ಮೈಸೂರು: ಜಿಲ್ಲೆಯಲ್ಲಿ ಶುಕ್ರವಾರ ಬಹುತೇಕ ಕಡೆ ಸುರಿದ ಭರಣಿ ಮಳೆ

ಭರಣಿ ಮಳೆಯು ರೈತರನ್ನು ಹರ್ಷಚಿತ್ತಗೊಳಿಸಿತು. ಉಳುಮೆ ಮಾಡಿ, ಬಿತ್ತನೆ ಬೀಜ ಖರೀದಿಸಿ ಉತ್ತಮ ಮಳೆಗಾಗಿ ಕಳೆದ ಹಲವು ದಿನಗಳಿಂದ ರೈತರು ಕಾಯುತ್ತಿದ್ದರು. ಬಿತ್ತನೆಯಾಗಿದ್ದ ಕಡೆ ಒಣಗುತ್ತಿದ್ದ ಪೈರುಗಳಿಗೆ ಮಳೆಯು ಬೇಕಿತ್ತು.

ಅಬ್ಬರದಿಂದ ಬೊಬ್ಬಿರಿದ ಮಳೆರಾಯ ಕೃಷಿ ಭೂಮಿಗೆ ಜೀವಕಳೆಯನ್ನು ತಂದಿತು.

ಗುಡುಗು ಸಿಡಿಲು ಹಾಗೂ ಬಿರುಗಾಳಿಯಿಂದ ಕೂಡಿದ ಮಳೆಗೆ ಒಟ್ಟು 17 ಕಡೆ ಮರಗಳು ಧರೆಗುರುಳಿದರೆ, 50ಕ್ಕೂ ಅಧಿಕ ವಿದ್ಯುತ್‌ಕಂಬಗಳು ಮುರಿದು ಬಿದ್ದವು. ಮೈಸೂರು- ಬೆಂಗಳೂರು ಹಾಗೂ ಮೈಸೂರು- ತಿ.ನರಸೀಪುರ ರಸ್ತೆ ಸಂಚಾರ ಅಸ್ತವ್ಯಸ್ತೊಗೊಂಡಿತು.

ಇಲ್ಲಿನ ಸಿದ್ಧಲಿಂಗಪುರದ ಮುಖ್ಯರಸ್ತೆಗೆ ಉರುಳಿದ ಮರವೊಂದು ಉರುಳಿದರೆ, ಮನೆಯೊಂದರ ಮೇಲೆ 2 ವಿದ್ಯುತ್ ಕಂಬಗಳು ಬಿದ್ದವು. ಅದೃಷ್ಟವಶಾತ್ ತಕ್ಷಣವೇ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದರಿಂದ ಅಪಾಯ ಸಂಭವಿಸಲಿಲ್ಲ. ಬನ್ನಿಮಂಟಪ ಅಗ್ನಿಶಾಮಕ ಠಾಣೆಯ ಸಿಬ್ಬಂದಿ ಮರವನ್ನು ತೆರವುಗೊಳಿಸಿದರು.

ಮೇಗಳಾಪುರ ಸಮೀಪದ ಪೆಟ್ರೊಲ್‌ ಬಂಕ್‌ ಬಳಿ ಮುಖ್ಯರಸ್ತೆಗೆ ಮರ ಉರುಳಿ, ಸಂಚಾರ ಅಸ್ತವ್ಯಸ್ತಗೊಂಡಿತು. ತಿ.ನರಸೀಪುರ ಹಾಗೂ ಸರಸ್ವತಿಪುರಂ ಅಗ್ನಿಶಾಮಕ ಠಾಣೆಯ ಸಿಬ್ಬಂದಿ ಮರವನ್ನು ತೆರವುಗೊಳಿಸಿದರು.

ಉಳಿದಂತೆ, ಗೌರಿಶಂಕರನಗರದ 1ನೇ ಕ್ರಾಸ್, ಕುವೆಂಪುನಗರದ ಎಂ ಬ್ಲಾಕ್‌ನ ಸುಬೋಧ ಕಾನ್ವೆಂಟ್ ಸಮೀಪ, ಟಿ.ಕೆ.ಬಡಾವಣೆಯ ಆರ್‌ಸಿಟಿಸಿ ಕಾಂಪೌಂಡ್, ಗಾಂಧಿನಗರದ 5ನೇ ಕ್ರಾಸ್, ಪ್ರಗತಿ ಶಾಲೆ ಸಮೀಪ, ನಿವೇದಿತಾ ನಗರದ ಶಾರದಾಂಬೆ ಉದ್ಯಾನ, ಬನ್ನಿಮಂಟಪ ಎಸ್‌.ಎಸ್‌.ನಗರ, ಕೆಸರೆಯ ದೋಭಿಘಾಟ್, ಮುನೇಶ್ವರ ನಗರದ ಮದೀನಾ ಮಸೀದಿ, ಶಿವಾಜಿರಸ್ತೆಯ ಕಮಲಾ ನರ್ಸಿಂಗ್ ಹೋಂ, ಜೆ.ಪಿ.ನಗರ 12ನೇ ಕ್ರಾಸ್‌ನ ಕವಿತಾ ಬೇಕರಿ ಸಮೀಪ ಮರಗಳು ಉರುಳಿ ಬಿದ್ದವು. ಇಲ್ಲೆಲ್ಲ ಪಾಲಿಕೆಯ ರಕ್ಷಣಾ ತಂಡ ಅಭಯ್‌-2 ಮರ ತೆರವು ಕಾರ್ಯಾಚರಣೆ ನಡೆಸಿತು.

