BJP ಪ್ರಜಾ ಪ್ರಣಾಳಿಕೆಯಲ್ಲಿ ಮಹತ್ವದ ಘೋಷಣೆ

ಬೆಂಗಳೂರು: ಬಿಜೆಪಿ ಪ್ರಜಾ ಪ್ರಣಾಳಿಕೆಯಲ್ಲಿ ಕೃಷಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಈಗಾಗಲೇ ಬಜೆಟ್ ನಲ್ಲಿಯೂ ಕೃಷಿಗೆ ಆದ್ಯತೆ ನೀಡಿದ್ದೇವೆ. ಸುಮಾರು 2 ವರ್ಷ ಕೊರೊನಾ ದಿಂದಾಗಿ ಆರ್ಥಿಕ ಕುಸಿತವಾಯಿತು. ಈ ಹಿನ್ನೆಲೆಯಲ್ಲಿ ಜನರ ಹಿತದೃಷ್ಟಿಯಿಂದ ಪ್ರಣಾಳಿಕೆ ಸಿದ್ದಪಡಿಸಲಾಗಿದೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.

BJP ಪ್ರಣಾಳಿಕೆಯ ಅಂಶಗಳು:

ಸಿರಿಧಾನ್ಯ ಉತ್ಪಾದನೆಗೆ ಆದ್ಯತೆ
ಮೀನುಗಾರಿಕೆ ಉತ್ಪಾದನೆಗೆ ಆದ್ಯತೆ
5ಕೆಜಿ ಅಕ್ಕಿ, 5 ಕೆಜಿ ಸಿರಿಧಾನ್ಯ
BPL ಕುಟುಂಬಕ್ಕೆ ಪ್ರತಿ ದಿನ ಅರ್ಧ ಲೀಟರ್ ಹಾಲು
ಬಿಪಿಎಲ್ ಕುಟುಂಬಕ್ಕೆ ಉಚಿತ 3 ಗ್ಯಾಸ್ ಸಿಲಿಂಡರ್
ಯುಗಾದಿ, ಗಣೇಶ ಚತುರ್ಥಿ, ದೀಪಾವಳಿಗಳಿಗೆ ಉಚಿತ ಗ್ಯಾಸ್
ಅಟಲ್ ಆಹಾರ ಕೇಂದ್ರ ಸ್ಥಾಪನೆ ಭರವಸೆ
ಏಕರೂಪ ನಾಗರಿಕ ಸಂಹಿತೆ ಜಾರಿ
ಅಪಾರ್ಟ್ ಮೆಂಟ್ ಓನರ್ ಶಿಪ್ ಆಕ್ಟ್ ತಿದ್ದುಪಡಿ

ಸರ್ವರಿಗೂ ಸೂರು ಯೋಜನೆಯಡಿ 10 ಲಕ್ಷ ನಿವೇಶನ ಹಂಚಿಕೆ
ಒನಕೆ ಓಬವ್ವ ಸಾಮಾಜಿಕ ನ್ಯಾಯ ನಿಧಿ ಸ್ಥಾಪನೆ
ವಿಶ್ವೇಶ್ವರಯ್ಯ ವಿದ್ಯಾ ಯೋಜನೆಯಡಿ ಸರ್ಕಾರಿ ಶಾಲೆಗಳು ಮೇಲ್ದರ್ಜೆಗೆ
ಯುವ, ವೃತ್ತಿಪರರಿಗಾಗಿ ಶಿಕ್ಷಣ , ಉದ್ಯೋಗಕ್ಕಾಗಿ ಸಮನ್ವಯ ಯೋಜನೆ
ಐ ಎ ಎಸ್, ಕೆ ಎ ಎಸ್ ಉದ್ಯೋಗಾಕಾಂಕ್ಷಿಗಳ ತರಬೇತಿಗೆ ಆರ್ಥಿಕ ನೆರವು.

