ಭಾರತದ ಗಾನ ಕೋಗಿಲೆ, ಅಮರ ದನಿ ಲತಾ ಮಂಗೇಶ್ಕರ್ ಅವರು ಭಾನುವಾರ ವಿಧಿವಶರಾಗಿದ್ದು!

 

ನವದೆಹಲಿ: ಭಾರತದ ಗಾನ ಕೋಗಿಲೆ, ಅಮರ ದನಿ ಲತಾ ಮಂಗೇಶ್ಕರ್ ಅವರು ಭಾನುವಾರ ವಿಧಿವಶರಾಗಿದ್ದು, ಈ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಸೇರಿದಂತೆ ಗಣ್ಯಾತಿ ಗಣ್ಯರು ಕಂಬನಿ ಮಿಡಿದಿದ್ದಾರೆ.ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಪ್ರಧಾನಿ ಮೋದಿಯವರು, ನಾನು ಹೇಳಲಾಗದಷ್ಟು ದುಃಖಿತನಾಗಿದ್ದೇನೆ. ದಯೆ ಮತ್ತು ಕಾಳಜಿಯುಳ್ಳ ಲತಾ ದೀದಿ ನಮ್ಮನ್ನು ಅಗಲಿದ್ದಾರೆ. ಅವರ ಅಗಲುವಿಕೆ ನಮ್ಮ ದೇಶಕ್ಕೆ ತುಂಬಲಾರದ ನಷ್ಟವಾಗಿದೆ. ಮುಂಬರುವ ಪೀಳಿಗೆ ಅವರನ್ನು ಭಾರತೀಯ ಸಂಸ್ಕೃತಿಯ ನಿಷ್ಠಾವಂತೆ ಎಂದು ನೆನಪಿಸಿಕೊಳ್ಳುತ್ತವೆ, ಅವರ ಮಧುರ ಧ್ವನಿಯು ಜನರನ್ನು ಮಂತ್ರಮುಗ್ಧಗೊಳಿಸುವ ಅಪ್ರತಿಮ ಸಾಮರ್ಥ್ಯವನ್ನು ಹೊಂದಿತ್ತು ಎಂದು ಹೇಳಿದ್ದಾರೆ.ರಾಷ್ಟ್ರಪತಿ ರಾಮನಾಥ್ ಕೋವಿಂದ್ ಟ್ವೀಟ್ ಮಾಡಿ, ಲತಾ ಜಿ ಅವರ ನಿಧನವು ನನ್ನು ಸೇರಿದಂತೆ ಪ್ರಪಂಚದಾದ್ಯಂತ ಲಕ್ಷಾಂತರ ಜನರಿಗೆ ನೋವು ತಂದಿದೆ. ಅವರ ವಿಶಾಲ ಶ್ರೇಣಿಯ ಹಾಡುಗಳಲ್ಲಿ, ಭಾರತದ ಸಾರ ಮತ್ತು ಸೌಂದರ್ಯವನ್ನು ನಿರೂಪಿಸಿದೆ. ಮುಂದಿನ ತಲೆಮಾರುಗಳು ತಮ್ಮ ಆಂತರಿಕ ಭಾವನೆಗಳ ಅಭಿವ್ಯಕ್ತಿಯನ್ನು ಕಂಡುಕೊಳ್ಳಲು ಸಹಕಾರಿಯಾಗುವಂತಹ ಹಾಡುಗಳಾಗಿವೆ. ಭಾರತ ರತ್ನ, ಲತಾ ಮಂಗೇಶ್ಕರ್ ಅವರ ಸಾಧನೆಗಳು ಎಂದಿಗೂ ಅಚ್ಚಳಿಯದೇ ಉಳಿಯುತ್ತವೆ ಎಂದಿದ್ದಾರೆ.ಲತಾ ದೀದಿಯವರಿಂದ ನಾನು ಯಾವಾಗಲೂ ಅಪಾರ ಪ್ರೀತಿಯನ್ನು ಪಡೆದಿದ್ದೇನೆ ಎಂಬುವುದು ಗೌರವವೆಂದು ಪರಿಗಣಿಸುತ್ತೇನೆ. ಅವರೊಂದಿಗಿನ ನನ್ನ ಸಂವಾದಗಳು ಅವಿಸ್ಮರಣೀಯವಾಗಿ ಉಳಿಯುತ್ತವೆ. ಲತಾ ದೀದಿ ಅವರ ನಿಧನಕ್ಕೆ ನನ್ನ ಸಹ ಭಾರತೀಯರೊಂದಿಗೆ ನಾನು ದುಃಖಿಸುತ್ತೇನೆ. ಅವರ ಕುಟುಂಬದವರೊಂದಿಗೆ ಮಾತನಾಡಿ ಸಾಂತ್ವನ ಹೇಳುತ್ತೇನೆ ಓಂ ಶಾಂತಿ ಎಂದು ತಿಳಿಸಿದ್ದಾರೆ.ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಟ್ವೀಟ್ ಮಾಡಿ, ಕಾಲಕಾಲಕ್ಕೆ ಲತಾ ದೀದಿಯವರ ವಾತ್ಸಲ್ಯ ಮತ್ತು ಆಶೀರ್ವಾದವನ್ನು ಪಡೆದಿರುವುದು ನನ್ನ ಅದೃಷ್ಟ ಎಂದು ನಾನು ಭಾವಿಸುತ್ತೇನೆ. ಅಪ್ರತಿಮ ದೇಶಭಕ್ತಿ, ಮಧುರವಾದ ಮಾತು, ಸಜ್ಜನಿಕೆಯಿಂದ ಸದಾ ನಮ್ಮ ನಡುವೆ ಇರುತ್ತಾಳೆ. ಅವರ ಕುಟುಂಬ ಮತ್ತು ಅಸಂಖ್ಯಾತ ಅಭಿಮಾನಿಗಳಿಗೆ ನನ್ನ ಸಂತಾಪವನ್ನು ವ್ಯಕ್ತಪಡಿಸುತ್ತೇನೆ. ಓಂ ಶಾಂತಿ ಎಂದು ಲತಾ ದೀದೀಗೆ ಎಂದು ಹೇಳಿದ್ದಾರೆ.ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಸಂತಾಪ ಸೂಚಿಸಿ, ಗಾನ ಕೋಗಿಲೆ’ ಲತಾ ಮಂಗೇಶ್ಕರ್ ಅವರ ಸಾವಿನಿಂದ ಭಾರತದ ಧ್ವನಿ ಕಳೆದುಹೋಗಿದೆ. ಲತಾಜಿ ತಮ್ಮ ಜೀವನದುದ್ದಕ್ಕೂ ಸಂಗೀತ ಅಭ್ಯಾಸ ಮಾಡಿದರು. ಅವರು ಹಾಡಿದ ಹಾಡುಗಳನ್ನು ಭಾರತದ ಹಲವು ತಲೆಮಾರುಗಳು ಕೇಳಿದ್ದಾರೆ ಮತ್ತು ಹಾಡಿದ್ದಾರೆ. ಅವರ ಅಗಲಿಕೆ ನಾಡಿನ ಕಲೆ ಮತ್ತು ಸಂಸ್ಕೃತಿ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ.ಅವರ ಕುಟುಂಬಕ್ಕೆ ಮತ್ತು ಅಭಿಮಾನಿಗಳಿಗೆ ನನ್ನ ಸಂತಾಪ ಎಂದಿದ್ದಾರೆ.ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಸಂತಾಪ ಸೂಚಿಸಿ, ಲತಾ ಮಂಗೇಶ್ಕರ್ ಅವರು ಹಲವು ದಶಕಗಳಿಂದ ಭಾರತದ ಅತ್ಯಂತ ಪ್ರೀತಿಯ ಧ್ವನಿಯಾಗಿ ಉಳಿದರು. ಅವರ ಚಿನ್ನದ ಧ್ವನಿಯು ಅಮರವಾಗಿದೆ ಮತ್ತು ಅವರ ಅಭಿಮಾನಿಗಳ ಹೃದಯದಲ್ಲಿ ಪ್ರತಿಧ್ವನಿಸುತ್ತಲೇ ಇರುತ್ತದೆ ಎಂದು ಹೇಳಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಅವರ ಮದುವೆಯ ತಯಾರಿ ಈಗಾಗಲೇ ಪೂರ್ಣ ಸ್ವಿಂಗ್ ಆಗಿದೆಯೇ?

