‘ಹಿಜಾಬ್, ಹಲಾಲ್’ ಆಯ್ತು, ಈಗ ಮತ್ತೊಂದು ಅಸ್ತ್ರ: ಮಸೀದಿಗಳಲ್ಲಿ ‘ಮೈಕ್ ತೆರವಿಗೆ ಒತ್ತಾಯ’

ಬೆಂಗಳೂರು: ಹಿಜಾಬ್ ಹೈಕೋರ್ಟ್ ಆದೇಶದ ನಂತ್ರ ತಣ್ಣಗಾಗಿತ್ತು. ಈ ಬಳಿಕ ಹಲಾಲ್ ವರ್ಸಸ್ ಜಟ್ಕಾ ಕಟ್ ಮಾಂಸದ ವಿವಾದ ಮುನ್ನಲೆಗೆ ಬಂತು. ಈಗ ಯುಗಾದಿ ಹಬ್ಬದ ಮುಕ್ತಾಯದ ಬಳಿಕ, ರಂಜಾನ್ ಉಪವಾಸ ಶುರುವಾದ ಸಂದರ್ಭದಲ್ಲಿಯೇ ಮಸೀದಿಗಳಲ್ಲಿ ಮೈಕ್ ತೆರವುಗೊಳಿಸುವಂತೆ ಒತ್ತಾಯ ಹೆಚ್ಚಾಗಿದೆ.

ಈ ಮೂಲಕ ಈಗ ಮತ್ತೊಂದು ಅಸ್ತ್ರ ಮುನ್ನಲೆಗೆ ಬಂದಿದೆ.

ಉಡುಪಿ ಜಿಲ್ಲೆಯಲ್ಲಿ ಆರಂಭಗೊಂಡಂತ ಹಿಜಾಬ್ ವರ್ಸಸ್ ಕೇಸರಿ ಶಾಲು ವಿವಾದ, ಇಡೀ ರಾಜ್ಯಾಧ್ಯಂತ ವ್ಯಾಪಿಸಿತು. ಹೈಕೋರ್ಟ್ ಮೆಟ್ಟಿಲೇರಿದ್ದಂತ ಪ್ರಕರಣಕ್ಕೆ, ತ್ರಿಸದಸ್ಯ ನ್ಯಾಯಪೀಠವು ಹಿಜಾಬ್ ಇಸ್ಲಾಂ ಧರ್ಮದ ಅತ್ಯಗತ್ಯ ಭಾಗವಲ್ಲ ಎಂಬುದಾಗಿ ಮಹತ್ವದ ತೀರ್ಪು ನೀಡುವ ಮೂಲಕ, ತಣ್ಣಗಾಗುವಂತೆ ಮಾಡಿತ್ತು. ಈ ಬಳಿಕ ಯುಗಾದಿ ಹಬ್ಬಕ್ಕೂ ಮುನ್ನವೇ ಹಲಾಲ್ ಕಟ್ ವಿವಾದ ಶುರುವಾಯ್ತು.

ಯುಗಾದಿ ಹಬ್ಬದ ಹೊಸತೊಡಕು ಮುಗಿದ ಬಳಿಕ, ಈಗ ಹಲಾಲ್ ಕಟ್ ವಿವಾದ ಕಡಿಮೆಯಾಗಿದೆ. ರಂಜಾನ್ ಹಬ್ಬದ ಉಪವಾಸ ಆಚರಣೆ ಶುರುವಾಗುತ್ತಿದ್ದಂತೆ ಈಗ ಮಸೀದಿಗಳಲ್ಲಿ ಮೈಕ್ ನಿಷೇಧಕ್ಕೆ ಒತ್ತಾಯ ಕೇಳಿ ಬಂದಿದೆ. ಸುಪ್ರೀಂ ಕೋರ್ಟ್ ಆದೇಶ ಕೂಡ ಈ ಬಗ್ಗೆ ಇದ್ದರೂ, ಕೆಲವೆಡೆ ಮಸೀದಿಗಳಲ್ಲಿ ಪ್ರಾರ್ಥನೆ ಸಂದರ್ಭದಲ್ಲಿ ಧ್ವನಿ ವರ್ಧಕವನ್ನು ಬಳಸುತ್ತಿದ್ದಾರೆ. ಈ ಧ್ವನಿ ವರ್ಧಕವನ್ನು ತೆರವುಗೊಳಿಸುವಂತೆ ಒತ್ತಾಯ ಕೇಳಿ ಬಂದಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ನನ್ನ ಟೀ ಶರ್ಟ್ ಕ್ಯಾಮರಾ ಮುಂದೆ ತೆಗೆಯಬೇಕು!

Mon Apr 4 , 2022
  ಬಾಲಿವುಡ್‌ನಲ್ಲಿ ತನ್ನ ಹೇಳಿಕೆಗಳಿಂದ ಹಾಗೂ ಬೋಲ್ಡ್‌ನೆಸ್‌ನಿಂದ ಹಲ್‌ಚಲ್ ಸೃಷ್ಟಿಸುವ ನಟಿ ಪೂನಂ ಪಾಂಡೆ. ಪ್ರಸ್ತುತ ನಟಿ ಪೂನಂ ಪಾಂಡೆ ಕಂಗನಾ ರನೌತ್ ನಡೆಸಿಕೊಡುವ ಬಹುಚರ್ಚಿತ ಹಾಗೂ ಸಾಕಷ್ಟು ಜನಪ್ರಿಯ ಹೊಸ ರಿಯಾಲಿಟಿ ಶೋ ‘ಲಾಕಪ್’ ನಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದಾರೆ. ಈ ಕಾರ್ಯಕ್ರಮಕ್ಕೆ ಈಗಾಗಲೇ ಸ್ಪರ್ಧಿಗಳು ತಾವು ಬಹಿರಂಗಪಡಿಸಿದ ಕೆಲವು ವಿಚಾರಗಳಿಂದಾಗಿ ಸಾಕಷ್ಟು ಚರ್ಚೆಯಲ್ಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಯಾವ ಸ್ಪರ್ಧಿಯೂ ಎಲಿಮಿನೇಷನ್ ಹಂತವನ್ನು ತಲುಪುತ್ತಾರೆಯೋ ಅವರು ತಮ್ಮ ಜೀವನದಲ್ಲಿ ಈ […]

Advertisement

Wordpress Social Share Plugin powered by Ultimatelysocial