ಮಿಷನ್ ಸ್ವಾಸ್ಥ್ಯ ಕರ್ನಾಟಕದಡಿ ಸರ್ಕಾರಿ ಆಸ್ಪತ್ರೆ, ಆರೋಗ್ಯ ಕೇಂದ್ರಗಳಲ್ಲಿನ ಮೂಲಸೌಕರ್ಯಗಳ ಸುಧಾರಣೆ
ಬೆಂಗಳೂರು ಅಭಿವೃದ್ಧಿ-ರಾಜ್ಯ ರಾಜಧಾನಿ ಪ್ರದೇಶ ಎಂದು ಗುರುತು
ಕರ್ನಾಟಕವನ್ನು ಎಲೆಕ್ಟ್ರಿಕ್ ವಾಹನಗಳ ಪ್ರಮುಖ ಕೇಂದ್ರವಾಗಿ ಅಭಿವೃದ್ಧಿ- ಹಾಲಿ ಇರುವ ಬಿಎಂಟಿಸಿ ಬಸ್ ಗಳು ಎಲೆಕ್ಟ್ರಿಕ್ ಬಸ್ ಗಳಾಗಿ ಪರಿವರ್ತನೆ
1000 ಸ್ಟಾರ್ಟಪ್ ಗಳಿಗೆ ಪ್ರೋತ್ಸಾಹ
ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಶೀತಲೀಕರಣ ಸೌಲಭ್ಯ
ಕರ್ನಾಟಕವನ್ನು ಪ್ರವಾಸಿ ತಾಣವನ್ನಾಗಿ ರೂಪಿಸಲು ಕಲ್ಯಾಣ ಸರ್ಕ್ಯೂಟ್, ಬನವಾಸಿ ಸರ್ಕ್ಯೂಟ್, ಪರಶುರಾಮ ಸರ್ಕ್ಯೂಟ್, ಕಾವೇರಿ ಸರ್ಕ್ಯೂಟ್ ಯೋಜನೆ
10 ಲಕ್ಷ ಉದ್ಯೋಗ ಸೃಷ್ಟಿಗೆ ಲಾಜೆಸ್ಟಿಕ್ ಕೈಗಾರಿಕಾ ಕ್ಲಸ್ಟರ್ ಸ್ಥಾಪನೆ
3 ಹೊಸ ಆಹಾರ ಸಂಸ್ಕರಣಾ ಘಟಕ ಸ್ಥಾಪನೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕಾಂಗ್ರೆಸ್ ಮತ್ತು ನನ್ನ ಮಧ್ಯೆ ನೇರ ಹಣಾಹಣಿ ಜೆಡಿಎಸ್ ಅಭ್ಯರ್ಥಿ ಕೋಡಿಹಳ್ಳಿ ಭೀಮಣ್ಣ..!

Mon May 1 , 2023
ಕೂಡ್ಲಿಗಿ 2023ರ ಸಾರ್ವತ್ರಿಕ ಚುನಾವಣೆಯಲ್ಲಿ ಕೂಡ್ಲಿಗಿ ವಿಧಾನಸಭಾ ಕ್ಷೇತ್ರದಲ್ಲಿ ನನ್ನ ಮತ್ತು ಕಾಂಗ್ರೆಸ್ ನಡುವೆ ನೇರ ಫೈಟ್ ಎಂದು ಜೆಡಿಎಸ್ ಅಭ್ಯರ್ಥಿ ಕೋಡಿಹಳ್ಳಿ ಭೀಮಣ್ಣ ಶಿವಪುರ ಗೊಲ್ಲರಹಟ್ಟಿಯಲ್ಲಿ ಹೇಳಿದರು. ಜೆಡಿಎಸ್ ಸ್ವಂತ ಬಲದಿಂದ ಅಧಿಕಾರಕ್ಕೆ ಬರುವುದು ನಿಶ್ಚಿತ ಕೂಡ್ಲಿಗಿ ವಿಧಾನಸಭಾ ಕ್ಷೇತ್ರದಿಂದ ನನ್ನನ್ನು ಆಯ್ಕೆ ಮಾಡಿ ಕಳಿಸಿ ಅಭಿವೃದ್ಧಿಗೆ ಸಹಾಯವಾಗುತ್ತದೆ ಯುವ ರೈತನನ್ನು ಮದುವೆಯಾದರೆ 2, ಪ್ರೋತ್ಸಾಹ ಧನ, ವೃದ್ಯಾಪ ವೇತನ 5000 ವರೆಗೂ ಬಾಣಂತಿಯರಿಗೆ 6000 ವರೆಗೆ ಶ್ರೀ […]

Advertisement

Wordpress Social Share Plugin powered by Ultimatelysocial