SMART PHONE:ಭಾರತದಲ್ಲಿ ಮೈಕ್ರೋಮ್ಯಾಕ್ಸ್‌ ಇನ್‌ ನೋಟ್‌ 2 ಸ್ಮಾರ್ಟ್‌ಫೋನ್‌ ಲಾಂಚ್‌;

ದೇಶಿ ಸ್ಮಾರ್ಟ್‌ಫೋನ್‌ ಕಂಪೆನಿ ಮೈಕ್ರೋಮ್ಯಾಕ್ಸ್‌ ತನ್ನ ಮತ್ತೊಂದು ಹೊಸ ಸ್ಮಾರ್ಟ್‌ಫೋನ್‌ ಲಾಂಚ್‌ ಮಾಡಲು ಸಿದ್ಧತೆ ನಡೆಸಿದೆ. ಭಾರತದಲ್ಲಿ ತನ್ನ ಹೊಸ ಮೈಕ್ರೋಮ್ಯಾಕ್ಸ್ ಇನ್‌ ನೋಟ್‌ 2 ಫೋನ್‌ ಬಿಡುಗಡೆಗೆ ಸಿದ್ದವಾಗಿದೆ. ಸದ್ಯ ಈ ಸ್ಮಾರ್ಟ್‌ಫೋನ್‌ ಇದೇ ಜನವರಿ 25 ರಂದು ಬಿಡುಗಡೆ ಆಗಲಿದೆ ಎಂದು ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್ ಮೂಲಕ ಬಹಿರಂಗಪಡಿಸಿದೆ.

ಟ್ವಿಟರ್‌ನಲ್ಲಿ ಬಿಡುಗಡೆ ದಿನಾಂಕದ ಜೊತೆಗೆ ಸ್ಮಾರ್ಟ್‌ಫೋನ್‌ ಕುರಿತು ಟೀಸರ್ ಅನ್ನು ಸಹ ಹಂಚಿಕೊಂಡಿದ್ದು, ಸ್ಮಾರ್ಟ್‌ಫೋನ್‌ನ ವಿನ್ಯಾಸವನ್ನು ಸಹ ಬಹಿರಂಗಪಡಿಸಿದೆ.

ಮೈಕ್ರೊಮ್ಯಾಕ್ಸ್ಹೌದು, ಮೈಕ್ರೊಮ್ಯಾಕ್ಸ್ ಕಂಪೆನಿ ಭಾರತದಲ್ಲಿ ‘ಇನ್’ ಬ್ರಾಂಡ್ ಅಡಿಯಲ್ಲಿ ಹೊಸ ಇನ್‌ ನೋಟ್‌ 2 ಬಿಡುಗಡೆಗೆ ವೇದಿಕೆ ಸಿದ್ಧಪಡಿಸಿದೆ. ಸದ್ಯ ಮೈಕ್ರೋಮ್ಯಾಕ್ಸ್ ಇನ್‌ ನೋಟ್‌ 2 ಸ್ಮಾರ್ಟ್‌ಫೋನ್‌ ವಿಶೇಷತೆ ಬಗ್ಗೆ ಯಾವುದೇ ವಿವರವನ್ನು ಬಹಿರಂಗಪಡಿಸಿಲ್ಲ. ಆದರೆ ಟೀಸರ್ ಮೈಕ್ರೋಮ್ಯಾಕ್ಸ್‌ IN ನೋಟ್ 2 “ಡ್ಯಾಜ್ಲಿಂಗ್ ಗ್ಲಾಸ್ ಫಿನಿಶ್” ಅನ್ನು ಹೊಂದಿರುತ್ತದೆ ಎಂದು ತಿಳಿಸುತ್ತದೆ. ಇದಲ್ಲದೆ ಈ ಸ್ಮಾರ್ಟ್‌ಫೋನ್‌ ಕ್ವಾಡ್‌ ರಿಯರ್‌ ಕ್ಯಾಮೆರಾ ಸೆಟಪ್‌ ಹೊಂದಿರುವ ಸಾದ್ಯತೆ ಇದೆ ಎಂದು ಹೇಳಲಾಗಿದೆ. ಆದರೆ ಆನ್‌ಲೈನ್‌ನಲ್ಲಿ ಈ ಸ್ಮಾರ್ಟ್‌ಫೋನ್‌ ಬಗ್ಗೆ ಹಲವು ಮಾಹಿತಿ ಲೀಕ್‌ ಆಗಿದೆ. ಲೀಕ್‌ ಮಾಹಿತಿ ಪ್ರಕಾರ ಈ ಸ್ಮಾರ್ಟ್‌ಫೋನ್‌ ವಿಶೇಷತೆ ಏನಿರಬಹುದು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಮೈಕ್ರೋಮ್ಯಾಕ್ಸ್‌ ಇನ್‌ ನೋಟ್‌ 2

