ಚಿರಂಜೀವಿ ಸೊಸೆ, ಬಿಗ್ ಬಾಸ್ ವಿನ್ನರ್ ಸೇರಿ 142 ಜನರ ಬಂಧನ!

 

ಹೈದರಾಬಾದ್: ಪೊಲೀಸ್‌ ಟಾಸ್ಕ್ ಫೋರ್ಸ್ ತಂಡವು ಭಾನುವಾರ ಮುಂಜಾನೆ ಬಂಜಾರಾ ಹಿಲ್ಸ್‌ ನ ಪಂಚತಾರಾ ಹೋಟೆಲ್‌ ನ ಪಬ್‌ನಲ್ಲಿ ರೇವ್ ಪಾರ್ಟಿಯ ಮೇಲೆ ದಾಳಿ ನಡೆಸಿದೆ. ದಾಳಿಯಲ್ಲಿ ವಿಐಪಿಗಳು, ನಟರು ಮತ್ತು ರಾಜಕಾರಣಿಗಳ ಮಕ್ಕಳು ಸೇರಿದಂತೆ ಸುಮಾರು 142 ಜನರನ್ನು ಕಸ್ಟಡಿಗೆ ತೆಗೆದುಕೊಂಡಿದ್ದಾರೆ.

ನಿಷೇಧಿತ ಪದಾರ್ಥಗಳನ್ನು ದಾಳಿಯ ವೇಳೆ ಪತ್ತೆ ಮಾಡಲಾಗಿದೆ ಎಂದು ವರದಿಯಾಗಿದೆ.

ಬಂಧಿತರಲ್ಲಿ ನಟ ನಾಗಬಾಬು ಅವರ ಪುತ್ರಿ, ಮೆಗಾಸ್ಟಾರ್ ಚಿರಂಜೀವಿ ಅವರ ಸೊಸೆಯೂ ಆಗಿರುವ ನಿಹಾರಿಕಾ ಕೊನಿಡೇಲಾ ಕೂಡ ಸೇರಿದ್ದಾರೆ. ನಂತರ ನಾಗಬಾಬು ವಿಡಿಯೋ ಬಿಡುಗಡೆ ಮಾಡಿ ತಮ್ಮ ಮಗಳಿಗೆ ಡ್ರಗ್ಸ್ ಜೊತೆ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ.

ಬಂಧಿತವರಲ್ಲಿ ಗಾಯಕ ಮತ್ತು ಬಿಗ್ ಬಾಸ್ ತೆಲುಗು ರಿಯಾಲಿಟಿ ಶೋ ವಿಜೇತ ರಾಹುಲ್ ಸಿಪ್ಲಿಗುಂಜ್ ಕೂಡ ಸೇರಿದ್ದಾರೆ. ಫೆಬ್ರವರಿ 12 ರಂದು ಹೈದರಾಬಾದ್ ಪೊಲೀಸರು ಡ್ರಗ್ಸ್ ವಿರುದ್ಧ ಅಭಿಯಾನವನ್ನು ಪ್ರಾರಂಭಿಸಿದಾಗ ರಾಹುಲ್ ಥೀಮ್ ಹಾಡನ್ನು ಹಾಡಿದ್ದರು. ಆದರೆ ಅವರೇ ಈಗ ಡ್ರಗ್ಸ್ ಕೇಸ್ ನಲ್ಲಿ ಪೊಲೀಸರ ಅತಿಥಿಯಾಗಿದ್ದಾರೆ.

