ಕದಂಬ ಚಕ್ರವರ್ತಿ ಮಯೂರ ವರ್ಮ

ಬನವಾಸಿಯ ಕದಂಬ ಸಾಮ್ರಾಜ್ಯದ ಸಂಸ್ಥಾಪಕ ಮಯೂರ ವರ್ಮಾ… ಕನ್ನಡದ ಮೊದಲ ರಾಜ ಮಯೂರ ವರ್ಮಾ… ಮಯೂರ ಶರ್ಮ ಇದ್ದವನು ಮಯೂರ ವರ್ಮಾ ಆಗಿದ್ದು ರೋಚಕ ಕಥೆ…√
– ಕ್ರಿಶ. ೪೫೦ ರ ತಾಳಗುಂದ ಶಾಸನವು ಮಯೂರ ವರ್ಮನ ಕುಟುಂಬ ಮತ್ತು ಸಾಮ್ರಾಜ್ಯದ ಬಗ್ಗೆ ತಿಳಿಸುತ್ತದೆ…. ಈ ಶಾಸನದ ಪ್ರಕಾರ, ಮಯೂರ ಶರ್ಮ ವೈದಿಕ ಬ್ರಾಹ್ಮಣ ವಿದ್ವಾಂಸ ಮತ್ತು ತಾಳಗುಂದದ (ಈಗಿನ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ) ಸ್ಥಳೀಯ ವ್ಯಕ್ತಿಯಾಗಿದ್ದ.. ಅವನು ಬಂಧುಷೇನನ ಮಗ ಮತ್ತು ವೀರಶರ್ಮರ ಮೊಮ್ಮಗ, ತಾಳಗುಂದದ ಅಗ್ರಹಾರದಲ್ಲಿ ವಿದ್ಯಾರ್ಥಿಯಾಗಿದ್ದನು. ಈ ಕುಟುಂಬದ ಮನೆಯ ಬಳಿ ಬೆಳೆದ ಕದಂಬ ಮರದ ಸಲುವಾಗಿ ಇವರನ್ನು ಕದಂಬರು ಅಂತ ಕರೆಯುತ್ತಾರೆ..
ಕೆಲವು ಇತಿಹಾಸಕಾರರು ಮಯೂರ ಶರ್ಮನನ್ನು ಆರಂಭದಲ್ಲಿ ಪಲ್ಲವರ ಸೈನ್ಯದಲ್ಲಿ ಕಮಾಂಡರ್ ಆಗಿ ನೇಮಿಸಲಾಯಿತು ಎಂದು ಭಾವಿಸುತ್ತಾರೆ, ಏಕೆಂದರೆ ಶಾಸನವು ಸೇನಾನಿಯಂತಹ ಪದಗಳನ್ನು ಬಳಸುತ್ತದೆ ಮತ್ತು ಮಯೂರಶರ್ಮನನ್ನು ಷಡಾನನ ಎಂದು ಕರೆಯುತ್ತದೆ..
ಕೆಲವು ಇತಿಹಾಸಕಾರರು ಮಯೂರ ಒಬ್ಬ ಸ್ಥಳೀಯ ಬನವಾಸಿ ರಾಜನ ಮಗ, ಅವರ ಮೇಲೆ ಪಲ್ಲವರು ಯುದ್ಧಮಾಡಿ ರಾಜ & ರಾಣಿಯನ್ನು ಕೊಂದರು, ಬನವಾಸಿ ಸೇನಾ ಮುಖ್ಯಸ್ಥ ಮಗುವನ್ನು ತಾಳಗುಂದದ ಬ್ರಾಹ್ಮಣ ಭಟ್’ರ ಹತ್ತಿರ ವಿದ್ಯಾಭ್ಯಾಸ ಕಲಿಯಲು ಬಿಟ್ಟು, ಇವರು ಕಣ್ಮರೆಯಾಗಿದ್ದರು. ಮುಂದೆ ದೊಡ್ಡವನಾದ ಬಳಿಕ ತನ್ನ ಹುಟ್ಟಿನ ಬಗ್ಗೆ ಪೂರ್ವ ಇತಿಹಾಸ ತಿಳಿದುಕೊಂಡ ಮಯೂರ ಪಲ್ಲವರ ವಿರುದ್ಧ ಸೇಡು ತೀರಿಸಿಕೊಂಡು, ಅವರನ್ನು ಸೋಲಿಸಿ ಕನ್ನಡ ಕದಂಬ ಸಾಮ್ರಾಜ್ಯ ಕಟ್ಟಿದನು ಅಂತ ತಿಳಿಸುತ್ತಾರೆ..
