ಮಿನುಗು ತಾರೆ ಕಲ್ಪನಾ ಕಂಡು ಅಣ್ಣಾವ್ರು ಕೈ ಮುಗಿದಿದ್ದು ಏಕೆ?.

 

ನ್ನಡ ಸಿನಿಮಾರಂಗದಲ್ಲಿ  ಮಿನುಗು ತಾರೆ ಕಲ್ಪನಾ ಬಗ್ಗೆ ಇರೋ ಗೌರವ ವಿಶೇಷವಾಗಿದೆ. ಕಲ್ಪನಾ ಅಭಿನಯದ  ವಿಷಯದಲ್ಲಿ ಎಲ್ಲರೂ ತಲೆ ಬಾಗಲೇಬೇಕು. ಶರಪಂಜರ ಸಿನಿಮಾ ಅದಕ್ಕೆ ದಿ ಬೆಸ್ಟ್ ಎಕ್ಸಾಂಪಲ್. ಅದನ್ನೂ ಮೀರಿಸೋ ಇನ್ನೂ ಒಂದು ಸಿನಿಮಾ ಇದೆ.ಅದು ಎರಡು ಕನಸು  ಅಂತ ಹೇಳಬಹುದು. ಡಾಕ್ಟರ್ ರಾಜ್​ಕುಮಾರ್ ಮತ್ತು ಕಲ್ಪನಾ ಅವರ ಜೋಡಿಯ ಈ ಚಿತ್ರದಲ್ಲಿ ಮಂಜುಳಾ ಕೂಡ ಇದ್ದಾರೆ. ಆದರೆ ಕಲ್ಪನಾ ತಮ್ಮ ಅಭಿನಯದಿಂದಲೇ ಈ ಚಿತ್ರದಲ್ಲಿ ಜನಮನ ಗೆದ್ದು ಬಿಟ್ಟರು. ಎರಡು ಕನಸು ಅನ್ನೋದು ಒಂದು ಅದ್ಭುತ ಸಿನಿಮಾ ಕೂಡ ಹೌದು. ಈ ಚಿತ್ರವನ್ನ ರೋಮ್ಯಾಂಟಿಕ್ ಹಿಟ್ ಸಿನಿಮಾ ಅಂತಲೂ ಕರೆಯುತ್ತಾರೆ.ಎರಡು ಕನಸು ಎಂಬ ಕನ್ನಡದ ಅದ್ಭುತ ಚಿತ್ರಕೃತಿ
ಎರಡು ಕನಸು ಸಿನಿಮಾ ಎಂತಹ ನಿರ್ಭಾವುಕ ವ್ಯಕ್ತಿಯ ಮನಸು ಕನಲುವಂತೆ ಮಾಡುವ ಶಕ್ತಿಯನ್ನ ಹೊಂದಿದೆ. ದಾಂಪತ್ಯದಲ್ಲಿ ಹತ್ತು ಹಲವು ಸಮಸ್ಯೆ ಇದ್ದರೂ ಈ ಚಿತ್ರ ನೋಡಿದಾಗ, ಅದರಲ್ಲೂ ಕಲ್ಪನಾ ಅಭಿನಯ ನೋಡಿದಾಗ ಎಂತಹ ಕಲ್ಲು ಮನಸ್ಸು ಒಂದ್ ಅರೆಕ್ಷಣ ಕರಗಿ ಬಿಡುತ್ತದೆ.ಎರಡು ಕನಸು ಚಿತ್ರದಲ್ಲಿ ಡೈರೆಕ್ಟರ ದೊರೆ-ಭಗವಾನ ತುಂಬಾ ಒಳ್ಳೆ ಕತೆಯನ್ನ ಆಯ್ದುಕೊಂಡಿದ್ದರು. ಬರಹಗಾರ್ತಿ ವಾಣಿ ಅವರ ಎರಡು ಕನಸು ಕಾದಂಬರಿಯನ್ನ ಇಲ್ಲಿ ಸಿನಿಮಾ ಮಾಡಿದ್ದರು.ಪ್ರೇಯಿಸಿಯನ್ನ ಮನದಲ್ಲಿಟ್ಟುಕೊಂಡು ಹೆಂಡತಿ ಜೊತೆಗೆ ಸಂಸಾರ ಮಾಡಲಾಗದೇ ತೊಳಲಾಡೋ ಪ್ರೊಫೆಸರ್ ಆಗಿ ಡಾಕ್ಟರ್ ರಾಜ್​ಕುಮಾರ್ ಎಂದೆಂದೂ ಅದ್ಬುತ ಬಿಡಿ. ರಾಜ್​ಕುಮಾರ್ ಅವರು ಈ ಒಂದು ಪಾತ್ರದಲ್ಲಿ ಜೀವಿಸಿದ್ದರು. ಅದನ್ನ ಅನುಭವಿಸಿ ಅಭಿನಯಿಸಿದ್ದರು.ಡಾಕ್ಟರ್ ರಾಜ್ ಅವರ ವ್ಯಕ್ತಿತ್ವಕ್ಕೆ ತಕ್ಕನಾಗಿಯೇ ರಾಜ್​ಕುಮಾರ್ ಅವರ ಪಾತ್ರವನ್ನ ಈ ಚಿತ್ರದಲ್ಲಿ ಡಿಸೈನ್ ಮಾಡಲಾಗಿತ್ತು. ಅಂತಹ ಈ ಪಾತ್ರಕ್ಕೆ ಜೋಡಿಯಾಗಿ ಮಿನುಗು ತಾರೆ ಕಲ್ಪನಾ ಅಭಿನಯಿಸಿದ್ದರು.ಕಲ್ಪನಾ ಅಭಿನಯಿಸಿದ್ದರು ಅನ್ನೋದಕ್ಕಿಂತಲೂ ಆ ಗೌರಿ ಅನ್ನುವ ಪಾತ್ರವನ್ನ ಜೀವಿಸಿದ್ದರು. ಎಂದೂ ಟಚ್ ಮಾಡದೇ ಇರೋ ಗಂಡನ ಪ್ರೀತಿಗಾಗಿಯೇ ಹಂಬಲಿಸೋ ಈ ಗೌರಿ ಪಾತ್ರ ಕನ್ನಡ ನಾಡಿನ ಜನರ ಮನದಲ್ಲಿ ಇನ್ನೂ ಇದೆ.ಇಂತಹ ಪಾತ್ರದ ಕ್ಲೈಮ್ಯಾಕ್ಸ್ ಅದ್ಭುತವೇ ಬಿಡಿ. ಡಾಕ್ಟರ್ ರಾಜ್​ಕುಮಾರ್ ಮತ್ತು ಕಲ್ಪನಾ ಅವರ ಕೊನೆ ದೃಶ್ಯದಲ್ಲಿ ಕಲ್ಪನಾ ಅದ್ಭುತ ಮಾತುಗಳನ್ನ ಆಡ್ತಾನೇ ಹೋಗ್ತಾರೆ. ಇದನ್ನ ಕೇಳಿದ ಪ್ರತಿ ಪ್ರೇಕ್ಷಕ ಒಂದೊಮ್ಮೆ ತದೇಕ ಚಿತ್ತದಿಂದಲೇ ನೋಡುತ್ತಲೇ ಇರ್ತಾನೆ.ಎರಡು ಕನಸು ಚಿತ್ರದ ಈ ಕಟ್ಟ ಕಡೆಯ ದೃಶ್ಯ ಮುಗಿದ್ಮೇಲೆ ಸೆಟ್​ನಲ್ಲಿದ್ದವರೆಲ್ಲ ಚಪ್ಪಾಳೆ ಹೊಡೆದರು. ಅದ್ಭುತವಾಗಿಯೇ ದೃಶ್ಯ ಬಂದಿದೆ ಅಂತ ತಮ್ಮದೇ ರೀತಿಯಲ್ಲಿ ಪ್ರಶಂಸೆ ವ್ಯಕ್ತಪಡಿಸಿದರು.ಆದರೆ ಡಾಕ್ಟರ್ ರಾಜ್​ಕುಮಾರ್ ಹಾಗೆ ಮಾಡಲಿಲ್ಲ, ತಮ್ಮ ಎರಡೂ ಕೈಗಳನ್ನ ಜೋಡಿಸಿ ಮನಸಾರೆ ಗೌರವದಿಂದಲೇ ಕೈಮುಗಿದರು. ಆ ಕ್ಷಣ ವಿಚಲಿತರಾದ ಕಲ್ಪನಾ, ದೊಡ್ಡವರು ಚಿಕ್ಕವರಿಗೆ ಕೈ ಮುಗಿಯಬಾರದು. ಚಿಕ್ಕವಳಾದ ನನಗೆ ಶ್ರೇಯಸ್ಸಲ್ಲ ಅಂತ ರಾಜ್​ ಕುಮಾರ್ ಅವರಿಗೆ ಹೇಳಿದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ತಮ್ಮದೇ ಲವ್ ಸ್ಟೋರಿಗೆ ನಾಯಕ-ನಾಯಕಿಯರಾದ ಪವಿತ್ರಾ ಲೋಕೇಶ್ ನರೇಶ್

