ಎಸ್. ಸೀತಾರಾಮ ರಾವ್ ವಿಜ್ಞಾನ, ಗಣಿತ ಮತ್ತು ಸಂಗೀತ ಲೋಕಗಳ ಅಪೂರ್ವ ಸಾಧಕರು.

 

ಎನ್.ಎಸ್. ಸೀತಾರಾಮ ರಾವ್ ವಿಜ್ಞಾನ, ಗಣಿತ ಮತ್ತು ಸಂಗೀತ ಲೋಕಗಳ ಅಪೂರ್ವ ಸಾಧಕರು.
ಸೀತಾರಾಮ ರಾವ್ 1941ರ ಜನವರಿ 21ರಂದು, ಅಂದಿನ ಶಿವಮೊಗ್ಗ ಜಿಲ್ಲೆಯ ಚನ್ನಗಿರಿಯಲ್ಲಿ ಜನಿಸಿದರು. ತಂದೆ ನುಲೇನೂರು ಶಂಕರಪ್ಪ. ತಾಯಿ ಸೀತಮ್ಮ. ಈ ದಂಪತಿಗಳ ಹತ್ತು ಮಕ್ಕಳಲ್ಲಿ ಹತ್ತನೆಯವರೇ ಸೀತಾರಾಮ ರಾವ್. ನೂಲೇನೂರು ಶಂಕರಪ್ಪನವರು ಮಹಾನ್ ವಿದ್ವಾಂಸರಾಗಿ, ವಾಗ್ಗೇಯಕಾರರಾಗಿ ಮತ್ತು ಗಮಕಿಗಳಾಗಿ ನಾಡಿನಲ್ಲಿ ಪ್ರಸಿದ್ಧರಾಗಿದ್ದವರು. ಸೀತಾರಾಮ ರಾವ್ ಅವರ ಅಣ್ಣ ಎನ್. ಎಸ್. ಚಿದಂಬರ ರಾವ್ ಕಥೆಗಾರರಾಗಿ ಪ್ರಸಿದ್ಧರಾಗಿದ್ದವರು.
ತಮ್ಮ ಹನ್ನೆರಡನೆಯ ವಯಸ್ಸಿನಲ್ಲಿಯೇ ತಂದೆಯನ್ನು ಕಳೆದು ಕೊಂಡ ಸೀತಾರಾಮ ರಾವ್ ಬೆಳೆದಿದ್ದು ಅಣ್ಣಂದಿರ ಮತ್ತು ಅಕ್ಕಂದಿರ ಆಶ್ರಯದಲ್ಲಿ. ಸಂಗೀತದತ್ತ ಒಲವು ಅವರಿಗೆ ಬಾಲ್ಯದಿಂದಲೇ ಬಂದಿತ್ತು. ಚಿತ್ರದುರ್ಗದಲ್ಲಿ ಎಸ್.ಎಸ್.ಎಲ್.ಸಿ ಮುಗಿಸಿದ ಅವರು ಹೊಸದುರ್ಗದಲ್ಲಿ ಟಿ.ಸಿ.ಎಚ್ ಪದವಿಯನ್ನು ಪಡೆದರು. ಕುಟಂಬದ ಅನಿವಾರ್ಯತೆಯಿಂದ ಶಿಕ್ಷಣವನ್ನು ಮುಂದುವರೆಸಲಾಗದೆ ಕೆಲಸಕ್ಕೆ ಸೇರ ಬೇಕಾಯಿತು.
ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲ್ಲೋಕಿನ ಕುದರೆಗುಂಡಿ ಮೂಲಕ ತಮ್ಮ ಶಿಕ್ಷಣ ವೃತ್ತಿಯನ್ನು ಆರಂಭಿಸಿದ ಅವರು ಹೊಸ ಕೊಪ್ಪ, ನಾರ್ವೆ, ಕಲ್ಕೆರೆ, ಅಗಳಗುಂಡಿ, ಹರಿಹರಪುರ, ಜಮ್ಮಿಟ್ಟಿಗೆ ಹೀಗೆ ಕೊಪ್ಪ ತಾಲ್ಲೋಕಿನ ವಿವಿಧ ಊರುಗಳಲ್ಲಿ ಸೇವೆ ಸಲ್ಲಿಸಿ ಎಲ್ಲೆಡೆ ತಮ್ಮ ಛಾಪನ್ನು ಮೂಡಿಸಿದರು. ವೃತ್ತಿ ಜೀವನದ ಕೊನೆಯಲ್ಲಿ ಕೆಲವು ವರ್ಷಗಳ ಕಾಲ ದಾವಣಗರೆ ಸಮೀಪದ ಶಾಲೆಗಳಲ್ಲಿ ಸೇವೆ ಸಲ್ಲಿಸಿದ್ದರು.
ಸೀತಾರಾಮ ರಾವ್ ನೇಮಕವಾಗಿದ್ದು ಹಿಂದಿ ಅಧ್ಯಾಪಕರೆಂದು ಆದರೆ ಹೆಸರು ಮಾಡಿದ್ದು ಗಣಿತದ ಅಧ್ಯಾಪಕರಾಗಿ. ಸ್ವ-ಅಧ್ಯಯನದಿಂದಲೇ ಈ ವಿಷಯದಲ್ಲಿ ಪರಿಣತಿ ಸಂಪಾದಿಸಿ ಸಂಶೋಧನೆಯನ್ನು ನಡೆಸಿದರು. ಈ ಕುರಿತು ಪರಿಣಿತ ಲೇಖನಗಳನ್ನು ಬರೆದರು. ಆಗ ವಿಜ್ಞಾನಕ್ಕೆಂದೇ ಮೀಸಲಾದ ಪತ್ರಿಕೆಗಳು ಇರಲಿಲ್ಲ. ವಿಜ್ಞಾನ ಕ್ಷೇತ್ರದ ಬರವಣಿಗೆ ಕೂಡ ವ್ಯಾಪಕವಾಗಿ ಇರಲಿಲ್ಲ. ಈ ಕೊರತೆಯ ನಡುವೆಯೇ ಇವರ ಬರವಣಿಗೆ ಸಾಗಿತು. ತಮ್ಮ ಬರವಣಿಗೆಯ ಮೂಲಕವೇ ವಿಜ್ಞಾನ ಕ್ಷೇತ್ರದಲ್ಲಿ ಬರವಣಿಗೆ ಮಾಡುತ್ತಿದ್ದ ಪ್ರೊ. ಜೆ.ಆರ್.ಲಕ್ಷ್ಮಣ ರಾವ್, ಪ್ರೊ. ಎಂ.ಎ.ಸೇತುರಾವ್, ಪ್ರೊ. ಎಂ.ಎ.ಸವದತ್ತಿ, ಪ್ರೊ. ಜಿ.ಟಿ.ನಾರಾಯಣ ರಾವ್, ಡಾ. ಹಾ.ಮಾ.ನಾಯಕ್, ಡಿ.ಆರ್. ಬಳೂರಗಿ, ಬಿ.ಜಿ.ಎಲ್.ಸ್ವಾಮಿ, ಆಡ್ಯನಡ್ಕ ಕೃ಼ಷ್ಣಭಟ್, ನಾಗಲೋಟಿಮಠ, ಎನ್.ಎಸ್.ಶ್ರೀಗಿರಿ ನಾಥ್, ಶ್ರೀಮತಿ ಹರಿ ಪ್ರಸಾದ್ ಮೊದಲಾದವರ ನಿಕಟ ಒಡನಾಟ ಬೆಳೆಸಿಕೊಂಡಿದ್ದರು. ಇವರೆಲ್ಲರ ಶ್ರಮದ ಫಲವಾಗಿ ರೂಪುಗೊಂಡಿದ್ದು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್. ಇದನ್ನು ರೂಪಿಸುವಲ್ಲಿ ಸೀತಾರಾಮ ರಾವ್ ಅವರ ಶ್ರಮವೂ ಇತ್ತು. ನಾಡಿನ ವಿವಿದೆಡೆಗಳಲ್ಲಿ ವಿಜ್ಞಾನ ಸಮ್ಮೇಳನಗಳನ್ನು ರೂಪಿಸುವಲ್ಲಿ ಅವರ ಒತ್ತಾಸೆ ಕೂಡ ಇತ್ತು. ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ನ ‘ಬಾಲ ವಿಜ್ಞಾನ’ಕ್ಕೆ ಸೀತಾರಾಮ ರಾವ್ ಸರಿ ಸುಮಾರು ಎರಡು ದಶಕಗಳ ಕಾಲ ನಿರಂತರವಾಗಿ ಬರೆದರು. ಅವರ ಲೇಖನಗಳು ಬಹಳ ಜನರ ಮೆಚ್ಚುಗೆಯನ್ನು ಪಡೆದಿದ್ದನ್ನು ಗಮನಿಸಿ ಆಡ್ಯನಡ್ಕ ಕೃಷ್ಣಭಟ್ ಅವರ ಒತ್ತಾಯದಿಂದ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ನಿಂದಲೇ ‘ವಿನೋದ ಗಣಿತ’ ಎನ್ನುವ ಪುಸ್ತಕ ಬಂದಿತು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಓಂ ಗಣೇಶ್ ಉಪ್ಪುಂದ ವಿಶ್ವಪ್ರಸಿದ್ಧಿಯ ಪ್ರಖ್ಯಾತ ಜಾದೂ ಕಲಾವಿದ.

