ಸಿಎಂ ಹೊರತುಪಡಿಸಿ ಕೆಲವರ ಬದಲಾವಣೆ ಆಗಬೇಕು:ರೇಣುಕಾಚಾರ್ಯ.

ಶಾಸಕ ಎಂ.ಪಿ. ರೇಣುಕಾಚಾರ್ಯ ಅವರು ರಾಜಕೀಯ ಕಾರ್ಯದರ್ಶಿ ಸ್ಥಾನ ಏನೂ ನನಗೆ ದೊಡ್ಡದಲ್ಲ. ಸುಮ್ಮನೆ ಮನೆ ಕೊಟ್ಟಿದ್ದಾರೆ, ಚೇಂಬರ್ ಕೊಟ್ಟಿದ್ದಾರೆ ಅಷ್ಟೇ. ಅದರಲ್ಲಿ ಬಹಳ ಕೆಲಸ ಇಲ್ಲ, ನಾನೂ ಏನೂ ಅದಕ್ಕೇ ಅಂಟಿಕೊಂಡಿಲ್ಲ. ಸಿಎಂ ಹೊರತುಪಡಿಸಿ ಕೆಲವರ ಬದಲಾವಣೆ ಆಗಬೇಕು. ಅದೇ ಮುಖ ನೋಡಿ ನೋಡಿ ಸಾಕಾಗಿದೆ ಜನರಿಗೆ. ಅಭಿವೃದ್ಧಿ ಕೆಲಸಗಳು ಆಗಬೇಕು ಎಂದು ಹೇಳಿದ್ದಾರೆ. ಸಿಎಂ ರಾಜಕೀಯ ಕಾರ್ಯದರ್ಶಿಗಿಂತ ಶಾಸಕನಾಗೇ ಇರುವೆ ಎಂದೂ ರೇಣುಕಾಚಾರ್ಯ ತೀವ್ರ ಅಸಮಾಧಾನ ಹೊರಹಾಕಿದ್ದಾರೆ.

ಇದೇ ವೇಳೆ ಕಾಂಗ್ರೆಸ್ ವಿರುದ್ಧ ಶಾಸಕ ಎಂ.ಪಿ. ರೇಣುಕಾಚಾರ್ಯ ವಾಗ್ದಾಳಿ ನಡೆಸಿದ್ದು ಕಾಂಗ್ರೆಸ್ಸಿನವರು ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಪಾದಯಾತ್ರೆ ಮಾಡಿದ್ರು. ಸಿದ್ದರಾಮಯ್ಯಗೆ ಪಾದಯಾತ್ರೆ ಸ್ವಲ್ಪವೂ ಇಷ್ಟ ಇರಲಿಲ್ಲ. ಡಿಕೆಶಿ ನಾಯಕರಾಗಿ ಹೊರಹೊಮ್ಮಿದ್ರೆ ಎನ್ನುವ ಭೀತಿಯಲ್ಲಿ ವಿರೋಧ ವ್ಯಕ್ತಪಡಿಸಿದ್ದಾರೆ. ಸಿದ್ದರಾಮಯ್ಯ ಒಳಗಿಂದೊಳಗೆ ಪಾದಯಾತ್ರೆ ವಿರೋಧಿಸಿದ್ದರು. ಸಿದ್ದರಾಮಯ್ಯ ಪಟಾಲಂನಿಂದ ಮುಂದಿನ ಸಿಎಂ ಕೂಗು. ಸಿದ್ದರಾಮಯ್ಯ ಮುಂದಿನ ಸಿಎಂ ಎಂದು ಘೋಷಣೆ ಮಾಡಿದ ಒಂದೇ ಕಾರಣಕ್ಕೆ ಡಿಕೆಶಿ ಪಾದಯಾತ್ರೆ ಮಾಡಿದರು ಎಂದು ಹರಿಹಾಯ್ದಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಜಗನ್ ಮನಸ್ಸು ಗೆದ್ದ ಮೆಗಾಸ್ಟಾರ್!! ಚಿರಂಜೀವಿಯ ಮಾತಿಗೆ ನೀಯಮ ಬದಲಾಯಿಸಿದ ಅಂದ್ರ ಸಿಎಂ ?

Fri Jan 14 , 2022
  ಆಂಧ್ರ ಪ್ರದೇಶ್‌  ಸರ್ಕಾರ ಹಾಗೂ ತೆಲುಗು ಚಿತ್ರರಂಗದ ನಡುವೆ ಕಳೆದ ಕೆಲ ತಿಂಗಳಿಂದ ತೀವ್ರ  ಅಸಮಾಧನವಿತ್ತು. ಜಗನ್ ಸರ್ಕಾರವು ಆಂಧ್ರ ಪ್ರದೇಶದಲ್ಲಿ ಟಿಕೆಟ್ ದರಗಳನ್ನು ಹೆಚ್ಚು ತಗ್ಗಿಸಿರುವ ಕಾರಣ ತೆಲುಗು ಚಿತ್ರರಂಗ ಹಾಗೂ ಆಂಧ್ರದ ಚಿತ್ರಮಂದಿರ ಮಾಲೀಕರ ಸಂಘ ತೀವ್ರ ಅಸಮಾಧನ ವ್ಯಕ್ತಪಡಿಸಿದರು. ಟಿಕೆಟ್ ದರ ಇಳಿಕೆ ವಿಷಯವಾಗಿ ಆಂಧ್ರ ಸರ್ಕಾರ ಹಾಗೂ ತೆಲುಗು ಚಿತ್ರರಂಗದ ನಡುವೆ ಪ್ರತಿಷ್ಠೆ ಪ್ರಶ್ನೆಯಾಗಿ ಬೆಳೆದು, ಚಿತ್ರರಂಗದವರು ಸರ್ಕಾರದ ವಿರುದ್ಧ ಸರ್ಕಾರದ ಶಾಸಕರು, […]

Advertisement

Wordpress Social Share Plugin powered by Ultimatelysocial