– ತಾಳಗುಂದದ ಶಾಸನದ ಪ್ರಕಾರ;
ಮಯೂರ ಶರ್ಮನು ತನ್ನ ಗುರು ಮತ್ತು ತಾತ ವೀರಶರ್ಮರೊಂದಿಗೆ ತನ್ನ ಹೆಚ್ಚಿನ ವೇದಾಧ್ಯಯನವನ್ನು ಮುಂದುವರಿಸಲು ಪಲ್ಲವರ ರಾಜಧಾನಿ ಕಂಚಿಗೆ ಹೋದನು.. ಆ ಸಮಯದಲ್ಲಿ ಕಂಚಿಯು ಪ್ರಮುಖ ಕಲಿಕೆಯ ಕೇಂದ್ರ ಆಗಿತ್ತು.. ಅಲ್ಲಿ ಒಂದಿನ ವೇದಾದ್ಯಯನ ಮಾಡುವ ಸಮಯದಲ್ಲಿ ಪಲ್ಲವರ ಕುದುರೆ ಸವಾರಿ ಕಾವಲುಗಾರನಿಂದ ಅವಮಾನಕ್ಕೊಳಗಾದ ಮಯೂರ ಶರ್ಮನು ಕೋಪದಿಂದ ಹೋಗಿ ಪಲ್ಲವರ ರಾಜನ ಬಳಿ ಹೇಳಿಕೊಂಡನು, ಅಲ್ಲಿ ಯಾವದೇ ನ್ಯಾಯ ಸಿಗದ ಕಾರಣದಿಂದ ಕೋಪಗೊಂಡ ಮಯೂರ ಶರ್ಮ ತನ್ನ ಬ್ರಾಹ್ಮಣ ಶಿಕ್ಷಣವನ್ನು ತ್ಯಜಿಸಿದನು ಮತ್ತು ತನ್ನ ಅವಮಾನದ ಸೇಡು ತೀರಿಸಿಕೊಳ್ಳಲು ಕತ್ತಿಯನ್ನು ತೆಗೆದುಕೊಂಡನು, ಕತ್ತಿ ವರಸೆ, ಕುದುರೆ ಸವಾರಿ, ಹೀಗೆ ಕ್ಷತ್ರಿಯ ವಿದ್ಯಾಭ್ಯಾಸ ಕಲಿತನು ಎಂದು ಈ ಶಾಸನವು ಈ ಘಟನೆಯನ್ನು ಸ್ಪಷ್ಟವಾಗಿ ಹೀಗೆ ವಿವರಿಸುತ್ತದೆ:
[ಶಾಸನದ ಸಾರಾಂಶ :-
ಕುಶದ ಹುಲ್ಲು, ಇಂಧನ ಮತ್ತು ಕಲ್ಲುಗಳು, ಲೋಟ, ಕರಗಿದ ಬೆಣ್ಣೆ ಮತ್ತು ನೈವೇದ್ಯ ಪಾತ್ರೆಗಳನ್ನು ಹಿಡಿಯುವಲ್ಲಿ ಕೈಯು ದಕ್ಷತೆಯಿಂದ ಉರಿಯುತ್ತಿರುವ ಕತ್ತಿಯನ್ನು ಬಿಚ್ಚಿ, ಭೂಮಿಯನ್ನು ವಶಪಡಿಸಿಕೊಳ್ಳಲು ಉತ್ಸುಕವಾಗಿದೆ]….