Sun Feb 6 , 2022
ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಈ ವರ್ಷದ ಏಪ್ರಿಲ್‌ನಲ್ಲಿ ರಣಥಂಬೋರ್‌ನಲ್ಲಿ ಮದುವೆಯಾಗಲಿದ್ದಾರೆ? ನಮಗೆ ತಿಳಿದಿರುವುದು ಇಲ್ಲಿದೆ ವಿಕ್ಕಿ ಕೌಶಲ್-ಕತ್ರಿನಾ ಕೈಫ್ ಮತ್ತು ರಾಜ್‌ಕುಮಾರ್ ರಾವ್-ಪತ್ರಲೇಖಾ ಅವರಂತಹ ಕೆಲವು ರೋಚಕ ವಿವಾಹಗಳಿಗೆ ತಡವಾಗಿ ಬಾಲಿವುಡ್ ಸಾಕ್ಷಿಯಾಯಿತು. ಇದೀಗ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಮದುವೆಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಮಹಾಮಾರಿ ನಮ್ಮ ಬದುಕನ್ನು ತಟ್ಟದೇ ಇದ್ದಿದ್ದರೆ ಇಷ್ಟೊತ್ತಿಗಾಗಲೇ ಇಬ್ಬರು ಮದುವೆಯಾಗಿರುತ್ತಿದ್ದರು. ಜನವರಿ 2022 ರಲ್ಲಿ ಕುಟುಂಬ ಮತ್ತು ಆಪ್ತ […]

Advertisement

Wordpress Social Share Plugin powered by Ultimatelysocial