HEALTH TIPS:ಮೂಲಂಗಿ ಹಾಗೂ ಅದರ ಬೀಜ ದೇಹಕ್ಕೆ ತುಂಬಾ ಒಳ್ಳೆಯದು;

ಮೂಲಂಗಿ ಕೆಲವರಿಗೆ ಹಿಡಿಸುವುದಿಲ್ಲ. ಮತ್ತೆ ಕೆಲವರು ಹಾಗೇ ಹಸಿ ಹಸಿ ತಿನ್ನುವುದನ್ನೇ ಇಷ್ಟ ಪಡುತ್ತಾರೆ. ನಿಜಕ್ಕೂ ಮೂಲಂಗಿ ಹಾಗೂ ಅದರ ಬೀಜ ದೇಹಕ್ಕೆ ತುಂಬಾ ಒಳ್ಳೆಯದು. ಇದರ ಸೇವನೆಯಿಂದ ಆಗುವ ಆರೋಗ್ಯ ಪ್ರಯೋಜನ ತಿಳಿಯೋಣ.

* ಅರ್ಧ ಲೋಟ ಮೂಲಂಗಿ ರಸಕ್ಕೆ ಸಮಪ್ರಮಾಣದ ನೀರನ್ನು ಬೆರೆಸಿ ಒಂದು ಚಮಚ ನಿಂಬೆ ರಸ ಸೇರಿಸಿ ದಿನಾ ಬೆಳಗ್ಗೆ ಖಾಲಿ ಹೊಟ್ಟೆಗೆ ಸೇವಿಸಿದರೆ ರಕ್ತದಲ್ಲಿನ ಕೆಟ್ಟ ಕೊಬ್ಬಿನಾಂಶ ಕಡಿಮೆಯಾಗುತ್ತದೆ.

* ಹೊಟ್ಟೆ ಉಬ್ಬರ, ಗ್ಯಾಸ್‌ ಹೆಚ್ಚಿದ್ದರೆ ಬಾರ್ಲಿಯನ್ನು ಬೇಯಿಸಿ ಅದಕ್ಕೆ ಮೂಲಂಗಿ ರಸ ಮತ್ತು ತುಪ್ಪ ಸೇರಿಸಿ ಸೇವಿಸಿದರೆ ಗ್ಯಾಸ್‌ ಬೇಗ ಶಮನವಾಗುತ್ತದೆ.

* ಸಮಯಕ್ಕೆ ಸರಿಯಾಗಿ ಮುಟ್ಟು ಆಗದಿದ್ದರೆ 1 ರಿಂದ 3 ಗ್ರಾಂನಷ್ಟು ಮೂಲಂಗಿ ಬೀಜದ ಪೇಸ್ಟ್‌ ಸೇವಿಸಿದರೆ ಮುಟ್ಟು ಸರಿಯಾದ ಸಮಯಕ್ಕೆ ಆಗುತ್ತದೆ.

* ಮೂಲಂಗಿ ರಸವನ್ನು ಮುಖಕ್ಕೆ ಲೇಪಿಸಿದರೆ ಚರ್ಮದ ಕಾಂತಿ ಹೆಚ್ಚುತ್ತದೆ ಮತ್ತು ಸುಕ್ಕು ಕಡಿಮೆಯಾಗುತ್ತದೆ.

* ದೇಹದ ತೂಕ ಇಳಿಸಲು 1 ರಿಂದ 2 ದೊಡ್ಡ ಮೂಲಂಗಿಯ ಬೇರನ್ನು ಕತ್ತರಿಸಿ ನೀರಿನಲ್ಲಿ ಕುದಿಸಿಡಿ. 2 ಗಂಟೆ ನಂತರ ಸೋಸಿ ನೀರನ್ನು ಕುಡಿದರೆ ತೂಕ ಬೇಗ ಕಡಿಮೆಯಾಗುತ್ತದೆ.

* ಮೂತ್ರ ಮಾರ್ಗದಲ್ಲಿ ಕಲ್ಲಿದ್ದರೆ ಒಂದು ಗ್ರಾಂ ಮೂಲಂಗಿ ಬೀಜವನ್ನು ನಿಯಮಿತವಾಗಿ ಸೇವಿಸಿದರೆ ಕಲ್ಲುಗಳು ಕರಗಿ ಆಚೆ ಹೋಗುತ್ತವೆ.

* ತಾಜಾ ಮೂಲಂಗಿ ಎಲೆಗಳಿಂದ ರಸ ತೆಗೆದು ಊಟಕ್ಕೆ ಮುಂಚೆ ಸೇವಿಸಿದರೆ ಕಣ್ಣಿನ ಉರಿ, ಕಡಿತ, ನೀರು ಸೋರುವುದು ಇನ್ನಿತರ ಕಣ್ಣಿನ ಸಮಸ್ಯೆ ಕಡಿಮೆಯಾಗುತ್ತದೆ.

* ಹಸಿ ಮೂಲಂಗಿಯನ್ನು ಪ್ರತಿದಿನ ಮಜ್ಜಿಗೆ ಜೊತೆ ಸೇವಿಸಿದರೆ ಮೂಲವ್ಯಾಧಿ ನಿವಾರಣೆಯಾಗುತ್ತದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

Infinix Zero 5G:ಭಾರತದಲ್ಲಿ ಇದೇ ಫೆಬ್ರವರಿ 14 ರಂದು ಇನ್ಫಿನಿಕ್ಸ್‌ ಕಂಪನಿ ತನ್ನ ಹೊಸ ಇನ್ಫಿನಿಕ್ಸ್‌ ಜಿರೋ 5G ಸ್ಮಾರ್ಟ್‌ಫೋನ್‌ ಅನಾವರಣ;

Sun Feb 6 , 2022
 ಭಾರತದಲ್ಲಿ ಇದೇ ಫೆಬ್ರವರಿ 14 ರಂದು ಇನ್ಫಿನಿಕ್ಸ್‌ ಕಂಪನಿ ತನ್ನ ಹೊಸ ಇನ್ಫಿನಿಕ್ಸ್‌ ಜಿರೋ 5G ಸ್ಮಾರ್ಟ್‌ಫೋನ್‌ ಅನಾವರಣಗೊಳ್ಳಲಿದೆ. ವ್ಯಾಲಂಟೈನ್ಸ್ ಡೇ ಪ್ರಯುಕ್ತ ಪ್ರೇಮಿಗಳಿಗೆ ಕಡಿಮೆ ಬೆಲೆಗೆ ಬೆಸ್ಟ್ ಗಿಫ್ಟ್ ನೀಡುವ ಬಯಕೆ ನಿಮಗಿದ್ದರೆ ಈ ಸ್ಮಾರ್ಟ್​ಫೋನ್ ಉತ್ತಮ ಆಯ್ಕೆಯಾಗಲಿದೆ. ಪ್ರೇಮಿಗಳ ದಿನ ಹತ್ತಿರಬರುತ್ತಿದೆ. ಇದೇ ಫೆಬ್ರವರಿ 14 ರಂದು ವಿಶ್ವದಾದ್ಯಂತ ವ್ಯಾಲಂಟೈನ್ಸ್ ಡೇ (Valentines Day) ಯನ್ನು ಆಚರಣೆ ಮಾಡಲಾಗುತ್ತದೆ. ಈ ವಿಶೇಷ ದಿನದಂದು ವಿಶೇಷ ಒಂದು ಭಾರತದಲ್ಲಿ […]

Advertisement

Wordpress Social Share Plugin powered by Ultimatelysocial