ರಾಜ್ಯದಲ್ಲಿ ಲಾಯರ್ ಜಗದೀಶ್ ವಕೀಲಿಕೆ ಮಾಡದಂತೆ ಬ್ಯಾನ್​!

ನ್ಯಾಯಾಲಯದ ಆವರಣದಲ್ಲಿ ಗಲಾಟೆ ಮಾಡಿ, ವಕೀಲರೊಬ್ಬರ ಮೇಲೆ ಹಲ್ಲೆ ಮಾಡಿದ ಆರೋಪದಡಿ ಅರೆಸ್ಟ್ ಆಗಿರೋ ಲಾಯರ್​ ಜಗದೀಶ್‌ ಕೆ.ಎನ್‌. ಮಹಾದೇವ್‌ರನ್ನ ಈಗ ರಾಜ್ಯ ಬಾರ್‌ ಕೌನ್ಸಿಲ್‌ ಕರ್ನಾಟಕದಲ್ಲಿ ವಕೀಲಿಕೆ ಮಾಡದಂತೆ ಬ್ಯಾನ್‌ ಮಾಡಿದೆ.

ಬಾರ್‌ ಕೌನ್ಸಿಲ್‌ ಸದಸ್ಯರ ವಿರುದ್ಧ ಅವಾಚ್ಯ ಶಬ್ಧ ಬಳಕೆ ಹಾಗೂ ಬಾರ್‌ ಕೌನ್ಸಿಲ್‌ ಬಗ್ಗೆ ಅನಗತ್ಯ ಸುಳ್ಳು ಪ್ರಚಾರದ ಆರೋಪದ ಮೇಲೆ ಈ ತೀರ್ಮಾನ ತೆಗೆದುಕೊಂಡಿದೆ ಎನ್ನಲಾಗಿದೆ. ವಕೀಲರೊಬ್ಬರ ಮರ್ಮಾಂಗಕ್ಕೆ ಒದ್ದು ಕೊಲೆಗೆ ಯತ್ನಿಸಿದ ಆರೋಪದಡಿ ಜಗದೀಶ್‌ರನ್ನ ನಿನ್ನೆ ಬಂಧನ ಮಾಡಿ ನ್ಯಾಯಾದೀಶರ ಎದುರು ಹಾಜರುಪಡಿಸಿದ್ದರು. ನ್ಯಾಯಾಲಯ ಅವರನ್ನ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿತ್ತು. ಜಗದೀಶ್‌ ವಿರುದ್ಧ ಹಲವು ಆರೋಪಗಳ ಅಡಿ ಕೇಸ್​ ದಾಖಲಿಸಲಾಗಿದೆ. ಎರಡು ಗುಂಪುಗಳ ನಡುವೆ ದ್ವೇಷ ಬಿತ್ತುವುದು, ದೊಂಬಿ, ಅಕ್ರಮವಾಗಿ ಗುಂಪು ಸೇರುವುದು, ಕೊಲೆ ಯತ್ನ , ಹಲ್ಲೆ, ಅಕ್ರಮ ಬಂಧನ , ಜೀವ ಬೆದರಿಕೆ ಆರೋಪದಡಿ ಎಫ್‌ಐಆರ್‌ ದಾಖಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರೋ ಜಗದೀಶ್ ಆಪ್ತರು, ಲಾಯರ್​ ಜಗದೀಶ್‌ ಅವರ ಮಗ ಹಾಗೂ ಇತರರ ಮೇಲೂ ಹಲ್ಲೆ ಆಗಿದೆ. ಈ ಬಗ್ಗೆ ಎಫ್‌ಐಆರ್‌ ದಾಖಲಾಗಿದೆ. ಆದ್ರೆ ಪೋಲಿಸರು ತಪ್ಪಿತಸ್ಥರನ್ನು ಇದುವರೆಗೂ ಬಂಧಿಸಿಲ್ಲ. ಐಪಿಎಸ್‌ ಅಧಿಕಾರಿಯೊಬ್ಬರ ಭ್ರಷ್ಟಾಚಾರದ ವಿರುದ್ದ ಜಗದೀಶ್‌ ಹೋರಾಟ ಮಾಡುತ್ತಿದ್ದರು. ಅದೇ ಅಧಿಕಾರಿ ಹೂಡಿದ್ದ ಮೊಕದ್ದಮೆಗೆ ಆಕ್ಷೇಪಣೆ ಸಲ್ಲಿಸಲು ಕೋರ್ಟ್​ಗೆ ಬಂದಿದ್ದಾಗ ಗಲಾಟೆ ಆಗಿದೆ. ಹಿರಿಯ ಅಧಿಕಾರಿಗಳ ಒತ್ತಡಕ್ಕೆ ಒಳಗಾಗಿ ಪೋಲಿಸರು ಹೀಗೆ ಮಾಡ್ತಿದ್ದಾರೆ ಅಂತ ಜಗದೀಶ್ ಆಪ್ತರು ಆರೋಪಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

LPG ಗ್ರಾಹಕರಿಗೆ ಇಲ್ಲಿದೆ ಗುಡ್ ನ್ಯೂಸ್: ಗ್ಯಾಸ್ ಸಿಲಿಂಡರ್ ಸರಬರಾಜಿಗೆ ಪ್ರತ್ಯೇಕ ಶುಲ್ಕ ಕೊಡಬೇಡಿ

Tue Feb 15 , 2022
ರಾಯಚೂರು: ಅಡುಗೆ ಅನಿಲದ ಸಿಲಿಂಡರ್ ಮನೆಗೆ ಸರಬರಾಜು ಮಾಡುವ ಹುಡುಗರಿಗೆ ಗ್ರಾಹಕರು ಪ್ರತ್ಯೇಕ ಶುಲ್ಕ ನೀಡುವಂತಿಲ್ಲ. ಬಿಲ್ ನಲ್ಲಿ ನಮೂದಿಸಿರುವ ಮೊತ್ತವನ್ನು ಮಾತ್ರ ನೀಡುವಂತೆ ಕೋರಲಾಗಿದೆ. ಗ್ಯಾಸ್ ಏಜೆನ್ಸಿಗಳು ಗೃಹ ಬಳಿಕೆಯ ಅನಿಲ ಸಿಲಿಂಡರನ್ನು ನೇರವಾಗಿ ಗೋದಾಮಿನಿಂದ ಗ್ರಾಹಕರಿಗೆ ಸರಬರಾಜು ಮಾಡುವುದು ಗ್ಯಾಸ್ ಏಜೆನ್ಸಿಗಳ ಜವಾಬ್ದಾರಿ. ಆದ್ದರಿಂದ ಯಾವುದೇ ಕಾರಣಕ್ಕೂ ಅನಿಲ ಸಿಲಿಂಡರನ್ನು ರಸ್ತೆ ಬದಿಯಲ್ಲಿ, ಸಾರ್ವಜನಿಕರ ಸ್ಥಳಗಳಲ್ಲಿ, ಮೈದಾನಗಳಲ್ಲಿ ಇಟ್ಟು ಮಾರಾಟ ಮಾಡುವಂತಿಲ್ಲ, ಸಿಲಿಂಡರ್ ಮನೆಗೆ ತಲುಪಿಸುವ ಸಂದರ್ಭದಲ್ಲಿ ಯಾವುದೇ […]

Advertisement

Wordpress Social Share Plugin powered by Ultimatelysocial