`ಮಾಯಾವಿ’ ರೂಪದಲ್ಲಿ ಸಂಚಾರಿ ವಿಜಯ್ ಜೀವಂತ! ಬಹು ನಿರೀಕ್ಷಿತ `ಮೇಲೊಬ್ಬ ಮಾಯಾವಿ’ ಎಪ್ರಿಲ್ 29ರಂದು ಬಿಡುಗಡೆ

 

ನಿರೀಕ್ಷೆ ಹುಟ್ಟಿಸಿದ ಚಕ್ರವರ್ತಿ ಚಂದ್ರಚೂಡ್ ಮತ್ತು ಪವಿತ್ರಾ ಜೋಡಿ

ಹರಳು ಮಾಫಿಯಾದ ಅಪರೂಪದ ಕಂಟೆಟ್ ಹೊತ್ತ `ಮೇಲೊಬ್ಬ ಮಾಯಾವಿ’ ಚಿತ್ರ 2022ರ ಎಪ್ರಿಲ್ 29ಕ್ಕೆ ರಿಲೀಸ್ ಆಗಲಿದೆ. ಈ ಚಿತ್ರದಲ್ಲಿ ಸಂಚಾರಿ ವಿಜಯ್ ಇರುವೆ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅರಣ್ಯಪ್ರದೇಶವನ್ನೇ ಹೊದ್ದುಕೊಂಡಿರುವ ದಕ್ಷಿಣ ಕನ್ನಡ ಮತ್ತು ಕೊಡಗು ಗಡಿಭಾಗದ ಪುಷ್ಪಗಿರಿ ಅಭಯಾರಣ್ಯ ಭಾಗದಲ್ಲಿ ನಡೆಯುತ್ತಿರುವ ಹರಳು ಕಲ್ಲು ದಂಧೆಯ ಕರಾಳಮುಖವನ್ನು ತಮ್ಮ ಪಾತ್ರದ ಮೂಲಕ ಬಿಚ್ಚಿಡಲಿದ್ದಾರೆ. `ಮೇಲೊಬ್ಬ ಮಾಯಾವಿ’ ಚಿತ್ರದ ಹಾಡುಗಳು ಈಗಾಗಲೇ ರಿಲೀಸ್ ಆಗಿದ್ದು, ಹಾಡುಗಳ ಸಾಹಿತ್ಯ ಮತ್ತು ಸಂಗೀತದಿAದ ಪ್ರೇಕ್ಷಕರನ್ನು ತಲುಪುವಲ್ಲಿ ಸಫಲವಾಗಿದೆ.
ಚಿತ್ರದಲ್ಲಿ ರಂಗಭೂಮಿ ಪ್ರತಿಭೆ ಅನನ್ಯ ಶೆಟ್ಟಿ ನಾಯಕಿಯಾಗಿದ್ದು, `ಸಕ್ಕರೆ’ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಬಿಗ್ಬಾಸ್ ಖ್ಯಾತಿಯ ಚಕ್ರವರ್ತಿ ಚಂದ್ರಚೂಡ್ ಮೊಟ್ಟ ಮೊದಲ ಬಾರಿಗೆ ಪೂರ್ಣ ಪ್ರಮಾಣದ ಖಳನಟನಾಗಿ ಕಾಣಿಕೊಳ್ಳುತ್ತಿದ್ದಾರೆ. ಕಿರುತೆರೆ ನಟಿ ಪವಿತ್ರಾ ಜಯರಾಮ್, ಚಕ್ರವರ್ತಿ ಚಂದ್ರಚೂಡ್ ಅವರ ಕಾಂಬೀನೇಶನ್ ಸ್ಟಿಲ್ಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ. ಉಳಿದಂತೆ ಚಿತ್ರದಲ್ಲಿ ಕೃಷ್ಣಮೂರ್ತಿ ಕವತ್ತಾರ್, ಬೆನಕ ನಂಜಪ್ಪ, ಎಮ್.ಕೆ.ಮಠ, ನವೀನ್ಕುಮಾರ್, ಲಕ್ಷ್ಮಿ ಅರ್ಪಣ್, ಮುಖೇಶ್ ಹಾಗೂ ಡಾ.ಮನೋನ್ಮಣಿ ಹೀಗೆ ಸಾಕಷ್ಟು ರಂಗಭೂಮಿ ಪ್ರತಿಭೆಗಳನ್ನು ಚಿತ್ರದಲ್ಲಿ ವಿಭಿನ್ನ ಪಾತ್ರಗಳ ಮೂಲಕ ಕಾಣಬಹುದು.
ಆಭರಣ, ಉಂಗುರುಗಳಿಗೆ ಬಳಸುವ ಈ ಹರಳಿನ ಕಲ್ಲಿಗಾಗಿ ಅಕ್ರಮ ದಂಧೆಕೋರರ ಹುಡುಕಾಟ ಹೇಗಿರುತ್ತದೆ..? ಹುಡುಕಾಟದಲ್ಲಿ ಸಂಭವಿಸುವ ಸಾವು-ನೋವುಗಳ ಹಿಂದಿನ ಅಸಲಿ ಸತ್ಯ ಏನು..? ಅರಣ್ಯ ಇಲಾಖೆ ಈ ದಂಧೆಯ ವಿಚಾರದಲ್ಲಿ ಸುಮ್ಮನಿರುವುದ್ಯಾಕೆ..? ದಶಕಗಳಿಂದ ನಡೆಯುತ್ತಿರುವ ಈ ಹರಳು ಮಾಫಿಯಾದ ಹಿಂದಿರುವ ಪೈಶಾಚಿಕ ಮನಸ್ಥಿಗಳು ಯಾವುವು..? ಹರಳು ದಂಧೆ ಇಡೀ ಪರಿಸರವನ್ನು ನಾಶಗೊಳಿಸುವುದರ ಜೊತೆಗೆ, ಇಡೀ ಮನುಕುಲವನ್ನೇ ಹೇಗೆ ವಿನಾಶದ ಅಂಚಿಗೆ ಕೊಂಡತಯ್ಯಬಹುದಾದ ಬಗೆ ಹೇಗೆ..? ಇಂತಹ ಸಾಕಷ್ಟು ಪ್ರಶ್ನೆಗಳಿಗೆ `ಮೇಲೊಬ್ಬ ಮಾಯಾವಿ’ ಚಿತ್ರ ಉತ್ತರ ನೀಡಲಿದೆ. ಇನ್ನು, `ನಾನು ಅವನಲ್ಲ ಅವಳು’ ಚಿತ್ರದಲ್ಲಿ ಮನೋಜ್ಞ ಅಭಿನಯ ನೀಡಿದ್ದ ಸಂಚಾರಿ ವಿಜಯ್ ಅವರ ಈ ಚಿತ್ರದಲ್ಲಿನ `ಇರುವೆ’ ಪಾತ್ರದ ಬಗ್ಗೆ ಪ್ರೇಕ್ಷಕರಲ್ಲಿ ಸಾಕಷ್ಟು ಕುತೂಹಲವಿದೆ.
ಬಿ.ನವೀನ್ಕೃಷ್ಣ ನಿರ್ದೇಶನ ಮಾಡಿರೋ `ಮೇಲೊಬ್ಬ ಮಾಯಾವಿ’ ಸಿನಿಮಾವನ್ನು, `ಶ್ರೀ ಕಟೀಲ್ ಸಿನಿಮಾಸ್’ ಬ್ಯಾನರ್ನ ಅಡಿಯಲ್ಲಿ ಭರತ್ ಕುಮಾರ್ ಮತ್ತು ತನ್ವಿ ಅಮಿನ್ ಕೊಲ್ಯ ನಿರ್ಮಾಣ ಮಾಡಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಇಂದಿನ ಪಂಚಾಂಗ, ಮಾರ್ಚ್ 14, 2022: ಇಂದಿನ ತಿಥಿ, ಶುಭ ಮುಹೂರ್ತ, ರಾಹುಕಾಲ ಮತ್ತು ಇತರ ವಿವರಗಳನ್ನು ಪರಿಶೀಲಿಸಿ!