Sun Jan 22 , 2023
ಓಂ ಗಣೇಶ್ ಉಪ್ಪುಂದ ವಿಶ್ವಪ್ರಸಿದ್ಧಿಯ ಪ್ರಖ್ಯಾತ ಜಾದೂ ಕಲಾವಿದರು. ಅವರು ಸಿನಿಮಾ ಮತ್ತು ಕಿರುತೆರೆಯಲ್ಲೂ ಗಮನ ಸೆಳೆದಿದ್ದವರು. ಅವರೊಬ್ಬ ಗಾಯಕ ಮತ್ತು ವಾದ್ಯಗಾರ. ಬರಹಗಳಲ್ಲೂ ಸಾಧನೆ ಮಾಡಿರುವ ಅವರು ಹಲವು ಕೃತಿ ಪ್ರಕಟಿಸಿರುವುದಲ್ಲದೆ ಮುನ್ನೂರು ವಾರ ಅಂಕಣ ಬರೆದಿದ್ದಾರೆ. ಜನವರಿ 20, ಓಂ ಗಣೇಶ್ ಉಪ್ಪುಂದ ಅವರ ಜನ್ಮದಿನ. ಹುಟ್ಟಿದ್ದು ಬೆಳೆದದ್ದು ಕುಂದಾಪುರ ತಾಲೂಕಿನ ಉಪ್ಪುಂದದಲ್ಲಿ. ತಾಯಿ ಮನೋರಮಾ. ತಂದೆ ನಾರಾಯಣ ಕಾಮತ್‌. ಓಂ ಗಣೇಶ್ ಅವರು ತಂದೆಯವರಿಗಿದ್ದ ನಾಟಕ […]

Advertisement

Wordpress Social Share Plugin powered by Ultimatelysocial