ಸತ್ತ ಮಹಿಳೆಯ ಶವವನ್ನು ಚೀಲದಲ್ಲಿ ಹಾಕಿ.ಹೆಗಲ ಮೇಲೆ ಒತ್ತು ಹೋಗುತ್ತಿದ್ದ ಪತಿ..

ಯಳಂದೂರು ಪಟ್ಟಣದ ಅರಣ್ಯ ಇಲಾಖೆ ಕಚೇರಿಯ ಹತ್ತಿರ ಇರುವ ಆಲೆಮನೆಯಲ್ಲಿ ಮಹಿಳೆ ಸಾವು ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.ಪಟ್ಟಣದ ಅರಣ್ಯ ಇಲಾಖೆ ಕಛೇರಿ ಹತ್ತಿರ ಇರುವ ಆಲೆಮನೆ ಯಲ್ಲಿ ಕಳೆದ 15 ದಿನಗಳಿಂದ ಮಳವಳ್ಳಿ ತಾಲೂಕಿನ ಕಾಗೇಪುರ ಗ್ರಾಮದ ಮೇದರ ಜನಾಂಗಕ್ಕೆ ಸೇರಿರುವ ರವಿ ಮತ್ತು ಆತನ ಹೆಂಡತಿ ಕಾಳಮ್ಮ ಎಂಬುವರು ಪಟ್ಟಣದಲ್ಲಿ ಅಲೆಮಾರಿಗಳಾಗಿ ಪ್ಲಾಸ್ಟಿಕ್ ವಸ್ತು ಗುಜರಿ ಸಾಮಗ್ರಿಗಳನ್ನು ಬೀದಿಗಳಲ್ಲಿ ಸಂಗ್ರಹಿಸಿ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದರು…ಕಾಳಮ್ಮ ಎಂಬ ಮಹಿಳೆ ಅತಿ ಹೆಚ್ಚು ಮಧ್ಯಪಾನ ಮಾಡಿ ಸಾವನ್ನಪ್ಪಿದ್ದು ಮಹಿಳೆಯ ಶವವನ್ನು ಆತನ ಗಂಡನಾದ ರವಿ ಹೆಗಲ ಮೇಲೆ ಹೊತ್ತುಕೊಂಡು ಪಟ್ಟಣದ ಸುವರ್ಣವತಿ ನದಿ ಕಡೆ ಅಂತ್ಯ ಸಂಸ್ಕಾರ ಮಾಡಲು ಹೋಗುತ್ತಿದ್ದ ಸಂದರ್ಭದಲ್ಲಿ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ ಹಿನ್ನಲೆಯಲ್ಲಿ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಆತ ಹೆಗಲಲ್ಲಿ ಮಹಿಳೆಯ ಶವವನ್ನು ಕಂಡು ಗಾಬರಿಯಾಗಿ ಆತನು ಕೂಡ ಪಾನ ಮತನಾಗಿದ್ದು ಆತನಿಂದ ಹೇಳಿಕೆ ಪಡೆದು ಶವ ವನ್ನು ಚಾಮರಾಜನಗರದ ಜಿಲ್ಲಾಸ್ಪತ್ರೆಯ ಶವಗಾರದಲ್ಲಿ ಶವ ಪರೀಕ್ಷೆಗೆ ಕಳಿಸಿಕೊಡಲಾಗಿದೆ…ಶವ ಪರೀಕ್ಷೆ ಬಂದ ನಂತರ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಪಿಎಸ್ಐ ಕರಿಬಸಪ್ಪನವರು ತಿಳಿಸಿದ್ದಾರೆ…

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ತಾಲೂಕು ಬಂದ್ ನಡುವೆಯೂ ಸಂಚಾರಕ್ಕೆ ಮುಂದಾದ ಕೆಎಸ್ಆರ್ಟಿಸಿ!

Thu Dec 8 , 2022
ಕೆಎಸ್ಆರ್ಟಿಸಿ ಸಿಬ್ಬಂದಿ ಹಾಗೂ ರೈತ ಸಂಘಟನೆ ಮುಖಂಡರ ನಡುವೆ ಮಾತಿನ ಚಕಮಕಿ, ವಿಮಾ ಕಂಪನಿಗಳ ವಿರುದ್ಧ ಪ್ರತಿಭಟನೆಗೆ ಕರೆ ನೀಡಿರುವ ಮಾವು ಬೆಳೆಗಾರರ ಸಂಯುಕ್ತ ಹೋರಾಟ ಸಮಿತಿ, ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕು ಬಂದ್ ಗೆ ಕರೆ, ಬಂದ್ ನಡುವೆಯೂ ಮುಂಜಾನೆ ಯಥಾ ಸ್ಥಿತಿ ಸಂಚಾರವನ್ನು ಆರಂಭಿಸಲು ಮುಂದಾದ ಕೆಎಸ್ಆರ್ಟಿಸಿ, ಬಸ್ಸುಗಳನ್ನು ತಡೆದು ಡಿಪೋ ಗೆ ವಾಪಸ್ ಕಳುಹಿಸಿದ ರೈತ ಮುಖಂಡರು. ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: […]

Advertisement

Wordpress Social Share Plugin powered by Ultimatelysocial