ಕಳಪೆ ಕಾಮಗಾರಿ ಅಧಿಕಾರಿಗಳು ಗುತ್ತಿಗೆದಾರರ ಮೇಲೆ ಆಕ್ರೋಶ.

ಕಳಪೆ ಕಾಮಗಾರಿ ಅಧಿಕಾರಿಗಳು ಗುತ್ತಿಗೆದಾರರ ಮೇಲೆ ಆಕ್ರೋಶ ರಸ್ತೆ ಡಾಂಬರೀಕರಣ ಕಳಪೆ ಮಟ್ಟದಿಂದ ನಿರ್ಮಾಣ ಮಾಡಿರುವ ಸಂಬಂಧಪಟ್ಟ ಅಧಿಕಾರಿಗಳನ್ನು ವರ್ಗಾವಣೆ ಹಾಗೂ ಗುತ್ತಿಗೆದಾರರ ಪರವಾನಿಗೆ ರದ್ದು ಪಡಿಸಲು ಒತ್ತಾಯಿಸಿ ಮನವಿ ಪತ್ರ ಸಲ್ಲಿಸಲಾಯಿತು
ಕರ್ನಾಟಕ ಪ್ರಜಾ ಶಕ್ತಿ ಸಮಿತಿ ರಿ ಬೀದರ್ ಜಿಲ್ಲಾ ಘಟಕ ವತಿಯಿಂದ ಬೀದರ್ ನಗರದ ಅಂಬೇಡ್ಕರ್ ವರ್ತದಿಂದ ಸರ್ಕಾರಿ ಆಸ್ಪತ್ರೆ ವರಿಗೆ ಡಾಂಬರೀಕರಣ ರಸ್ತೆಯನ್ನು ಡಬ್ಲ್ಯೂ ಎಂ ಎಂ ಬಳಸಿ ಸುಮಾರು ಒಂದು ವರ್ಷದ ನಂತರ ಬಿ.ಟಿ.ಬಿ.ಎಮ್ ಮಣ್ಣು ಹಾಗೂ ದೂಳುಗಳ ಮೇಲೆ ರಸ್ತೆ ಡಾಂಬರೀಕರಣ ಮಾಡಲಾಗಿದೆ ಸರ್ಕಾರದ ನಿಯಮದಂತೆ ನಿರ್ಮಾಣ ಮಾಡದ ಸಂಬಂಧಪಟ್ಟ ಗುತ್ತಿಗೆದಾರರು ಮತ್ತು ಅಧಿಕಾರಿಗಳು ಸೇರಿಕೊಂಡು ರಸ್ತೆಯ ಕಳಪೆ ಮಟ್ಟದಿಂದ ನಿರ್ಮಾಣ ಮಾಡಿದ್ದಾರೆ ಹಾಗೂ ಕಾರ್ಯನಿರ್ವಾಹಕ ಅಧಿಕಾರಿಯವರು ಸುಳ್ಳು ವರದಿಯನ್ನು ನೀಡಿದ್ದಾರೆ ಎಂದು ಆರೋಪಿಸಿದರು ಕಳಪೆ ಮಟ್ಟದಿಂದ ನಿರ್ಮಾಣ ಮಾಡಿ ಸರ್ಕಾರದ ಹಣವನ್ನು ದುರುಪಯೋಗ ಮಾಡಿದ್ದಾರೆ ಹಾಗೂ ಇವರು ಬೀದರ್ ನಗರದಲ್ಲಿ ತಿಂಗಳಗಳ ಹಿಂದೆ ಶಿವನಗರದಿಂದ ಏರ್ಪೋಸ್ ಗೇಟ್ ವರೆಗೆ ಭಗತ್ ಸಿಂಗ್ ವರ್ತದಿಂದ ಗುಂಪವರೆಗೆ ಅಂಬೇಡ್ಕರ್ ವೃತ್ತದಿಂದ ಮಡಿವಾಳೆಶ್ವರ ವೃತ್ತದ ವರೆಗೆ ಹಾಗೂ ಬೀದರ್ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕಾಮಗಾರಿಗಳನ್ನು ಮಾಡಿದರು ಅವೆಲ್ಲ ಕಳಪೆ ಮಟ್ಟದಿಂದ ಕೂಡಿರುವುದರಿಂದ ಇವರ ಮೇಲೆ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಸಂಪೂರ್ಣ ತನಿಖೆ ಮಾಡಬೇಕು ಹಾಗೂ ಸಂಬಂಧಪಟ್ಟ ಅಧಿಕಾರಿಗಳನ್ನು ಬೀದರ್ ಜಿಲ್ಲೆಯಿಂದ ಬೇರೆ ಜಿಲ್ಲೆಗೆ ವರ್ಗಾವಣೆ ಮಾಡಬೇಕೆಂದು ಹಾಗೂ ಗುತ್ತಿಗೆದಾರರ ಪರವಾನಿಗೆ ರದ್ದು ಪಡಿಸಬೇಕೆಂದು ಒತ್ತಾಯಿಸಿ ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿಯವರಿಗೆ ಬೃಹತ್ ಪ್ರತಿಭಟನಾ ರ್ಯಾಲಿ ಮಾಡುವುದರ ಮೂಲಕ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತುಈ ಸಂದರ್ಭದಲ್ಲಿ ಸಾಯಿ ಸಿಂದೆ ಮಹೇಂದ್ರ ಕುಮಾರ್ ಹೊಸಮನಿ ಬಸವರಾಜ್ ಬಾವಿದೊಡ್ಡಿ ನಿತೀಶ್ ಸಕ್ಪಾಲ ಕಲ್ಲಪ್ಪ ಸತೀಶ್ ರಕ್ಷೆ ಸೂರ್ಯಕಾಂತ್ ಸಾಧುರೆ ಸಂಗಮೇಶ್ ಬಾವಿದೊಡ್ಡಿ ಗುರು ನೆಮ್ತಾಬಾದ್ ರಮೇಶ್ ಪಾಸ್ವಾನ್ ರಾಹುಲ್ ಹಾಲೆಪುರಗಿಕರ್ ರವಿ ಮೇತ್ರೆ ರಜನಿಕಾಂತ್ ಕಾಂಬಳೆ ವಿನೋದ್ ಶೀಂಧೆ ರಾಕೇಶ್ ಕುರುಬಖೆಳಗಿ ಗೌತಮ್ ಮೇತ್ರೆ ದಿಲೀಪ್ ಸೋನಿ ಆಕಾಶ್ ತ್ರಿ ಮುಖಿ ಧನರಾಜ್ ಮೇತ್ರೆಹಾಗೂ ಇನ್ನಿತರು ಇದ್ದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ರಾಮಯ್ಯ ಸೂತ್ರಧಾರ ನಾಟಕ ತಂಡದ ಸಂಸ್ಥಾಪಕ.