Fri Mar 3 , 2023
ತೆಲುಗಿನ ನಟ ನರೇಶ್ ಹಾಗೂ ಕನ್ನಡದ ನಟಿ ಪವಿತ್ರಾ ಲೋಕೇಶ್ ಪ್ರೀತಿ, ಪ್ರೇಮದ ಕುರಿತು ಯಾವ ವಿಷಯವೂ ಇದೀಗ ಗುಟ್ಟಾಗಿ ಉಳಿದಿಲ್ಲ. ಇದೇ ಕಾರಣಕ್ಕೆ ನರೇಶ್ ಎರಡನೇ ಪತ್ನಿ ರಮ್ಯಾ ಹಾಗೂ ನರೇಶ್ ಗೆ ಸಾಕಷ್ಟು ಗಲಾಟೆಗಳು ನಡೆದಿದೆ. ಇದೀಗ ಈ ಸಂಬಂಧದ ಮೇಲೆಯೇ ತೆಲುಗಿನಲ್ಲಿ ಸಿನಿಮಾ ಮಾಡುತ್ತಿದ್ದಾರೆ ನಿರ್ದೇಶಕ ಎಂ.ಆರ್.ರಾಜು. ಈ ಸಿನಿಮಾಗೆ ಸ್ವತಃ ಪವಿತ್ರಾ ಲೋಕೇಶ್ ಮತ್ತು ನರೇಶ್ ನಾಯಕ ಹಾಗೂ ನಾಯಕಿ ಎನ್ನಲಾಗುತ್ತಿದೆ. ಮೂಲಗಳ ಪ್ರಕಾರ […]

Advertisement

Wordpress Social Share Plugin powered by Ultimatelysocial