ಮೈ ಕೊರೆಯುವ ಚಳಿಗೆ ತತ್ತರಿಸಿದ ಜನ: 85 ವರ್ಷದಲ್ಲೆ ಕನಿಷ್ಟ ತಾಪಮಾನ ಕಂಡ ಬೀದರ್..!

ಮೈ ಕೊರೆಯುವ ಚಳಿಗೆ ತತ್ತರಿಸಿದ ಜನ: 85 ವರ್ಷದಲ್ಲೆ ಕನಿಷ್ಟ ತಾಪಮಾನ ಕಂಡ ಬೀದರ್..!

ಅಕಾಲಿಕ ಮಳೆಯಿಂದ ತಡವಾಗಿ ಆರಂಭವಾಗಿರೋ ಚಳಿಗಾಲದ ತೀವ್ರತೆ ದಿನದಿಂದ ದಿನಕ್ಕೆ ಹೆಚ್ಚಾಗಿದೆ. ದಕ್ಷಿಣ ಒಳಭಾಗ ಹಾಗೂ ಬಯಲು ಸೀಮೆಯಲ್ಲಿ ತಾಪದ ಮಟ್ಟ ಗಣನೀಯ ಇಳಿಕೆ ಕಂಡಿದೆ. ತಾಪಮಾನದಲ್ಲಿ 85 ವರ್ಷಗಳಿಂದೀಚೆಗೆ ಎಂದು ಕಂಡಿರದ ಇಳಿಕೆ ಬೀದರ್ ನಲ್ಲಿ ದಾಖಲಾಗಿದ್ದು ಸೋಮವಾರ 9.7 ಡಿಗ್ರಿ ಸೆಲ್ಸಿಯಸ್, ಮಂಗಳವಾರ 9.4 ಡಿಗ್ರಿ ಸೆಲ್ಸಿಯಸ್ ಗೆ ಇಳಿದಿದೆ.

1936ರಲ್ಲಿ 10 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದ ತಾಪಮಾನದ ಪ್ರಮಾಣ ಕನಿಷ್ಟ ಎಂದು ಗುರುತಿಸಲಾಗಿತ್ತು.

ಡಿಸೆಂಬರ್ 20 ಮತ್ತು 21 ರ ಮುಂಜಾನೆ ವೇಳೆ ಕನಿಷ್ಟ ತಾಪಮಾನ ಕಂಡುಬಂದಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಈ ಸಂದರ್ಭದಲ್ಲಿ ಕೇವಲ ಬೀದರ್ ಮಾತ್ರವಲ್ಲ ರಾಜ್ಯದ ಉತ್ತರ ಹಾಗೂ ದಕ್ಷಿಣ ಭಾಗದಲ್ಲೂ ಕನಿಷ್ಟ ತಾಪಮಾನ ಕಂಡುಬಂದಿದೆ. ಅಲ್ಲದೆ ದಿನಕಳೆದಂತೆ ಬೀದರ್ ನ ವಾತಾವರಣ ಮರ್ಕ್ಯೂರಿ ಲೆವೆಲ್ಸ್ ಇಳಿಕೆ ಕಾಣುತ್ತಿದ್ದು, ಇನ್ನಷ್ಟು ದಿನಗಳ ಕಾಲ ತಾಪಮಾನ ಕುಸಿತ ಮುಂದುವರೆಯಲಿದೆ.

ಬೀದರ್ ಮಾತ್ರವಲ್ಲದೆ ಮಂಗಳವಾರದಂದು ವಿಜಯಪುರದಲ್ಲಿ 10.04, ಧಾರವಾಡ 10.08 ಮತ್ತು ದಾವಣಗೆರೆ 10.09 ಡಿಗ್ರಿಸೆಲ್ಸಿಯಸ್ ನಷ್ಟು ಕನಿಷ್ಟ ತಾಪಮಾನ ವರದಿಯಾಗಿದೆ. ದಾಖಲೆಯ ಪ್ರಕಾರ ಡಿಸೆಂಬರ್ 16ರಿಂದ ರಾಜ್ಯದಲ್ಲಿ ಚಳಿಗಾಲ ಶುರುವಾಗಿದ್ದು, ಇನ್ನು ನಾಲ್ಕು ವಾರಗಳ ಕಾಲ ರಾಜ್ಯದಲ್ಲಿ ಈ ಹವೆ ಮುಂದುವರೆಯಲಿದೆ. ಆ ನಂತರ ತಾಪಮಾನ ಹೆಚ್ಚಬಹುದು ಎಂದು ಹವಾಮಾನ ಇಲಾಖೆ ತಿಳಿಸಿದೆ

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಚಳಿಗಾಲದಲ್ಲಿ ಮದ್ಯಪಾನ ಎಷ್ಟು ಸುರಕ್ಷಿತ?

Wed Dec 22 , 2021
ಕ್ರಿಸ್ಮಸ್ ಮತ್ತು ಹೊಸ ವರ್ಷವನ್ನು ಆಚರಿಸಲು ಮತ್ತು ಕಳೆದ ವರ್ಷಕ್ಕೆ ವಿದಾಯ ಹೇಳಲು ಪ್ರತಿಯೊಬ್ಬರೂ ತಮ್ಮದೇ ಆದ ಶೈಲಿಯಲ್ಲಿ ತಯಾರಿ ನಡೆಸುತ್ತಿದ್ದಾರೆ. ಈ ಸಂದರ್ಭದಲ್ಲಿ ಮದ್ಯಪಾನ ಮಾಡಲು ಇಷ್ಟಪಡುತ್ತಾರೆ. ಆಲ್ಕೋಹಾಲ್ ಶೀತದ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ, ಆದರೆ ಚಳಿಗಾಲದಲ್ಲಿ ಆಲ್ಕೊಹಾಲ್ ಕುಡಿಯುವುದು ಅಪಾಯಕಾರಿ. ತಂಪಾದ ದಿನದಲ್ಲಿ ಮದ್ಯಪಾನ ಮಾಡುವುದರಿಂದ ಹೃದಯದ ಮೇಲೆ ಒತ್ತಡ ಹೆಚ್ಚಾಗುತ್ತದೆ, ಇದು ಹೃದಯಾಘಾತಕ್ಕೆ ಕಾರಣವಾಗಬಹುದು. ಆದ್ದರಿಂದ, ಚಳಿಗಾಲದಲ್ಲಿ ಕುಡಿಯುವುದು ಹಾನಿಕಾರಕ ಎಂದು ತಜ್ಞರು ಹೇಳುತ್ತಾರೆ. ಆಲ್ಕೋಹಾಲ್ […]

Advertisement

Wordpress Social Share Plugin powered by Ultimatelysocial