ಬಹುಭಾಷಾ ನಟಿ ಹನ್ಸಿಕಾ ಮೋಟ್ವಾನಿ ಮತ್ತೆ ಸುದ್ದಿಯಲ್ಲಿದ್ದಾರೆ.

ಹುಭಾಷಾ ನಟಿ ಹನ್ಸಿಕಾ ಮೋಟ್ವಾನಿ ಮತ್ತೆ ಸುದ್ದಿಯಲ್ಲಿದ್ದಾರೆ. ನಟಿ ಹನ್ಸಿಕಾ ಮೋಟ್ವಾನಿ ಕಳೆದ ಡಿಸೆಂಬರ್​​ನಲ್ಲಿ ಸಪ್ತಪದಿ ತುಳಿದಿದ್ದರು. ಈ ಮದುವೆಯ ವಿಚಾರವು ಸೋಷಿಯಲ್ ಮೀಡಿಯಾದಲ್ಲಿ ಹಲ್​ಚಲ್ ಎಬ್ಬಿಸಿತ್ತು. ಆದರೆ ಈ ಮಧ್ಯೆ ಮತ್ತೊಂದು ವಿಚಾರ ಸುದ್ದಿಯಲ್ಲಿದೆ.

ಏನೆಂದರೆ ನಟಿ ಹನ್ಸಿಕಾ ಯುವತಿಯಂತೆ ಕಾಣಲು ಹಾರ್ಮೋನ್ ಇಂಜೆಕ್ಷನ್ ತೆಗೆದುಕೊಂಡಿದ್ದರು ಎಂಬ ಆರೋಪ ಕೇಳಿ ಬಂದಿತ್ತು.

ಚಿಕ್ಕ ವಯಸ್ಸಿನಲ್ಲಿ ನಾಯಕಿಯಾಗಿ ನಟನೆ ಮಾಡಿ ಎಲ್ಲರ ಮೆಚ್ಚುಗೆಯನ್ನು ಗಳಿಸಿಕೊಂಡಿದ್ದರು. ಆದರೆ ಹನ್ಸಿಕಾ ವೇಗವಾಗಿ ಬೆಳೆಯಲು ಹಾಗೂ ಯುವತಿಯಂತೆ ಕಾಣಲು ಹಾರ್ಮೋನ್ ಇಂಜೆಕ್ಷನ್ ತೆಗೆದುಕೊಂಡಿದ್ದರು ಎಂಬ ಮಾತು ಬಹಳ ಹಿಂದಿನಿಂದಲೂ ಚರ್ಚೆ ನಡಿತಾನೇ ಇದೆ. ಸದ್ಯ ಇದೀಗ ನಟಿ ಹನ್ಸಿಕಾ ಪ್ರತಿಕ್ರಿಯೆ ನೀಡಿದ್ದಾರೆ. ಹನ್ಸಿಕಾ ಅವರ ತಾಯಿ ಸ್ಕಿನ್ ಸ್ಪೆಷಲಿಸ್ಟ್ ಆಗಿದ್ದು ಅವರೇ ಮಗಳು ಬೇಗ ಬೆಳೆಯ ಬೇಕು ಎಂದು ಹಾರ್ಮೋನ್ ಇಂಜೆಕ್ಷನ್ ನೀಡಿದ್ದಾರೆ ಎಂದು ಆರೋಪಗಳು ಕೇಳಿ ಬಂದಿತ್ತು.

