ಫೆ.4- ರಾಜ್ಯದಲ್ಲಿ ಪಂಚಮಶಾಲಿ ಮೂರನೇ ಪೀಠ ಸ್ಥಾಪನೆಯನ್ನು ಸಚಿವ ಮುರುಗೇಶ್ ನಿರಾಣಿ ಸಮರ್ಥಿಸಿಕೊಂಡರು.

ಮೈಸೂರು, ಫೆ.4- ರಾಜ್ಯದಲ್ಲಿ ಪಂಚಮಶಾಲಿ ಮೂರನೇ ಪೀಠ ಸ್ಥಾಪನೆಯನ್ನು ಸಚಿವ ಮುರುಗೇಶ್ ನಿರಾಣಿ ಸಮರ್ಥಿಸಿಕೊಂಡರು.
ನಗರದಲ್ಲಿಂದು ಮಾತನಾಡಿದ ಅವರು, ಪೀಠಗಳ ಸ್ವಾಮೀಜಿಗಳ ಒತ್ತಡ ಕಡಿಮೆ ಮಾಡಲು ಈ ಪೀಠದ ಅಗತ್ಯ ಇದೆ.ಆದರೆ ಈ ಪೀಠದ ಸ್ಥಾಪನೆ ಹಿಂದೆ ನಾನಿಲ್ಲ. ಆದರೆ ನನ್ನ ಸಂಪೂರ್ಣ ಬೆಂಬಲ ಇದಕ್ಕೆ ಇದೆ. ವಚನಾನಂದ ಸ್ವಾಮೀಜಿ ಸೇರಿ ಹಲವರು ಇದರ ಬೆಂಬಲಕ್ಕೆ ಇದ್ದಾರೆ. ಪೀಠ ಸ್ಥಾಪನೆಯ ಹಿಂದೆ ದುರುದ್ದೇಶದ ಪ್ರಶ್ನೆಯೇ ಇಲ್ಲ ಎಂದರು.ಸಮುದಾಯದ ಜನಸಂಖ್ಯೆ ಹೆಚ್ಚಿರುವ ಕಾರಣ ಮೂರನೇ ಪೀಠ ಅವಶ್ಯಕತೆ ಇದೆ. ಧಾರ್ಮಿಕ ಕಾರ್ಯಕ್ರಮ ಮದುವೆ ಸಮಾರಂಭದಲ್ಲಿ ಭಾಗಿಯಾಗಲು ಮೂರನೇ ಪೀಠ ಸ್ಥಾಪನೆ ಮಾಡಲಾಗಿದೆ. ಪೀಠ ಸ್ಥಾಪನೆಯ ಯಾವುದೇ ಸಭೆ ಸಮಾರಂಭಕ್ಕೆ ನಾನು ಹೋಗಿಲ್ಲ ಎಂದು ಹೇಳಿದರು.ಮೂರನೇ ಪೀಠದ ಸ್ಥಾಪನೆ ವಿವಾದ ಸಂಬಂಧ ಈ ಬಗ್ಗೆ ನಾನೇ ಖುದ್ದಾಗಿ ಸ್ವಾಮೀಜಿಯನ್ನು ಭೇಟಿ ಮಾಡುವುದಿಲ್ಲ. ಅವರು ಕರೆದರೆ ನಾನು ಹೋಗಿ ಮಾತನಾಡುತ್ತೇನೆ ಎಂದು ತಿಳಿಸಿದರು.ಮಠಕ್ಕೆ ಕೊಟ್ಟಿರುವ ಕಾಣಿಕೆ ವಾಪಸ್ಸು ನೀಡುವ ವಿಚಾರ ಕುರಿತು ಪ್ರತಿಕ್ರಿಯಿಸಿ ನಾನು ಕಾಣಿಕೆಯನ್ನು ಸ್ವಾಮೀಜಿಗೆ ಕೊಟ್ಟಿಲ್ಲ. ನಾನು ಕೊಟ್ಟಿರುವುದು ಪೀಠಕ್ಕೆ. ಕೊಟ್ಟಿರುವುದನ್ನು ವಾಪಸ್ಸು ಕೇಳುವಷ್ಟು ಸಣ್ಣವನು ನಾನಲ್ಲ. ಇಂತಹ ಮನಸ್ಥಿತಿ ನನಗೆ ಇಲ್ಲ. ಬಲಗೈಯಲ್ಲಿ ಕೊಟ್ಟಿದ್ದು ಎಡಗೈಗೆ ಗೊತ್ತಾಗಬಾರದು. ಅದೇ ರೀತಿ ನಾನು ಪೀಠಕ್ಕೆ ನನ್ನ ಕೈಲಾದುದನ್ನು ನೀಡಿದ್ದೇನೆ. ನಾನು ವಾಪಸ್ಸು ಕೇಳಿದ್ದೇನೆ ಎಂಬುದು ಸುಳ್ಳು. ಸ್ವಾಮೀಜಿಗೆ ಯಾರೋ ತಪ್ಪು ಮಾಹಿತಿ ನೀಡಿದ್ದಾರೆ. ದೂರವಾಣಿ ಮೂಲಕ ಮಾತನಾಡಿದರೂ ನಾನು ಸ್ಪಷ್ಟನೆ ನೀಡುತ್ತೇನೆ ಎಂದರು.ನಿರಾಣಿ ಸಹೋದರನಿಂದ ಧಮ್ಕಿ ವಿಚಾರ ಸಂಬಂಧ ಇದು ಸತ್ಯಕ್ಕೆ ದೂರವಾದ ಆರೋಪ. ಒಂದು ಕೆನ್ನೆಗೆ ಹೊಡೆದರೆ ಮತ್ತೊಂದು ಕೆನ್ನೆಗೆ ತೋರಿಸುವ ಗಾಂ ತತ್ವ ನಮ್ಮ ಮನೆಯ ಸಂಸ್ಕಾರ. ಇದರಲ್ಲಿ ಧಮ್ಕಿ ಹಾಕು ಪ್ರಶ್ನೆಯೇ ಇಲ್ಲ ಎಂದರು.ಸಚಿವ ಸಂಪುಟ ವಿಸ್ತರಣೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಚಿವರು ಅದು ಸಿಎಂ ಪರಮಾಕಾರ ಅದರಲ್ಲಿ ನಮ್ಮ ಪಾತ್ರ ಇಲ್ಲ. ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಪ್ರಶ್ನೆ ಇಲ್ಲ. ಬೊಮ್ಮಾಯಿ ಅವರು ತುಂಬಾ ಚೆನ್ನಾಗಿ ಕೆಲಸ ಮಾಡುತ್ತಿದ್ದಾರೆ. ರಾಷ್ಟ್ರೀಯ ನಾಯಕರು ಇದನ್ನು ಸ್ಪಷ್ಟಪಡಿಸಿದ್ದಾರೆ. ಈಗಾಗಿ ಸಿಎಂ ಬದಲಾವಣೆ ವಿಚಾರ ಕೇವಲ ಊಹಾಪೋಹ. ಮುಂದಿನ ಚುನಾವಣೆಯಲ್ಲಿ 130 ಸ್ಥಾನ ಪಡೆದು ಮತ್ತೆ ಬಿಜೆಪಿ ಅಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಖಗೋಳಶಾಸ್ತ್ರಜ್ಞರು 11.5 ಶತಕೋಟಿ ವರ್ಷಗಳಲ್ಲಿ 10,000 ಗೆಲಕ್ಸಿಗಳ ಚಲನೆಯನ್ನು ಟ್ರ್ಯಾಕ್ ಮಾಡುತ್ತಾರೆ;