ಮೈಕ್ರೋಮ್ಯಾಕ್ಸ್‌ ಇನ್‌ ನೋಟ್‌ 2 ಸ್ಮಾರ್ಟ್‌ಫೋನ್‌ 6.43 ಇಂಚಿನ ಅಮೋಲೆಡ್‌ ಡಿಸ್‌ಪ್ಲೇ ಹೊಂದಿರಲಿದೆ ಎನ್ನಲಾಗಿದೆ. ಇದು ಮೀಡಿಯಾ ಟೆಕ್ ಹಿಲಿಯೋ G95 SoC ಪ್ರೊಸೆಸರ್‌ ಬಲವನ್ನು ಪಡೆದಿರುವ ಸಾಧ್ಯತೆ ಇದೆ. ಜೊತೆಗೆ 6GB RAM ಮತ್ತು 128GB ಇಂಟರ್‌ ಸ್ಟೋರೇಜ್‌ ಆಯ್ಕೆಯಲ್ಲಿ ಲಭ್ಯವಾಗಲಿದೆ. ಇನ್ನು ಟೀಸರ್‌ ನಲ್ಲಿನ ಲುಕ್‌ ಪ್ರಕಾರ ಈ ಸ್ಮಾರ್ಟ್‌ಫೋನ್‌ ಕ್ವಾಡ್‌ ರಿಯರ್‌ ಕ್ಯಾಮೆರಾ ಸೆಟಪ್‌ ಹೊಂದಿರುವ ಸಾದ್ಯತೆ ಇದೆ. ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಹಾಗೆಯೇ ಈ ಸ್ಮಾರ್ಟ್‌ಫೋನ್‌ 5000 mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿರಲಿದೆ ಎನ್ನಲಾಗಿದೆ. ಇನ್ನು ಈ ಫೋನ್ ಬ್ರೌನ್ ಮತ್ತು ಬ್ಲ್ಯಾಕ್ ಕಲರ್‌ ಆಯ್ಕೆಯಲ್ಲಿ ಬರಲಿದೆ ಎಂದು ಕಂಪನಿಯು ಬಹಿರಂಗಪಡಿಸಿದೆ. ಇನ್ನು ಮೈಕ್ರೋಮ್ಯಾಕ್ಸ್‌ ಕಂಪೆನಿ ಈಗಾಗಲೇ ಲಾಂಚ್‌ ಮಾಡಿರುವ ಮೈಕ್ರೋಮ್ಯಾಕ್ಸ್‌ ಇನ್‌ ನೋಟ್‌ 1 ಮತ್ತು ಇನ್‌ 1B ಫೀಚರ್ಸ್‌ ಹೇಗಿದೆ ಅನ್ನೊದನ್ನ ಕೆಳಗಿನ ಹಂತಗಳಲ್ಲಿ ತಿಳಿಯಿರಿ.

ಮೈಕ್ರೋಮ್ಯಾಕ್ಸ್ ಇನ್ ನೋಟ್ 1

ಮೈಕ್ರೋಮ್ಯಾಕ್ಸ್ ಇನ್ ನೋಟ್ 1 ಸ್ಮಾರ್ಟ್‌ಫೋನ್‌ 6.67-ಇಂಚಿನ ಫುಲ್‌ ಹೆಚ್‌ಡಿ ಡಿಸ್‌ಪ್ಲೇಯನ್ನ ಹೊಂದಿದ್ದು, ಪಂಚ್‌ಹೋಲ್‌ ಡಿಸ್‌ಪ್ಲೇ ವಿನ್ಯಾಸವನ್ನು ಹೊಂದಿದೆ. ಇದು ಆಕ್ಟಾ-ಕೋರ್ ಮೀಡಿಯಾ ಟೆಕ್ ಹಿಲಿಯೊ G85 SoC ಪ್ರೊಸೆಸರ್‌ ಹೊಂದಿದ್ದು, ಆಂಡ್ರಾಯ್ಡ್‌ 10 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಜೊತೆಗೆ 4GB RAM ಮತ್ತು 64GB, 128GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯದ ಆಯ್ಕೆಯನ್ನು ಹೊಂದಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ಕ್ವಾಡ್ ರಿಯರ್ ಕ್ಯಾಮೆರಾ ಸೆಟಪ್‌ ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 48 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಜೊತೆಗೆ 5,000mAh ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ಅಪ್‌ ಅನ್ನು ಪಡೆದುಕೊಂಡಿವೆ.

