‘ಜೀರ್ಣಶಕ್ತಿ’ ಉತ್ತಮವಾಗಿರಲು ಸೇವಿಸಿ ಮೂಲಂಗಿ…!

ಮೂಲಂಗಿ ಒಂದು ಆರೋಗ್ಯದಾಯಕ ತರಕಾರಿ ಹಾಗೂ ಅನೇಕ ರೋಗಗಳಿಗೆ ಉತ್ತಮ ಔಷಧಿಯಾಗಿದೆ. ಆದರೆ ಕೆಲವರಿಗೆ ಮೂಲಂಗಿ ಅಂದರೆ ಅಸಡ್ಡೆ.

ಆದರೂ ಆಗಾಗ ಈ ತರಕಾರಿಯನ್ನು ಸೇವಿಸುತ್ತಿದ್ದಲ್ಲಿ ಜೀರ್ಣ ಶಕ್ತಿ ಉತ್ತಮವಾಗಿರುತ್ತದೆ. ಹಾಗೂ ಇನ್ನಿತರ ಆರೋಗ್ಯ ಲಾಭಗಳನ್ನು ಪಡೆಯಬಹುದು.

* ಮೂಲಂಗಿ ಗಡ್ಡೆಯ ರಸವನ್ನು ಮಜ್ಜಿಗೆಗೆ ಸೇರಿಸಿ ಸೇವಿಸಿದರೆ ಅಜೀರ್ಣದಿಂದ ಉಂಟಾದ ಅತಿಸಾರ ಗುಣವಾಗುತ್ತದೆ.

* ತರಕಾರಿಯಾಗಿ ಇದನ್ನು ತಿಂದಾಗ ಜೀರ್ಣಶಕ್ತಿ ಹೆಚ್ಚಾಗಿ ತಿಂದ ಆಹಾರವು ಸುಲಭವಾಗಿ ಜೀರ್ಣವಾಗುವಂತೆ ಮಾಡುತ್ತದೆ.

* ಮೂಲಂಗಿಯನ್ನು ಹಸಿಯಾಗಿ ತಿಂದಾಗ ಒಳ್ಳೆಯ ಜೀರ್ಣದಾಯಕವಾಗುತ್ತದೆ. ಇದರ ಸೊಪ್ಪನ್ನು ಸಹ ತರಕಾರಿ ರೂಪದಲ್ಲಿ ಉಪಯೋಗ ಮಾಡಿದರೆ ಆರೋಗ್ಯಕ್ಕೆ ಹಿತಕರವಾಗಿರುತ್ತದೆ.

* ಮೂಲಂಗಿಯನ್ನು ಯಾವಾಗಲೂ ಎಳೆಯದಾಗಿರುವಾಗಲೇ ತಿನ್ನಬೇಕು. ಬಲಿತ ಮೂಲಂಗಿ ಆರೋಗ್ಯಕ್ಕೆ ಹಾನಿಯುಂಟು ಮಾಡುತ್ತದೆ.

* ಮೂಲಂಗಿಯನ್ನು ಸಣ್ಣ ಸಣ್ಣ ಚೂರುಗಳಾಗಿ ಕತ್ತರಿಸಿ ಒಣಗಿಸಿ ಇಟ್ಟುಕೊಳ್ಳಬೇಕು. ಹೀಗೆ ಒಣಗಿದ ಚೂರುಗಳನ್ನು ಪೊಟಲಿಯಲ್ಲಿ ಕಟ್ಟಿ ಬಿಸಿಮಾಡಿ ಶಾಖ ಕೊಟ್ಟರೆ ಕೀಲು ನೋವು ಕಡಿಮೆಯಾಗುತ್ತದೆ.

ಹೊಟ್ಟೆಯಲ್ಲಿ ತೆಗೆದುಕೊಂಡರೆ ಕಾಮಾಲೆ ರೋಗ ಬೇಗನೆ ಗುಣವಾಗುತ್ತದೆ.

* ಮೂಲಂಗಿ ಸೊಪ್ಪಿನ ರಸಕ್ಕೆ ಕೊಂಚ ಬಿಳಿ ಮೆಣಸಿನಪುಡಿ ಹಾಗೂ ಜೇನನ್ನು ಸೇರಿಸಿ ತೆಗೆದುಕೊಂಡರೆ ಮೂತ್ರಕೋಶದಲ್ಲಿನ ಕಲ್ಲುಗಳು ಕರಗುತ್ತದೆ.

Please follow and like us:

Leave a Reply

Your email address will not be published. Required fields are marked *

Next Post

ನಿಮ್ಮ ಮೊಬೈಲ್‌ ಹೆಚ್ಚು ಬಿಸಿ ಆಗುತ್ತಿದೆಯೇ?..ಈ ಟಿಪ್ಸ್‌ ಫಾಲೋ ಮಾಡಿ

Wed Oct 13 , 2021
ಸ್ಮಾರ್ಟ್‌ಫೋನಿನ ಓವರ ಹಿಟನಿಂದಾಗಿ, ಫೋನಿನ ಬ್ಯಾಟರಿ ಕೂಡ ಸ್ಫೋಟಗೊಳ್ಳಬಹುದು. ಕೆಲವು ಸಂದರ್ಭಗಳಲ್ಲಿ, ಫೋನಿನ್ ಕಮ್ಯುನಿಕೇಷನ್ ಯುನಿಟ್ ಮತ್ತು ಕ್ಯಾಮರಾ ಕೂಡ ಫೋನ್ ನ್ನು ಹಿಟ್ ಮಾಡುತ್ತದೆ. ಆದರೆ ಇದು ಬ್ಯಾಟರಿಗಿಂತ ತುಂಬಾ ಕಡಿಮೆ. ನಿಮ್ಮ ಸ್ಮಾರ್ಟ್ ಫೋನ್ ಅನ್ನು ಅಧಿಕ ಬಿಸಿಯಾಗದಂತೆ ಉಳಿಸಲು ಪರಿಗಣಿಸಬೇಕಾದ ಐದು ಸಲಹೆಗಳು ಇಲ್ಲಿವೆ. ಸ್ಮಾರ್ಟ್‌ಫೋನ್ ನಮ್ಮ ದೈನಂದಿನ ಜೀವನದ ಅವಿಭಾಜ್ಯ ಅಂಗವಾಗಿದೆ. ಕರೆ ಮಾಡುವುದು, ಮೇಲ್ ಕಳುಹಿಸುವುದು, ಇಂಟರ್ನೆಟ್ ಬ್ರೌಸ್ ಮಾಡುವುದು ಅಥವಾ ಡಿಜಿಟಲ್ […]

Advertisement

Wordpress Social Share Plugin powered by Ultimatelysocial