50ಕ್ಕೂ ಅಧಿಕ ವಿದ್ಯುತ್ ಕಂಬಗಳು ಧರೆಗೆ

ಬಿರುಗಾಳಿಗೆ ಸಿಲುಕಿ ಜಿಲ್ಲೆಯಲ್ಲಿ ಒಟ್ಟು 50ಕ್ಕೂ ಅಧಿಕ ವಿದ್ಯುತ್ ಕಂಬಗಳು ಧರೆಗುರುಳಿವೆ. ಶ್ರೀರಂಗಪಟ್ಟಣ, ಮೈಸೂರು ಗಡಿ ಭಾಗದಲ್ಲೇ 32 ಕಂಬಗಳು ಮುರಿದಿವೆ. ವಿದ್ಯುತ್ ಪರಿವರ್ತಕಗಳು ಕೆಟ್ಟು ಹೋಗಿದ್ದರಿಂದ ಹಲವು ಭಾಗಗಳು ರಾತ್ರಿ ಇಡೀ ಕತ್ತಲಿನಲ್ಲೇ ಮುಳುಗಿದವು.

ಜಿಲ್ಲೆಯ ಎಚ್.ಡಿ.ಕೋಟೆ ಹಾಗೂ ನಂಜನಗೂಡು ಭಾಗದಲ್ಲಿ 5 ಸೆಂ.ಮೀಗೂ ಹೆಚ್ಚು ಮಳೆ ಸುರಿದಿದೆ. ಇಲ್ಲಿನ ಹಂಚೀಪುರ, ಬಿದರಹಳ್ಳಿ, ಎನ್.ಬೇಗೂರು, ಕುರಿಹುಂಡಿ, ನುಗ್ಗಹಳ್ಳಿ ಭಾಗಗಳಲ್ಲಿ ಬಿರುಸಿನ ಮಳೆಯಾಗಿದೆ. ಉಳಿದಂತೆ, ನಗರದಲ್ಲಿ 2 ಸೆಂ.ಮೀಗೂ ಅಧಿಕ ಮಳೆಯಾಗಿದೆ. ಜಿಲ್ಲೆಯ ಎಲ್ಲ ಭಾಗಗಳಲ್ಲೂ ಸಾಧಾರಣ ಮಳೆಯಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ವರದಕ್ಷಿಣೆ ಹಣ ನೀಡಿಲ್ಲವೆಂದು ಸಂಬಂಧಿಕರಿಂದ ಪತ್ನಿಯ ಮೇಲೆ ಅತ್ಯಾಚಾರ

Sat Apr 30 , 2022
  ಜೈಪುರ: ಪತ್ನಿಯು 1.5 ಲಕ್ಷ ರೂಪಾಯಿ ವರದಕ್ಷಿಣೆ ಕೊಡಲು ವಿಫಲರಾದ ಕಾರಣಕ್ಕೆ ಪತಿಯೇ ಆಕೆಯ ಮೇಲೆ ಸಂಬಂಧಿಕರಿಂದ ಸಾಮೂಹಿಕ ಅತ್ಯಾಚಾರ ನಡೆಸಿದ ಘಟನೆ ರಾಜಸ್ಥಾನದ ಭರತ್‌ಪುರದಲ್ಲಿ ನಡೆದಿದೆ. ಅಲ್ಲದೆ ಸಾಮೂಹಿಕ ಅತ್ಯಾಚಾರದ ವೀಡಿಯೊವನ್ನು ಚಿತ್ರೀಕರಿಸಿದ್ದು, ಅದನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾರೆ. ಲೈಂಗಿಕ ದೌರ್ಜನ್ಯದ ವಿಡಿಯೋವನ್ನು ಯೂಟ್ಯೂಬ್‌ ಗೆ ಅಪ್‌ಲೋಡ್ ಮಾಡುವ ಮೂಲಕ ವರದಕ್ಷಿಣೆ ಹಣವನ್ನು ಪಡೆಯುವುದಾಗಿ ಪತಿ ತನ್ನ ಹೆಂಡತಿಗೆ ಹೇಳಿದ್ದಾನೆ. ಸಂತ್ರಸ್ತ ಮಹಿಳೆಯು ಪತಿ ಮತ್ತು […]

Advertisement

Wordpress Social Share Plugin powered by Ultimatelysocial