ಮೈಕ್ರೋಮ್ಯಾಕ್ಸ್‌ ಇನ್‌ 1B

ಮೈಕ್ರೋಮ್ಯಾಕ್ಸ್‌ ಇನ್‌ 1B ಸ್ಮಾರ್ಟ್‌ಫೋನ್‌ 6.5 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದೆ. ಇದು ಮೀಡಿಯಾಟೆಕ್ ಹಿಲಿಯೊ G35 SoC ಪ್ರೊಸೆಸರ್‌ ಅನ್ನು ಹೊಂದಿದ್ದು, ಆಂಡ್ರಾಯ್ಡ್‌ 10 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೇಯೇ 2GB RAM ಮತ್ತು 32 GB ಸ್ಟೋರೇಜ್‌ ಹಾಗೂ 4GB RAM ಮತ್ತು 64GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯದ ವೇರಿಯೆಂಟ್‌ ಆಯ್ಕೆಯನ್ನು ಒಳಗೊಂಡಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ಡ್ಯುಯೆಲ್‌ ರಿಯರ್‌ ಕ್ಯಾಮೆರಾ ಸೆಟಪ್‌ ಹೊಂದಿದ್ದು, ಪ್ರೈಮರಿ ಕ್ಯಾಮೆರಾ 13 ಮೆಗಾಪಿಕ್ಸೆಲ್‌ ಸೆನ್ಸಾರ್‌ ಹೊಂದಿದೆ. ಜೊತೆಗೆ 5,000mAh ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ಅಪ್‌ ಅನ್ನು ಪಡೆದುಕೊಂಡಿವೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

DOLLAR:ಕ್ರಿಪ್ಟೋ ಮಾರುಕಟ್ಟೆಯಲ್ಲಿ 1 ಟ್ರಿಲಿಯನ್ ಡಾಲರ್ ನಷ್ಟ;

Sat Jan 22 , 2022
ನವದೆಹಲಿ: ಬಿಟ್ ಕಾಯಿನ್ ಹಾಗೂ ಇತರ ಡಿಜಿಟಲ್ ಕ್ರಿಪ್ಟೋಕರೆನ್ಸಿಗಳು ತೀವ್ರ ಕುಸಿತ ಕಂಡ ಪರಿಣಾಮ ಜಾಗತಿಕ ಕ್ರಿಪ್ಟೋ ಮಾರುಕಟ್ಟೆ ಮೌಲ್ಯ ತೀವ್ರವಾಗಿ ಕುಸಿತ ಕಂಡಿದೆ. ಬಿಟ್ ಕಾಯಿನ್ ನ ಮೌಲ್ಯ ಪ್ರತಿ ಕಾಯಿನ್ ಗೆ 35,000 ಡಾಲರ್ ನಷ್ಟಿದ್ದು, ನವೆಂಬರ್ 2021 ನಿಂದ ಏರಿಕೆ ಕಂಡ ಬಳಿಕ ಇದೇ ಮೊದಲ ಬಾರಿಗೆ ಶೇ.40 ಕ್ಕಿಂತಲೂ ಹೆಚ್ಚು ಮಾರುಕಟ್ಟೆ ಮೌಲ್ಯವನ್ನು ಕಳೆದುಕೊಂಡಿದೆ. ನವೆಂಬರ್ ನಲ್ಲಿ ಬಿಟ್ ಕಾಯಿನ್ ಮೌಲ್ಯ 69,000 ಡಾಲರ್ ಆಸುಪಾಸಿನಲ್ಲಿತ್ತು […]

Advertisement

Wordpress Social Share Plugin powered by Ultimatelysocial