ಹಾಟ್‌ಸ್ಟಾರ್‌ನಲ್ಲಿ ಪ್ರಸಾರವಾಗುವ ಲವ್ ಶಾದಿ ಡ್ರಾಮಾದ ಎರಡನೇ ಸಂಚಿಕೆಯಲ್ಲಿ ಹನ್ಸಿಕಾ ಈ ವದಂತಿಗಳ ಕುರಿತು ಮಾತಾಡಿದ್ದಾರೆ. ನಾನು ಹಾರ್ಮೋನ್ ಇಂಜೆಕ್ಷನ್ ತೆಗೆದುಕೊಂಡಿಲ್ಲ ಎಂದಿದ್ದಾರೆ. ಯುವತಿಯಂತೆ ಕಾಣಲು ಹಾರ್ಮೋನ್ ಇಂಜೆಕ್ಷನ್​ ತೆಗೆದುಕೊಂಡಿದ್ದರು ಎಂದು ಹಲವರು ಬರೆದುಕೊಂಡಿದ್ದಾರೆ. 8ನೇ ವಯಸ್ಸಿನಲ್ಲಿ ನಟಿಯಾದರು ಎಂಬುದನ್ನೇ ಮರೆತಿದ್ದಾರೆ. ತಾಯಿ ಹಾರ್ಮೋನ್ ಇಂಜೆಕ್ಷನ್​ ನೀಡಿ ಬೇಗ ಬೆಳೆಯುವಂತೆ ಮಾಡಿದ್ದಾರೆ ಎಂಬ ಆರೋಪದಲ್ಲಿ ಸತ್ಯ ಇಲ್ಲ ಎಂದಿದ್ದಾರೆ.

ಈ ಆರೋಪಗಳಿಗೆ ಹನ್ಸಿಕಾ ತಾಯಿ ಕೂಡ ಪ್ರತಿಕ್ರಿಯೆ ನೀಡಿದ್ದು, ಹಾರ್ಮೋನ್ ಇಂಜೆಕ್ಷನ್ ನೀಡಿದ್ದು ನಿಜವಾಗಿದ್ದಲ್ಲಿ ಟಾಟಾ, ಬಿರ್ಲಾಗಿಂತಲೂ ನಾವು ಶ್ರೀಮಂತರಾಗುತ್ತಿದ್ದೆವು. ಬೇಗ ಬೆಳೆಯಲು ಉಪಾಯ ಹೇಳಲು ಎಲ್ಲರೂ ಸರತಿ ಸಾಲಿನಲ್ಲಿ ನಿಲ್ಲುತ್ತಿದ್ದರು ಎಂದು ಆರೋಪವನ್ನು ತಳ್ಳಿಹಾಕಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಡಿವೋರ್ಸ್​​ ಮಹಿಳೆಯನ್ನು ಮದುವೆಯಾಗಿದ್ದ ತಾರಕ ರತ್ನ!

Sun Feb 19 , 2023
ತೆಲಗು ಖ್ಯಾತ ನಟ ನಂದಮೂರಿ ತಾರಕರತ್ನ.. ಜನವರಿ 27 ರಂದು ಸಂಜೆ ಆಂಧ್ರಪ್ರದೇಶದ ಕುಪ್ಪಂನಲ್ಲಿ ಟಿಡಿಪಿ ನಾಯಕ ನರಾ ಲೋಕೇಶ್​ ಸಾರಥ್ಯದಲ್ಲಿ ಯುವಗಲಂ ಪಾದೆಯಾತ್ರೆ ಆರಂಭವಾಗಿತ್ತು. ಈ ಪಾದೆಯಾತ್ರೆಯಲ್ಲಿ ಪಾಲ್ಗೊಂಡಿದ್ದ ತಾರಕರತ್ನ ಜನರ ನಡುವೆ ಹೆಜ್ಜೆ ಹಾಕುತ್ತಿರುವಾಗಲೇ ಇದ್ದಕ್ಕಿದ್ದಂತೆ ಕುಸಿದು ಬಿದ್ದರು. ಕೂಡಲೇ ಗಾಬರಿಗೊಂಡ ಜನ ತಾರಕರತ್ನ ಅವರನ್ನು ಕಾರಿನಲ್ಲಿ ಕರೆದುಕೊಂಡು ಹೋಗಿ ಸ್ಥಳಿಯ ಆಸ್ಪತ್ರೆಗೆ ಸೇರಿಸಿದ್ರು. ನಂತರ ಅಲ್ಲಿಂದ ಪಿಇಎಸ್​​ ಆಸ್ಪತ್ರೆಗೆ ದಾಖಲಿಸಲಾಯಿತು. ಆಗಲೇ ಗೊತ್ತಾಗಿದ್ದು ತಾರಕರತ್ನಗೆ ಹೃದಯಾಘಾತ […]

Advertisement

Wordpress Social Share Plugin powered by Ultimatelysocial