ಇಲ್ಲಿದೆ ನೋಡಿ 2022ರ ಮಾರುತಿ ಸುಜುಕಿ ಬಲೆನೋ ಕಾರಿನ ವೈಶಿಷ್ಟ್ಯ

ಮಾರುತಿ ಸುಜುಕಿ ದೇಶದಲ್ಲಿ ಬಲೆನೋ ಫೇಸ್​ ಲಿಫ್ಟ್​ನ್ನು ಇದೇ ತಿಂಗಳ 23ನೇ ತಾರೀಖಿನಂದು ಬಿಡುಗಡೆ ಮಾಡಲು ಸಜ್ಜಾಗಿದೆ. ಇದು 2015ರಲ್ಲಿ ಬಿಡುಗಡೆಯಾದ ಪ್ರೀಮಿಯಂ ಹ್ಯಾಚ್​ಬ್ಯಾಕ್​ನ ಎರಡನೇ ಫೇಸ್​ಲಿಫ್ಟ್​ ಆಗಿದೆ. ಮೊದಲ ಫೇಸ್​ಲಿಫ್ಟ್​ನಲ್ಲಿ ಬಿಎಸ್​6 ಪವರ್​ ಪ್ಲಾಂಟ್​ ಜೊತೆಗೆ ಕೆಲವೇ ಕೆಲವು ಬದಲಾವಣೆಗಳನ್ನು ಮಾಡಲಾಗಿತ್ತು.ಆದರೆ ಫೆಬ್ರವರಿ 28ರಿಂದ ಲಾಂಚ್​ ಆಗಲಿರುವ ಫೇಸ್​ಲಿಫ್ಟ್​ನಲ್ಲಿ ಗಮನಾರ್ಹ ಬದಲಾವಣೆಗಳನ್ನು ಮಾಡಲಾಗಿದೆ. ಈ ಬಾರಿ ಕಾರಿನಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಸೇರಿದಂತೆ ಆಧುನಿಕ ಗ್ಯಾಜೆಟ್​​ಗಳನ್ನು ಬಳಕೆ ಮಾಡಲಾಗಿದೆ. ಹೊಸ ಬಲೆನೋ ಕಂಪನಿಯ ಸುಜುಕಿ ಕನೆಕ್ಟ್​ ಸೂಟ್​ನೊಂದಿಗೆ ಬರಲಿದೆ ಎಂದು ಮಾರುತಿ ಸುಜುಕಿ ಕಂಪನಿಯು ಬಹಿರಂಗಪಡಿಸಿದೆ. ಇದು 40 ಕ್ಕೂ ಹೆಚ್ಚು ಸಂಪರ್ಕಿತ ಕಾರು ವೈಶಿಷ್ಟ್ಯಗಳನ್ನು ನೀಡುತ್ತದೆ.ಡ್ಯಾಶ್​ಬೋರ್ಡ್​ನ್ನು ಮರು ವಿನ್ಯಾಸಗೊಳಿಸಲಾಗಿದೆ. 9 ಇಂಚಿನ ಇನ್ಫೋಟೈನ್​ಮೆಂಟ್​ ಸಿಸ್ಟಂಗಳ ಜೊತೆ ಆಂಡ್ರಾಯ್ಡ್​ ಆಟೋ ಹಾಗೂ ಆಯಪಲ್​ ಕಾರ್​ ಪ್ಲೇಯನ್ನು ನೀಡಲಾಗಿದೆ. ಇದರ ಜೊತೆಯಲ್ಲಿ 360 ಡಿಗ್ರಿ ಕ್ಯಾಮರಾ, ಅರ್ಕಾಮಿಸ್​ ಟ್ಯೂನ್ಸ್​ ಸೌಂಡ್​ ಸಿಸ್ಟಂ ಹಾಗೂ ವೈರ್​ಲೆಸ್​ ಫೋನ್​​ ಚಾರ್ಜರ್​ಗಳನ್ನು ಸೇರಿಸಲಾಗಿದೆ. ಡ್ಯಾಶ್​ಬೋರ್ಡ್​ನಲ್ಲಿ ಮೂರು ಟೋನ್​ ಫಿನಿಶ್​ ನೀಡಲಾಗಿದೆ. ಕಪ್ಪು, ಬೆಳ್ಳಿ ಹಾಗೂ ನೇರಳೆ ಬಣ್ಣವನ್ನು ಬಳಕೆ ಮಾಡಲಾಗಿದೆ. ಇನ್ನು ಸ್ವಿಫ್ಟ್​ ಕಾರಿನಂತೆಯೇ ಬಲೆನೋದಲ್ಲಿಯೂ ಸ್ಟೀರಿಂಗ್​ ವ್ಹೀಲ್​ ನೀಡಲಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಪ್ರಾಜೆಕ್ಟ್ ಕೆ: ಪ್ರಭಾಸ್ ಅಭಿನಯದ ಸ್ಟಂಟ್ ಕೊರಿಯೋಗ್ರಾಫರ್ ಪರ್ವೇಜ್ ಶೇಖ್!

Tue Feb 22 , 2022
ಪ್ರಭಾಸ್ ಮಹಾನಟಿ ಖ್ಯಾತಿಯ ನಾಗ್ ಅಶ್ವಿನ್ ಅವರ ಮುಂಬರುವ ಚಿತ್ರಕ್ಕಾಗಿ ಪ್ರಾಜೆಕ್ಟ್ ಕೆ ಎಂಬ ಶೀರ್ಷಿಕೆಯೊಂದಿಗೆ ಒಟ್ಟಿಗೆ ಬಂದಿದ್ದಾರೆ. ತಯಾರಕರು ಈಗ ಬಾಲಿವುಡ್ ಸ್ಟಂಟ್ ಕೊರಿಯೋಗ್ರಾಫರ್ ಪರ್ವೇಜ್ ಶೇಖ್ ಅವರನ್ನು ಸಂಪರ್ಕಿಸಿದ್ದಾರೆ ಎಂದು ವರದಿಯಾಗಿದೆ. ಪರ್ವೇಜ್ ಶೇಖ್ ಅವರ ಗಮನಾರ್ಹ ಕೃತಿಗಳಲ್ಲಿ ಮುಂಬರುವ ಚಲನಚಿತ್ರ ಮತ್ತು ಶಂಶೇರಾ ಸೇರಿವೆ. ಪ್ರಾಜೆಕ್ಟ್ ಕೆಗಾಗಿ ಪರ್ವೇಜ್ ಪ್ರಮುಖ ಆಕ್ಷನ್ ಬ್ಲಾಕ್‌ಗೆ ನೃತ್ಯ ಸಂಯೋಜನೆ ಮಾಡುತ್ತಿದ್ದಾರೆ ಮತ್ತು ಚಲನಚಿತ್ರಕ್ಕಾಗಿ ಸಕ್ರಿಯವಾಗಿ ಚಿತ್ರೀಕರಣ ಮಾಡುತ್ತಿರುವ ಪ್ರಭಾಸ್ […]

Advertisement

Wordpress Social Share Plugin powered by Ultimatelysocial