“ನಿನ್ನ ಬಾಯ್‌ಫ್ರೆಂಡ್ ಅನಕೊಂಡಗೆ ಬಂದ ಗತಿ ನಿನಗೂ ಬರುತ್ತೆ:”:

ಬಾಲಿವುಡ್ ನಟ, ನಿರ್ಮಾಪಕ, ಚಿತ್ರವಿಮರ್ಶಕ ಕಮಲ್ ಆರ್ ಖಾನ್ ತಮ್ಮ ವಿವಾದಾಸ್ಪದ ಹೇಳಿಕೆಗಳಿಂದ ಸದಾ ಸುದ್ದಿಯಲ್ಲಿ ಇರುತ್ತಾರೆ. ಇದೀಗ ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಕುರಿತು ಕೆಆರ್‌ಕೆ ಟ್ವೀಟ್‌ಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.ಬಾಲಿವುಡ್ ಸೂಪರ್ ಸ್ಟಾರ್‌ಗಳ ಕುರಿತು ಕಮಲ್ ಆರ್ ಖಾನ್ ಅಸಂಬದ್ಧ ಕಾಮೆಂಟ್‌ಗಳನ್ನು ಮಾಡುತ್ತಿರುತ್ತಾರೆ. ಸಲ್ಮಾನ್ ಖಾನ್, ಕರಣ್‌ ಜೋಹರ್ ಬಗ್ಗೆಯೂ ಈ ಹಿಂದೆ ಮಾತನಾಡಿದ್ದರು. ಇನ್ನು ಸೌತ್ ಸಿನಿಮಾಗಳು, ಸೌತ್ ಕಲಾವಿದರು ಅಂದರೆ ಆತನಿಗೆ ಅಷ್ಟಕಷ್ಟೆ. ರಾಜಮೌಳಿ ನಿರ್ದೇಶನದ ಬಾಹುಬಲಿ ಚಿತ್ರವನ್ನು ಕೂಡ ಕಾರ್ಟೂನ್ ಸಿನಿಮಾ ಎಂದು ಹೇಳಿ ಆದ ಚರ್ಚೆ ಹುಟ್ಟಾಕ್ಕಿದ್ದರು. ಸದಾ ಯಾರದರೂ ಒಬ್ಬರನ್ನು ಟಾರ್ಗೆಟ್ ಮಾಡುತ್ತಲೇ ಇರುತ್ತಾರೆ. ನೆಗೆಟೀವ್ ಟ್ವೀಟ್‌ಗಳನ್ನು ಮಾಡೋದು ಸರ್ವೇ ಸಾಮಾನ್ಯ ಆಗಿಬಿಟ್ಟಿದೆ. ಇದೇ ಕಾರಣಕ್ಕೆ ಆತನ ಟ್ವಿಟರ್ ಅಕೌಂಟ್ ಸಸ್ಪೆಂಡ್ ಆಗಿದ್ದು ಇದೆ. ಒಮ್ಮೆ ಪೊಲೀಸರು ಬಂಧಿಸಿದ್ದರು. ಸದ್ಯ ರಶ್ಮಿಕಾ ಮಂದಣ್ಣ ‘ಮಿಷನ್ ಮಜ್ನು’ ಸಿನಿಮಾ ಪ್ರಮೋಷನ್‌ನಲ್ಲಿ ಬ್ಯುಸಿ ಆಗಿದ್ದಾರೆ. ಜನವರಿ 20ಕ್ಕೆ ಸಿನಿಮಾ ನೇರವಾಗಿ ಓಟಿಟಿಗೆ ಬರ್ತಿದೆ. ಕಮಲ್ ಆರ್ ಖಾನ್ ಸದ್ಯ ನಟಿ ರಶ್ಮಿಕಾ ಮಂದಣ್ಣ ವಿರುದ್ಧ ತಿರುಗಿ ಬಿದ್ದಿದ್ದಾರೆ. ಆಕೆಯ ಬಗ್ಗೆ ಅಸಭ್ಯವಾಗಿ ಟ್ವೀಟ್‌ಗಳನ್ನು ಮಾಡಿದ್ದಾರೆ.

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮಸಿ ಹೋಗುವಂತೆ ಉಜ್ಜಿ ಪಾತ್ರೆ ತೊಳೆಯುತ್ತಿರುವ ಕೋತಿ!

Tue Jan 10 , 2023
ಕೆಎನ್‌ ಎನ್‌ ನ್ಯೂಸ್‌ ಡೆಸ್ಕ್‌ : ಸಾಮಾಜಿಕ ಮಾಧ್ಯಮದಲ್ಲಿ ಪ್ರತಿದಿನ ಪ್ರಾಣಿಗಳ ಅನೇಕ ವಿಶಿಷ್ಟ ವಿಡಿಯೋಗಳು ವೈರಲ್‌ ಆಗುತ್ತಿರುತ್ತವೆ. ಅವುಗಳಲ್ಲಿ ಕೆಲವೊಂದು ನೋಡಲು ಮುದ್ದಾಗಿರುತ್ತವೆ, ಇನ್ನೂ ಕೆಲವು ನಗು ತರಿಸುತ್ತವೆ. ಇದೀಗ ಅಂತದ್ದೇ ಒಂದು ವಿಡಿಯೋ ವೈರಲ್‌ ಆಗುತ್ತಿದ್ದು, ಇದನ್ನು ನೋಡಿ ನೀವೂ ನಗೋದು ಗ್ಯಾರಂಟಿ.ವೈರಲ್‌ ಆಗಿರುವ ವಿಡಿಯೋದಲ್ಲಿ ಕೋತಿಯೊಂದು ಆರಾಮಾಗಿ ಕುಳಿತು ಪಾತ್ರೆಯೊಂದನ್ನು ತನ್ನ ಕೈಯಲ್ಲಿ ಹಿಡಿದುಕೊಂಡು ಮಸಿ ಹೋಗೋವರ್ಗೂ ಉಜ್ಜಿ ತೊಳೆಯುತ್ತಿರುವುದನ್ನು ನೋಡಬಹುದು. ಈ ವೀಡಿಯೋ ನೋಡಿದ […]

Advertisement

Wordpress Social Share Plugin powered by Ultimatelysocial