ಅಸ್ತಿತ್ವದಲ್ಲಿರುವ 13 ಜಿಲ್ಲೆಗಳಲ್ಲಿ 26 ಜಿಲ್ಲೆಗಳನ್ನು ರೂಪಿಸಿ ಆಂಧ್ರಪ್ರದೇಶ ಸರ್ಕಾರವು ಗೆಜೆಟ್‌!

 

ಅಮರಾವತಿ (ಪಿಟಿಐ): ಅಸ್ತಿತ್ವದಲ್ಲಿರುವ 13 ಜಿಲ್ಲೆಗಳಲ್ಲಿ 26 ಜಿಲ್ಲೆಗಳನ್ನು ರೂಪಿಸಿ ಆಂಧ್ರಪ್ರದೇಶ ಸರ್ಕಾರವು ಗೆಜೆಟ್‌ ಅಧಿಸೂಚನೆಯೊಂದನ್ನು ಹೊರಡಿಸಿದೆ.

ನೂತನ 13 ಜಿಲ್ಲೆಗಳು ಸೋಮವಾರದಿಂದ ಅಸ್ತಿತ್ವಕ್ಕೆ ಬರಲಿವೆ ಎಂದು ಶನಿವಾರ ರಾತ್ರಿ ಹೊರಡಿಸಿದ ಗೆಜೆಟ್‌ ಅಧಿಸೂಚನೆ ತಿಳಿಸಿದೆ.

ಅಧಿಸೂಚನೆಯನ್ನು ಹೊರಡಿಸಿದ ಕೂಡಲೇ ವೈ.ಎಸ್‌.ಜಗನ್‌ ಮೋಹನ್‌ ರೆಡ್ಡಿ ನೇತೃತ್ವದ ಸರ್ಕಾರವು ಐಎಎಸ್‌, ಐಪಿಎಸ್‌ ಅಧಿಕಾರಿಗಳನ್ನು ನೂತನ ಜಿಲ್ಲೆಗಳಿಗೆ ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್‌ ವರಿಷ್ಠಾಧಿಕಾರಿಗಳಾಗಿ ನೇಮಕ ಮಾಡಿದೆ.

ಹೊಸ ಜಿಲ್ಲೆಗಳನ್ನು ರಚಿಸುವ ಸಂಬಂಧ ಕಳೆದ ಜನವರಿಯಲ್ಲಿ ರಾಜ್ಯ ಸರ್ಕಾರವು ಕರಡು ಅಧಿಸೂಚನೆಯೊಂದನ್ನು ಹೊರಡಿಸಿ ಸಲಹೆಗಳನ್ನು ಆಹ್ವಾನಿಸಿತ್ತು.

ರಾಜ್ಯವು ಹೊಂದಿರುವ 25 ಲೋಕಸಭಾ ಕ್ಷೇತ್ರಗಳನ್ನೂ ಜಿಲ್ಲೆಗಳಾಗಿ ರೂಪಿಸಲಾಗಿದೆ. ಪೂರ್ವ ಗೋದಾವರಿ ಮತ್ತು ವಿಶಾಖಪಟ್ಟಣ ಜಿಲ್ಲೆಗಳಲ್ಲಿನ ಬುಡಕಟ್ಟು ಪ್ರದೇಶಗಳನ್ನು ಪ್ರತ್ಯೇಕಿಸಿ 26ನೇ ಜಿಲ್ಲೆಯನ್ನು ರೂಪಿಸಲಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಚಿರಂಜೀವಿ ಸೊಸೆ, ಬಿಗ್ ಬಾಸ್ ವಿನ್ನರ್ ಸೇರಿ 142 ಜನರ ಬಂಧನ!

Mon Apr 4 , 2022
  ಹೈದರಾಬಾದ್: ಪೊಲೀಸ್‌ ಟಾಸ್ಕ್ ಫೋರ್ಸ್ ತಂಡವು ಭಾನುವಾರ ಮುಂಜಾನೆ ಬಂಜಾರಾ ಹಿಲ್ಸ್‌ ನ ಪಂಚತಾರಾ ಹೋಟೆಲ್‌ ನ ಪಬ್‌ನಲ್ಲಿ ರೇವ್ ಪಾರ್ಟಿಯ ಮೇಲೆ ದಾಳಿ ನಡೆಸಿದೆ. ದಾಳಿಯಲ್ಲಿ ವಿಐಪಿಗಳು, ನಟರು ಮತ್ತು ರಾಜಕಾರಣಿಗಳ ಮಕ್ಕಳು ಸೇರಿದಂತೆ ಸುಮಾರು 142 ಜನರನ್ನು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ನಿಷೇಧಿತ ಪದಾರ್ಥಗಳನ್ನು ದಾಳಿಯ ವೇಳೆ ಪತ್ತೆ ಮಾಡಲಾಗಿದೆ ಎಂದು ವರದಿಯಾಗಿದೆ. ಬಂಧಿತರಲ್ಲಿ ನಟ ನಾಗಬಾಬು ಅವರ ಪುತ್ರಿ, ಮೆಗಾಸ್ಟಾರ್ ಚಿರಂಜೀವಿ ಅವರ ಸೊಸೆಯೂ ಆಗಿರುವ […]

Advertisement

Wordpress Social Share Plugin powered by Ultimatelysocial