ಪಾರ್ಟಿಯಲ್ಲಿದ್ದ ಇತರರಲ್ಲಿ ಆಂಧ್ರಪ್ರದೇಶದ ಉನ್ನತ ಪೋಲೀಸರೊಬ್ಬರ ಮಗಳು ಮತ್ತು ರಾಜ್ಯದ ತೆಲುಗು ದೇಶಂ ಸಂಸದರ ಮಗ ಕೂಡ ಇದ್ದರು. “ತನ್ನ ಮಗ ಹುಟ್ಟುಹಬ್ಬದ ಪಾರ್ಟಿಗೆ ಹೋಗಿದ್ದಾನ, ಆದರೆ ಸುಳ್ಳು ಆರೋಪ ಮಾಡಲಾಗುತ್ತಿದೆ. ನಗರದ ಎಲ್ಲಾ ಪಬ್‌ಗಳನ್ನು ಮುಚ್ಚಬೇಕು” ಎಂದು ತೆಲಂಗಾಣದ ಕಾಂಗ್ರೆಸ್ ನಾಯಕ ಅಂಜನ್ ಕುಮಾರ್ ಯಾದವ್ ಹೇಳಿದ್ದಾರೆ.

ಬಂಜಾರಾ ಹಿಲ್ಸ್‌ನಲ್ಲಿರುವ ಸ್ಟೇಷನ್ ಹೌಸ್ ಆಫೀಸರ್ (ಎಸ್‌ಎಚ್‌ಒ) ಶಿವಚಂದ್ರ ಅವರನ್ನು ಕರ್ತವ್ಯ ನಿರ್ಲಕ್ಷ್ಯಕ್ಕಾಗಿ ಹೈದರಾಬಾದ್ ಪೊಲೀಸ್ ಕಮಿಷನರ್ ಸಿವಿ ಆನಂದ್ ಅಮಾನತುಗೊಳಿಸಿದ್ದಾರೆ. ಅವರ ಸ್ಥಾನಕ್ಕೆ ಕೆ ನಾಗೇಶ್ವರ ರಾವ್ ಅವರನ್ನು ಟಾಸ್ಕ್ ಫೋರ್ಸ್ ನಿಂದ ನೇಮಿಸಲಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

'ಹಿಜಾಬ್, ಹಲಾಲ್' ಆಯ್ತು, ಈಗ ಮತ್ತೊಂದು ಅಸ್ತ್ರ: ಮಸೀದಿಗಳಲ್ಲಿ 'ಮೈಕ್ ತೆರವಿಗೆ ಒತ್ತಾಯ'

Mon Apr 4 , 2022
ಬೆಂಗಳೂರು: ಹಿಜಾಬ್ ಹೈಕೋರ್ಟ್ ಆದೇಶದ ನಂತ್ರ ತಣ್ಣಗಾಗಿತ್ತು. ಈ ಬಳಿಕ ಹಲಾಲ್ ವರ್ಸಸ್ ಜಟ್ಕಾ ಕಟ್ ಮಾಂಸದ ವಿವಾದ ಮುನ್ನಲೆಗೆ ಬಂತು. ಈಗ ಯುಗಾದಿ ಹಬ್ಬದ ಮುಕ್ತಾಯದ ಬಳಿಕ, ರಂಜಾನ್ ಉಪವಾಸ ಶುರುವಾದ ಸಂದರ್ಭದಲ್ಲಿಯೇ ಮಸೀದಿಗಳಲ್ಲಿ ಮೈಕ್ ತೆರವುಗೊಳಿಸುವಂತೆ ಒತ್ತಾಯ ಹೆಚ್ಚಾಗಿದೆ. ಈ ಮೂಲಕ ಈಗ ಮತ್ತೊಂದು ಅಸ್ತ್ರ ಮುನ್ನಲೆಗೆ ಬಂದಿದೆ. ಉಡುಪಿ ಜಿಲ್ಲೆಯಲ್ಲಿ ಆರಂಭಗೊಂಡಂತ ಹಿಜಾಬ್ ವರ್ಸಸ್ ಕೇಸರಿ ಶಾಲು ವಿವಾದ, ಇಡೀ ರಾಜ್ಯಾಧ್ಯಂತ ವ್ಯಾಪಿಸಿತು. ಹೈಕೋರ್ಟ್ ಮೆಟ್ಟಿಲೇರಿದ್ದಂತ […]

Advertisement

Wordpress Social Share Plugin powered by Ultimatelysocial