ಮಯೂರ ಶರ್ಮ ತನ್ನ ಗುರು ವೀರಶರ್ಮರ ಆಶೀರ್ವಾದ ಪಡೆದು ಅಲ್ಲಿನ ತರಬೇತುದಾರ ಮುಖಂಡನ ಹತ್ತಿರ ಸಕಲ ಕ್ಷತ್ರಿಯ ವಿದ್ಯಾಪಾರಂಗತನಾದ.. ಇತರ ವಿದ್ವಾಂಸರು ಮಯೂರ ಶರ್ಮನ ದಂಗೆಯನ್ನು ನೋಡಿದರು, ಈತನ ಕ್ಷತ್ರಿಯ ಕಲಿಕೆಯನ್ನು ನೋಡಿ ಸಹಿಸದ ಪಲ್ಲವ ರಾಜ ಈತನನ್ನು ಬಂಧಿಸುವಂತೆ ಆಜ್ಞೆ ಹೊರಡಿಸುತ್ತಾನೆ… ಅಲ್ಲಿಂದ ತಪ್ಪಿಸಿಕೊಂಡು ಬಂದು ಶ್ರೀಶೈಲಂ ತಲುಪುತ್ತಾನೆ… ಅಲ್ಲಿ ಬುಡಕಟ್ಟು ಜನಾಂಗದ ಸಹಾಯದಿಂದ ತನ್ನ ಸೈನ್ಯವನ್ನು ಸಜ್ಜುಗೊಳಿಸುತ್ತಿರುತ್ತಾನೆ…. ಅಷ್ಟರಲ್ಲಿ ಉತ್ತರ ಭಾರತದ ರಾಜ ಸಮುದ್ರಗುಪ್ತನು ದಕ್ಷಿಣ ಭಾರತದ ಮೇಲೆ ಆಕ್ರಮಣ ಮಾಡಿದ್ದನು, ಸಮುದ್ರಗುಪ್ತನು ಪಲ್ಲವ ರಾಜ ವಿಷ್ಣುಗೋಪನ ಮೇಲೆ ಯುದ್ಧಮಾಡಿ ಸೋಲಿಸಿದ್ದನು.. ಇಬ್ಬರ ಮಧ್ಯೆ ಆಂತರಿಕ ಕಲಹ ಶುರುವಾಗಿತ್ತು…. ಅಷ್ಟರಲ್ಲಿ ಮಯೂರ ಶರ್ಮನು ತನ್ನ ಸೈನ್ಯದೊಂದಿಗೆ ಮೊದಲು ಶ್ರೀಪರ್ವತದ ಕಾಡುಗಳಲ್ಲಿನ ಜನರನ್ನು ಒಂದುಗೂಡಿಸಿ ಗುರು ವೀರಶರ್ಮರ ಆಶೀರ್ವಾದ ಪಡೆದು ತನ್ನ ಸೈನ್ಯವನ್ನು ಸಜ್ಜುಗೊಳಿಸಿ ಆಂಧ್ರಪ್ರದೇಶದ ಶ್ರೀಶೈಲಂನ ಪಲ್ಲವರ ಅಂತರ ಪಾಲರನ್ನು ಸೋಲಿಸಿ ಕೋಲಾರದ ಬಣಗಳನ್ನು ವಶಪಡಿಸಿಕೊಂಡರು.. ಮುಂದೆ ಸ್ಕಂದವರ್ಮನ ಸೈನ್ಯವನ್ನು ಧೂಳಿಪಟ ಮಾಡಿದ ಮಯೂರ ವರ್ಮ ಆತನನ್ನು ಗೆದ್ದು ತನ್ನ ಶಕ್ತಿ ಸಾಮರ್ಥ್ಯ ಏನೂ ಅನ್ನೋದನ್ನು ಸಾಬೀತು ಮಾಡಿದನು…. ಹೀಗೆ ಮಯೂರನ ವಿಜಯಯಾತ್ರೆ ಅಮರ ಸಾಗರದಿಂದ ಮಲಪ್ರಭಾ ನದಿ ವರೆಗಿನ ಅನೇಕ ಪ್ರದೇಶಗಳನ್ನು ಗೆದ್ದು ನಂತರ ತಾನೇ ಸಾರ್ವಭೌಮ ಎಂದು ಗುರುತಿಸಿಕೊಂಡು ಸ್ವಾತಂತ್ರವಾಗಿ ಕದಂಬ ಸಾಮ್ರಾಜ್ಯ ಸ್ಥಾಪಿಸಿದನು.. ಈತನಿಗೆ ಕನ್ನಡದ ಮೊದಲ ದೊರೆ ಎಂಬ ಹೆಗ್ಗಳಿಕೆ ಕೂಡ ಇದೆ…