Mon Mar 14 , 2022
ಇಂದು ಏಕಾದಶಿ ತಿಥಿ (ದಿನ 11), ಫಾಲ್ಗುಣ, ಶುಕ್ಲ ಪಕ್ಷ (ಚಂದ್ರ ಚಕ್ರದ ವ್ಯಾಕ್ಸಿಂಗ್ ಅಥವಾ ಡಾರ್ಕ್ ಹಂತ), ಸೋಮವಾರ (ಸೋಮವಾರ), ವಿಕ್ರಮ ಸಂವತ್ 2078. ಸೂರ್ಯೋದಯ (ಸೂರ್ಯೋದಯ), ಸೂರ್ಯಾಸ್ತ (ಸೂರ್ಯಸ್ತ) ಸಮಯಗಳನ್ನು ತಿಳಿಯಲು ಮುಂದೆ ಓದಿ, ಶುಭ್ (ಶುಭಕರ), ಅಶುಭ್ (ಅಶುಭಕರ) ಮುಹೂರ್ತ, ರಾಹು ಕಾಲ, ಮತ್ತು ಆಜ್ ಕಾ ಪಂಚಾಂಗದ ಇತರ ವಿವರಗಳು, ಮಾರ್ಚ್ 14, 2022. ವೈದಿಕ ಪೂಜೆಗಳನ್ನು ಪ್ರಾರಂಭಿಸಲು ಇದು ಪರಿಪೂರ್ಣ ದಿನವಾಗಿದೆ. ಇದಲ್ಲದೆ, […]

Advertisement

Wordpress Social Share Plugin powered by Ultimatelysocial