ಜೂ 3ಕ್ಕೆ ‘ಮೆಟಡೋರ್’ ರಿಲೀಸ್…’ಮೆಟಡೋರ್’ನಲ್ಲಿಯೇ ಊರ್ ಊರ್ ಸುತ್ತಿ ಪ್ರಮೋಷನ್ ಮಾಡಿದ ಚಿತ್ರತಂಡ

ಜೂನ್ 3ರಿಂದ ಕನ್ನಡ ಬೆಳ್ಳಿತೆರೆ ಮೇಲೆ ಮೆಟಡೋರ್ ಪಯಣ ಶುರುವಾಗಲಿದೆ. ಈಗಾಗಲೇ ಟೀಸರ್, ಟ್ರೇಲರ್ ಹಾಗೂ ಹಾಡಿನ ಮೂಲಕ ನಿರೀಕ್ಷೆ ಹುಟ್ಟಿಸಿರುವ ಈ ಸಿನಿಮಾ ಥಿಯೇಟರ್ ಗೆ ಲಗ್ಗೆ ಇಡಲು ಅಣಿಯಾಗಿದೆ.ಮೆಟಡೋರ್ ಮೂಲಕ ಭರ್ಜರಿ ಪ್ರಮೋಷನ್ಮೆಟಡೋರ್ ಸಿನಿಮಾ ರಿಲೀಸ್ ಗೆ ಕ್ಷಣಗಣನೆ ಶುರುವಾಗಿದ್ದು, ಹೀಗಾಗಿ ಚಿತ್ರತಂಡ ಭರ್ಜರಿ ಪ್ರಮೋಷನ್ ಗೆ ಇಳಿದಿದೆ. ಮೆಟಡೋರ್ ವಾಹನಕ್ಕೆ ಸಿನಿಮಾದ ಪೋಸ್ಟರ್ ಅಂಟಿಸಿ, ಈ ಮೆಟಡೋರ್ ಮೂಲಕವೇ ರಾಜ್ಯಾದ್ಯಂತ ಪ್ರಮೋಷನ್ ನಡೆಸ್ತಿದೆ.ಐದು ಕಥೆಯುಳ್ಳ ಹೈಪರ್ ಲಿಂಕ್ ಸಿನಿಮಾವಾಗಿರುವ ಮೆಟಡೋರ್ ಚಿತ್ರಕ್ಕೆ ಸುದರ್ಶನ್ ಜಿ ಶೇಖರ್ ನಿರ್ದೇಶನ ಮಾಡಿದ್ದು, ಈ ಹಿಂದೆ ಇವರು 13ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. ಚಿತ್ರದಲ್ಲಿ ಕಿರಣ್, ರವಿ ಮೈಸೂರು, ಅರ್ಚನಾ ಮಹೇಶ್,‌ ಮೋಹನ್ ಬಾಬು ಸೇರಿದಂತೆ ಹೊಸ ತಾರಾಬಳಗ ಸಿನಿಮಾದಲ್ಲಿದೆ.ಓಂ ಸ್ಟುಡಿಯೋ ಪ್ರೊಡಕ್ಷನ್ ಹೌಸ್ ಬ್ಯಾನರ್ ನಡಿ ಕಿರಣ್ ಕುಮಾರ್ ಹೆಚ್ ಎಸ್ ಬಂಡವಾಳ ಹೂಡಿದ್ದು, ತಂಗಾಳಿ ನಾಗರಾಜ್ ಸಂಗೀತ, ಗೋಪಿನಾಥ್ ಕ್ಯಾಮೆರಾ, ಕುಮಾರ್ ಸಿಎಚ್ ಸಂಕಲನ ಚಿತ್ರಕ್ಕಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

CM ಕನಸು ಕಾಣ್ತಿರೋ ಡಿ.ಕೆ.ಶಿವಕುಮಾರ್​ ಮತ್ತೆ ಸಂಕಷ್ಟ..

Fri May 27 , 2022
  ಕೆಪಿಸಿಸಿ ಸಾರಥಿಗೆ ಮತ್ತೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಕ್ರಮ ಹಣ ವರ್ಗಾವಣೆ, ಬೇನಾಮಿ ಆಸ್ತಿ ಪ್ರಕರಣ ಮರುಜೀವ ಪಡೆದುಕೊಂಡಿದೆ. ವಿಧಾನಸಭಾ ಚುನಾವಣೆ ತಯಾರಿಯಲ್ಲಿರೋ ಡಿಕೆ ಶಿವಕುಮಾರ್​​ಗೆ ಚಾರ್ಜ್​​ಶೀಟ್ ಶಾಕ್ ಎದುರಾಗಿದೆ. ಡಿ.ಕೆ.ಶಿವಕುಮಾರ್ ಮುಂದಿನ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುತ್ತಾ, ಪಕ್ಷ ಸಂಘಟನೆ ಮಾಡುತ್ತಾ ಬ್ಯುಸಿಯಾಗಿದ್ದಾರೆ. ಮುಂದಿನ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ತರಲೇಬೇಕು ಅಂತಾ ಪಣ ತೊಟ್ಟಿದ್ದಾರೆ. ಸರ್ಕಾರ ರಚನೆ ಕಸರತ್ತಿಗಾಗಿ ಕಾಲಿಗೆ ಚಕ್ರ ಕಟ್ಟಿಕೊಂಡವ್ರಂತೆ ಓಡಾಡ್ತಿದ್ದಾರೆ. ಆದ್ರೆ ಡಿಕೆ ಶಿವಕುಮಾರ್​ ಅವರ […]

Advertisement

Wordpress Social Share Plugin powered by Ultimatelysocial