ಮಯೂರಶರ್ಮನು ಬನವಾಸಿಯನ್ನು ತನ್ನ ರಾಜಧಾನಿಯಾಗಿಟ್ಟುಕೊಂಡು ರಾಜ್ಯವನ್ನು ಪುನರ್ ನಿರ್ಮಾಣ ಮಾಡಿದನು.. ಇತರ ಯುದ್ಧಗಳಲ್ಲಿ ತ್ರೈಕೂಟರು, ಅಭಿರುಗಳು, ಸೇಂದ್ರಕರು, ಪಲ್ಲವರು, ಪರಿಯಾತ್ರಕರು, ಶಾಕಸ್ಥಾನ, ಮೌಖರಿಗಳು ಮತ್ತು ಪುನ್ನಾಟರನ್ನು ಸೋಲಿಸಿ ತನ್ನದೆಯಾದ ಕನ್ನಡ ಸಾಮ್ರಾಜ್ಯ ಸ್ಥಾಪಿಸಿದ ಅಂತ ತಿಳಿದುಬಂದಿದೆ.. ಅವನ ಯಶಸ್ಸನ್ನು ಆಚರಿಸಲು ಮಯೂರ ಶರ್ಮನು ಅನೇಕ ಕುದುರೆ ಯಜ್ಞಗಳನ್ನು ಮಾಡಿದನು ಮತ್ತು ತಾಳಗುಂದದ ಬ್ರಾಹ್ಮಣರಿಗೆ ೧೪೪ ಗ್ರಾಮಗಳನ್ನು ದಾನವಾಗಿ ನೀಡಿದನು ಅಂತಾ ತಿಳಿಸುತ್ತದೆ…

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

CRICKET:BCCI ಎಲ್ಲಾ ಸ್ವರೂಪಗಳಿಗೆ ರೋಹಿತ್ ಅವರನ್ನು ನೇಮಿಸುತ್ತದೆ!

Mon Feb 21 , 2022
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಈ ದೇಶದ ಪ್ರತಿಯೊಂದು ಭಾಗದಲ್ಲೂ ವಾಸ್ತವಿಕವಾಗಿ ಒಂದು ಧರ್ಮವಾಗಿರುವ ಆಟದ ವಿಧಾನದಲ್ಲಿ ಸ್ಕಿಜೋಫ್ರೇನಿಕ್ ಅನ್ನು ತೋರುತ್ತಿದೆ. ಕೆಲವು ತಿಂಗಳುಗಳ ಹಿಂದೆ ವೈಟ್-ಬಾಲ್ ಕ್ರಿಕೆಟ್ ಮತ್ತು ಟೆಸ್ಟ್ ಪಂದ್ಯಗಳಿಗೆ ಪ್ರತ್ಯೇಕ ನಾಯಕರನ್ನು ಹೊಂದಲು ನಿರ್ಧರಿಸಿದಾಗ, ಮೂಲ ವ್ಯವಸ್ಥೆಯನ್ನು ಪುನಃಸ್ಥಾಪಿಸಲು ದೇಹವು ಶನಿವಾರದಂದು ವೋಲ್ಟ್-ಫೇಸ್ ಮಾಡಿತು, ಇದು ಸ್ವಾಶ್‌ಬಕ್ಲಿಂಗ್ ಆರಂಭಿಕ ಬ್ಯಾಟ್ಸ್‌ಮನ್, ರೋಹಿತ್ ಶರ್ಮಾ ಎಲ್ಲಾ ಸ್ವರೂಪಗಳಿಗೆ ಕ್ಯಾಪ್ಟನ್ ಆಗಿರಬೇಕು ಎಂದು ಸೂಚಿಸುತ್ತದೆ. . ಮುಂಬರುವ […]

Advertisement

Wordpress Social Share Plugin powered by Ultimatelysocial