಗೆ ಅಭಾವದಿಂದ ಕೊರೊನಾ ರೋಗಿಗಳು ಮತ್ತವರ ಮನೆಯವರು ಆಸ್ಪತ್ರೆಯ ಮುಂದೆ ಪರದಾಡುವಂತಾಯಿತು. ಪರಿಸ್ಥಿತಿ ಕೈಮೀರಿ ಹೋಯಿತೆನ್ನುವಷ್ಟರಲ್ಲಿ ಮತ್ತದೇ ಲಾಕ್‌ ಡೌಲ್‌ ಆಯಿತು.

ಕೇರಳ ಸೇರಿದಂತೆ ದೇಶದಲ್ಲೇ ಆಕ್ಸಿಜನ್‌ ಸಿಲಿಂಡ್‌ ಉತ್ಪಾದನೆ ಘಟಕಗಳು ಯುದ್ದೋಪಾದಿಯಲ್ಲಿ ಕೆಲಸ ಮಾಡಿದವು. ಅಷ್ಟೇ ಅಲ್ಲದೆ ದಿನ ಕಳೆದಂತೆ ವಿದೇಶಗಳಿಂದ ಆಕ್ಸಿಜನ ಸಿಲಿಂಡರ್‌ಗಳು ಭೂ, ಜಲ, ವಾಯು ಮಾರ್ಗವಾಗಿ ಭಾರತಕ್ಕೆ ಬರತೊಡಗಿದವು. ಕೊರೊನಾ ಡೆಲ್ಟಾ ವೇರಿಯಂಟ್‌ ಅಪಾಯದಿಂದ ಹಂತ ಹಂತವಾಗಿ ಪಾರಾದೆವು. ಆದರೆ ಈ ಕೋವಿಡ್‌ನಿಂದಾಗಿ ನಾವು ಅನೇಕ ಗಣ್ಯರನ್ನು ಕಳೆದುಕೊಂಡೆವು ಮಹಾನ್‌ ಗಾಯಕ ಎಸ್‌.ಪಿ.ಬಿ, ಚಿಪ್ಕೋ ಚಳುವಳಿಯ ರುವಾರಿ ಸುಂದರ್‌ ಲಾಲ್‌ ಬಹುಗುಣ ಹೀಗೆ ಕೆಲ ಮಹಾನ್‌ ವ್ಯಕ್ತಿಗಳನ್ನು ಕೊರೊನಾ ಬಲಿ ತೆಗೆದುಕೊಂಡಿಬಿಟ್ಟಿತು. ಎರಡನೆಯ ಅಲೆಯಲ್ಲಾದ ಸಾವು ನೋವುಗಳು ಮನುಕುಲಕ್ಕೆ ಪಾಠ ಕಲಿಸಿ ಹೋಗಿದೆ ಎಂದರೆ ತಪ್ಪಾಗಲಾರದು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

 

Please follow and like us:

Leave a Reply

Your email address will not be published. Required fields are marked *

Next Post

Paytm Cash Back Offer: ಪ್ರಿಪೇಯ್ಡ್​ ಪ್ಲಾನ್ ರೀಚಾರ್ಜ್​ ಮಾಡಿದರೆ 1 ಸಾವಿರದವರೆಗೆ ಕ್ಯಾಶ್​ಬ್ಯಾಕ್​ ಪಡೆಯಿರಿ!

Sun Dec 26 , 2021
Paytm New Cash Back Offer: ನಷ್ಟವನ್ನು ಪೂರೈಸುವ ನಿಟ್ಟಿನಲ್ಲಿ ಟೆಲಿಕಾಂ ಕಂಪನಿಗಳಾದ ಜಿಯೋ (Jio), ವೊಡಾಫೊನ್​ (Vi) ಮತ್ತು ಏರ್​ಟೆಲ್​ (​​Airtel) ತಮ್ಮ ಸುಂಕವನ್ನು ಶೇಕಡಾ 20 ರಷ್ಟು ಹೆಚ್ಚಿಸಿವೆ. ಈ ಹೆಚ್ಚಳದಿಂದ ಬೇಸರ ಮಾಡಿಕೊಂಡ ಜನರಿಗಾಗಿ ಇದೇಇಗ ಪೇಟಿಎಂನಿಂದ ಪರಿಹಾರ ಪಡೆದುಕೊಳ್ಳಬಹುದಾಗಿದೆ. ಏಕೆಂದರೆ ಪೇಟಿಯಂ ಮೂಲಕ ಪ್ರಿಯೇಯ್ಡ್​ ರೀಚಾರ್ಜ್​ ಮಾಡಿಕೊಂಡರೆ ಕ್ಯಾಶ್​ಬ್ಯಾಕ್​ ಮತ್ತು ಇತರ ಕೊಡುಗೆಗಳು ಸಿಗಲಿದೆ. ಪ್ರೀ-ಪೇಯ್ಡ್ ಬಳಕೆದಾರರಿಗೆ ಪೇಟಿಯಂನ ಕೊಡುಗೆ ಪೇಟಿಯಂ ಪ್ರಿ-ಪೇಯ್ಡ್ ಯೋಜನೆಗಳನ್ನು […]

Advertisement

Wordpress Social Share Plugin powered by Ultimatelysocial