ʼಮೈಗ್ರೇನ್ʼ ಗೆ ಇಲ್ಲಿದೆ ಮದ್ದು

ʼಮೈಗ್ರೇನ್ʼ ಗೆ ಇಲ್ಲಿದೆ ಮದ್ದು
ಮೈಗ್ರೇನ್ ಬೇಡವೆಂದರೂ ಬಂದು ಕಾಡುವ ಅತಿಥಿ. ಬಿಡದೆ ಕಾಡುವ ತಲೆ ನೋವಿನಿಂದ ಮುಕ್ತಿ ಕಾಣದೆ ಹಲವರು ಹೈ ಡೋಸೇಜ್ ಮಾತ್ರೆಗಳ ಮೊರೆ ಹೋಗುವುದೂ ಉಂಟು. ಅದರ ಬದಲು ಮೈಗ್ರೇನ್ ಬರದಂತೆ ತಡೆಯಲು ಏನು ಮಾಡಬಹುದು ನೋಡೋಣ.

ನಮ್ಮ ಆಹಾರ ಪದ್ಧತಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳುವ ಮೂಲಕ ಇದು ಬರದಂತೆ ಮಾಡಬಹುದು.

ಮೈಗ್ರೇನ್ ಗೆ ಮುಖ್ಯ ಕಾರಣವೆಂದರೆ ದೇಹದಲ್ಲಿ ನೀರಿನಾಂಶ ಕಡಿಮೆಯಾಗುವುದು. ಅದನ್ನು ತಡೆಯಲು ಕಲ್ಲಂಗಡಿ ಹಣ್ಣು, ಮುಳ್ಳು ಸೌತೆಕಾಯಿ ದಿನನಿತ್ಯ ಸೇವಿಸಬೇಕು. ಆಪಲ್ ಕೂಡ ಈ ನಿಟ್ಟಿನಲ್ಲಿ ಪ್ರಯೋಜನಕಾರಿ.

ಅಧಿಕ ಕೊಬ್ಬಿನಾಂಶವಿರುವ ಆಹಾರವನ್ನು ಸೇವಿಸಿದಾಗ ನೋವು ಉಂಟು ಮಾಡುವ ಆಮ್ಲಗಳನ್ನು ನಿಯಂತ್ರಿಸಬಹುದು. ತಲೆ ನೋವಿನೊಂದಿಗೆ ಕಾಡುವ ವಾಕರಿಕೆಯನ್ನು ನಿವಾರಿಸುವ ಶಕ್ತಿ ಶುಂಠಿಗಿದೆ. ಹಾಗಾಗಿ ನಿಮ್ಮ ಆಹಾರದಲ್ಲಿ ಶುಂಠಿಯನ್ನು ಬಳಸಿ. ವಿಟಮಿನ್ ಗಳು ಹೇರಳವಾಗಿರುವ ಬಾದಾಮಿ, ರಾಗಿ, ಬಾಳೆಹಣ್ಣು ಸೇವಿಸುವುದರಿಂದ ಮೈಗ್ರೇನ್ ಸಮಸ್ಯೆಯಿಂದ ದೂರವಿರಬಹುದು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ದೇಹಾರೋಗ್ಯಕ್ಕೆ ವಾಕಿಂಗ್ ʼಮದ್ದುʼ

Thu Dec 30 , 2021
ಆರೋಗ್ಯವೇ ಭಾಗ್ಯ ಎಂದಿರುವ ಗಾದೆಯನ್ನು ವಾಕಿಂಗ್ ನಿಂದಲೇ ಆರೋಗ್ಯ ಎಂದು ಬದಲಾಯಿಸಿಕೊಳ್ಳಬಹುದು. ಏಕೆಂದರೆ ನಮ್ಮ ದೇಹಕ್ಕೆ ಬರುವ ಬಹುತೇಕ ರೋಗಗಳನ್ನು ತಡೆಯುವ ಶಕ್ತಿ ವಾಕಿಂಗ್ ಗೆ ಇದೆ. ಬೆಳಗೆದ್ದು ಅರ್ಧ ಗಂಟೆ ಹೊತ್ತು ವಾಕಿಂಗ್ ಹೋಗುವುದರಿಂದ ದಿನವಿಡೀ ಫ್ರೆಶ್ ಆಗಿ ಇರಬಹುದು. ಡಯಾಬಿಟಿಸ್, ಬಿಪಿ ಮೊದಲಾದ ರೋಗಗಳನ್ನು ನಿಯಂತ್ರಣದಲ್ಲಿಡಬಹುದು. ದಿನನಿತ್ಯ ವಾಕಿಂಗ್ ಹೋಗುವುದರಿಂದ ದೇಹಕ್ಕೆ ಅತ್ಯುತ್ತಮ ವ್ಯಾಯಾಮ ದೊರೆಯುತ್ತದೆ. ಇಡೀ ದಿನ ನೀವು ಕ್ರಿಯಾಶೀಲರಾಗಿ ಇರಬಹುದು. ಬೆಳಗಿನ ಗಾಳಿ ದೇಹಕ್ಕೆ […]

Advertisement

Wordpress Social Share Plugin powered by Ultimatelysocial