Mon Jan 16 , 2023
  ರಾಮಯ್ಯ 1946ರ ಜನವರಿ 16ರಂದು ಕನಕಪುರದ ತಾಲ್ಲೂಕಿನ ದೊಡ್ಡ ಆಲನಹಳ್ಳಿಯಲ್ಲಿ ಜನಿಸಿದರು. ತಂದೆ ವೆಂಕಟೇಶಯ್ಯ. ತಾಯಿ ಮಂಗಳಮ್ಮ. ಅವರು ಬಿ.ಎಸ್‌ಸಿ. ಮತ್ತು ಎಲ್.ಎಲ್.ಬಿ. ಪದವಿ ಗಳಿಸಿದರು. ರಾಮಯ್ಯ ಅವರು ಉದ್ಯೋಗಕ್ಕೆ ಸೇರಿದ್ದು ವಿಮಾ ಇಲಾಖೆಯಲ್ಲಿ. 29 ವರ್ಷದ ಸೇವೆಯ ನಂತರ ಸ್ವಯಂ ನಿವೃತ್ತಿ ಪಡೆದು ವಕೀಲಿ ವೃತ್ತಿಗೆ ತೊಡಗಿದರು. ರಾಮಯ್ಯ ಅವರು ಹೆಸರಾಗಿದ್ದು ಅವರು ಹವ್ಯಾಸಕ್ಕಾಗಿ ಆಯ್ದುಕೊಂಡ ರಂಗಭೂಮಿಯಿಂದ. ಶಾಲಾ ಕಾಲೇಜು ದಿನಗಳಿಂದಲೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಅವರದ್ದು ಸಕ್ರಿಯ […]

Advertisement

Wordpress Social Share Plugin powered by Ultimatelysocial