ಮುಟ್ಟಿನ ವೇಳೆ ಈ ವಿಷ್ಯದ ಬಗ್ಗೆ ಇರಲಿ ಗಮನ…!

ಮುಟ್ಟಿನ ವೇಳೆ ನೈರ್ಮಲ್ಯ ಕಾಯ್ದುಕೊಳ್ಳುವುದು ಬಹಳ ಮುಖ್ಯ. ಮುಟ್ಟಿನ ವೇಳೆ ಸ್ವಚ್ಛತೆ, ಸ್ನಾನ, ಒಣಗಿದ ಬಟ್ಟೆ ಧರಿಸುವುದು, ಆಗಾಗ ಪ್ಯಾಡ್ ಬದಲಾವಣೆಗೆ ಗಮನ ನೀಡಬೇಕು. ಮುಟ್ಟಿನ ವೇಳೆ ಮಹಿಳೆಯರು ಕೆಲ ವಿಷ್ಯಗಳನ್ನು ನೆನಪಿಟ್ಟುಕೊಳ್ಳಬೇಕು.

ಮುಟ್ಟಿನ ದಿನಗಳಲ್ಲಿ ನೈರ್ಮಲ್ಯ ಕಾಪಾಡಿಕೊಳ್ಳಲು ಸ್ಯಾನಿಟರಿ ಪ್ಯಾಡ್ ಬದಲಿಸುವುದು ಬಹಳ ಅವಶ್ಯಕ.

ನಾಲ್ಕರಿಂದ ಆರು ಗಂಟೆಯೊಳಗೆ ಪ್ಯಾಡ್ ಬದಲಿಸುತ್ತಿರಬೇಕು. ದಿನವಿಡೀ ಒಂದೇ ಪ್ಯಾಡ್ ಬಳಕೆ ಆರೋಗ್ಯಕ್ಕೆ ಹಾನಿಕರ. ಇದು ಕಿರಿಕಿರಿ ಹಾಗೂ ಸೋಂಕಿಗೆ ಕಾರಣವಾಗುತ್ತದೆ. ಹತ್ತಿಯ ಸ್ಯಾನಿಟರಿ ಪ್ಯಾಡ್ ಬಳಸುವುದು ಒಳ್ಳೆಯದು.

ಖಾಸಗಿ ಅಂಗವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಖಾಸಗಿ ಅಂಗವನ್ನು ಎರಡು ಬಾರಿ ಸ್ವಚ್ಛಗೊಳಿಸಿಕೊಳ್ಳಬೇಕು. ಇದು ಬ್ಯಾಕ್ಟೀರಿಯಾವನ್ನು ಹೊರ ಹಾಕುತ್ತದೆ. ಜನನಾಂಗವನ್ನು ಈ ಸಂದರ್ಭದಲ್ಲಿ ವಿಶೇಷವಾಗಿ ಸ್ವಚ್ಛಗೊಳಿಸಬೇಕು.

ಮುಟ್ಟಿನ ಸಂದರ್ಭದಲ್ಲಿ ಒಳ ಉಡುಪಿನ ಬಗ್ಗೆಯೂ ಗಮನ ನೀಡಬೇಕು. ಸ್ವಚ್ಛ, ಒಣಗಿದ ಒಳ ಉಡುಪು ಧರಿಸಬೇಕು. ಕೊಳಕಾದ ಒಳ ಉಡುಪು ಸೋಂಕಿನ ಅಪಾಯಕ್ಕೆ ಕಾರಣವಾಗುತ್ತದೆ.

ಸಮತೋಲಿತ ಮತ್ತು ಪೌಷ್ಟಿಕ ಆಹಾರವನ್ನು ಸೇವಿಸಬೇಕು. ಕನಿಷ್ಠ ನಾಲ್ಕರಿಂದ ಆರು ಲೀಟರ್ ನೀರನ್ನು ಕುಡಿಯಬೇಕು. ಇದು ಗ್ಯಾಸ್ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ಮುಟ್ಟು ಸರಿಯಾದ ಸಮಯಕ್ಕೆ ಬರದಿರುವಾಗ, ಅತಿಯಾದ ವಾಸನೆ ಬರುತ್ತಿದ್ದರೆ ತಕ್ಷಣ ನಿಮ್ಮ ವೈದ್ಯರನ್ನು ಸಂಪರ್ಕಿಸಿ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಮಧ್ಯ ದಿನದ Insta ಡೈರಿ: ಹುಟ್ಟುಹಬ್ಬದ ಹುಡುಗಿ ಆಲಿಯಾ ಭಟ್ ಜೊತೆ ಪಾರ್ಟಿ ಮಾಡಲು ಸಿದ್ಧರಾಗಿ!

Mon Mar 14 , 2022
ತನ್ನ ಇತ್ತೀಚಿನ ಬಿಡುಗಡೆಯಾದ ‘ಗಂಗೂಬಾಯಿ ಕಥಿಯಾವಾಡಿ’ ಯಶಸ್ಸಿನಲ್ಲಿ ಆನಂದಿಸುತ್ತಿರುವ ಆಲಿಯಾ ಭಟ್ ಪರಿಪೂರ್ಣ ಫ್ಯಾಷನಿಸ್ಟ್. ಅವರು ಇಂದು 29 ನೇ ವರ್ಷಕ್ಕೆ ಕಾಲಿಡುತ್ತಿರುವಾಗ, ಅವರ Instagram ಖಾತೆಯಿಂದ ಕೆಲವು ಬೆರಗುಗೊಳಿಸುವ ನೋಟಗಳು ಇಲ್ಲಿವೆ, ಅದು ನಿಮಗೆ ಪಕ್ಷವನ್ನು ಸಿದ್ಧಗೊಳಿಸಲು ಸಹಾಯ ಮಾಡುತ್ತದೆ. ಬೆಳ್ಳಿಯಲ್ಲಿ ನಕ್ಷತ್ರ ಆಲಿಯಾ ಅವರ ಬೆಳ್ಳಿ ಸೀರೆಯು ನೀವು ಗುಂಪಿನ ನಡುವೆ ಎದ್ದು ಕಾಣಬೇಕು. ಇನ್ನೂ ಉತ್ತಮವಾದ ವಿಷಯವೆಂದರೆ ಆಲಿಯಾಳ ಸೀರೆಯು ತ್ಯಾಜ್ಯ ಮರುಬಳಕೆಯ ನೈಲಾನ್ ಮತ್ತು […]

Advertisement

Wordpress Social Share Plugin powered by Ultimatelysocial