Fri Feb 4 , 2022
10 ವರ್ಷಗಳ ಸಮೀಕ್ಷೆಯನ್ನು ಕೈಗೊಳ್ಳುವುದು ಇಲ್ಲಿಯವರೆಗೆ ಬ್ರಹ್ಮಾಂಡದ ಅತ್ಯಂತ ಸಮಗ್ರವಾದ ನಕ್ಷೆಯನ್ನು ರಚಿಸಲು, ಅದರ ಆರಂಭಿಕ ತನಿಖೆಗಳು ಬ್ರಹ್ಮಾಂಡದ ಕೆಲವು ದೊಡ್ಡ ಪ್ರಮಾಣದ ರಚನೆಗಳ ಚಿತ್ರವನ್ನು ಪಡೆಯಲು ನಮಗೆ ಅವಕಾಶ ಮಾಡಿಕೊಟ್ಟಿವೆ, ಸೂಪರ್ಕ್ಲಸ್ಟರ್ಗಳು, ಅಥವಾ ಗೆಲಕ್ಸಿಗಳ ಸಮೂಹಗಳ ಗುಂಪುಗಳು ಅಥವಾ ಗೋಡೆಗಳನ್ನು ಒಳಗೊಂಡಿರುವ ಗೆಲಾಕ್ಸಿ ಫಿಲಾಮೆಂಟ್ಸ್ ಅಥವಾ ಗುರುತ್ವಾಕರ್ಷಣೆಯಿಂದ ಬಂಧಿತ ಗೆಲಕ್ಸಿ ಸಮೂಹಗಳ ಹಾಳೆಗಳು. ಇವುಗಳಲ್ಲಿ ಪರ್ಸಿಯಸ್-ಪೆಗಾಸಸ್ ಫಿಲಾಮೆಂಟ್ ಒಂದು ಶತಕೋಟಿ ಬೆಳಕಿನ ವರ್ಷಗಳವರೆಗೆ ವ್ಯಾಪಿಸಿದೆ, 520 ಮಿಲಿಯನ್ ಬೆಳಕಿನ […]

Advertisement

Wordpress Social Share Plugin powered by Ultimatelysocial