ನಾಡಪ್ರಭು ಕೆಂಪೇಗೌಡ ಮತ್ತು ಸಂವಿಧಾನ ಶಿಲ್ಪಿ ಅಂಬೇಡ್ಕರ್ ಪ್ರತಿಮೆಗಳನ್ನು ಲೋಕಾರ್ಪಣೆ …

ರಾಮನಗರ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಸರಕಾರ ಸಂಕಲ್ಪ ಮಾಡಿದೆ ಇದರ ಅಂಗವಾಗಿ ಸೋಮವಾರ ಮುಖ್ಯಮಂತ್ರಿ ಬೊಮ್ಮಾಯಿ ಅವರು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ನಾಡಪ್ರಭು ಕೆಂಪೇಗೌಡ ಮತ್ತು ಸಂವಿಧಾನ ಶಿಲ್ಪಿ ಅಂಬೇಡ್ಕರ್ ಪ್ರತಿಮೆಗಳನ್ನು ಲೋಕಾರ್ಪಣೆ ಮಾಡಲಿದ್ದಾರೆ  ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಸಚಿವ ಬಸವರಾಜ ಭೈರತಿ ಕೂಡ ಪಾಲ್ಗೊಳ್ಳಲಿದ್ದಾರೆ ಎಂದು ಅಶ್ವತ್ಥನಾರಾಯಣ ತಿಳಿಸಿದರು ರಾಮನಗರ ಮತ್ತು ಮಾಗಡಿ ತಾಲ್ಲೂಕಿನ ಚಿಕ್ಕಕಲ್ಯ ಗ್ರಾಮದಲ್ಲಿ ಪ್ರಧಾನ ಕಾರ್ಯಕ್ರಮಗಳು ನಡೆಯಲಿದ್ದು ಮುಖ್ಯಮಂತ್ರಿಗಳು ಹಲವು ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ  ಜೊತೆಗೆ ಹತ್ತಾರು ಮಹತ್ತ್ವದ ಯೋಜನೆಗಳಿಗೆ ಶಂಕುಸ್ಥಾಪನೆಯನ್ನೂ ನೆರವೇರಿಸಲಿದ್ದಾರೆ ಈ ಕಾಮಗಾರಿಗಳನ್ನೆಲ್ಲ ತ್ವರಿತವಾಗಿ ಮುಗಿಸಲಾಗುವುದು ಎಂದು ಅವರು ಹೇಳಿದರುಈ ಕಾರ್ಯಕ್ರಮಗಳಲ್ಲದೆ ಮುಖ್ಯಮಂತ್ರಿ ಬೊಮ್ಮಾಯಿ ಸಚಿವ ಬಸವರಾಜ ಭೈರತಿ ಮತ್ತು ತಾವು ಮಾಗಡಿ ತಾಲ್ಲೂಕಿನ ಕೆಂಪಾಪುರದಲ್ಲಿರುವ ಕೆಂಪೇಗೌಡರ ಸಮಾಧಿ ಸ್ಥಳಕ್ಕೂ ಭೇಟಿ ನೀಡಿ  ಗೌರವ ಸಲ್ಲಿಸಲಿದ್ದೇವೆ ಎಂದು ಅವರು ನುಡಿದರುಅಶ್ವತ್ಥನಾರಾಯಣ ಮೇಕೆದಾಟು ಯೋಜನೆ ಜಾರಿ ಶತಸ್ಸಿದ್ಧ ಎಂದು ಹೇಳಿದ್ದಾರೆ ಕೇಂದ್ರ ಸಚಿವರೊಂದಿಗೆ ಐದು ಬಾರಿ ಭೇಟಿಮಾಡಿ   ಎನ್.ಜಿ.ಟಿ.ತಡೆಯಾಜ್ಞೆ ತೆರವು ಮಾಡಿ ಎಂದುಹೇಳಿದ್ದಾರೆಮಾಗಡಿ ಚಿಕ್ಕಕಲ್ಯ ರಾಮನಗರ ಜಿಲ್ಲೆಯೂ ಸೇರಿದಂತೆ ಬೆಂಗಳೂರು ಮಹಾನಗರಕ್ಕೂ ಉಪಯುಕ್ತವಾಗಲಿರುವ ಮೇಕೆದಾಟು ಕುಡಿಯುವ ನೀರಿನ ಯೋಜನೆಯನ್ನು ರಾಜ್ಯ ಸರಕಾರವು ನೂರಕ್ಕೆ ನೂರರಷ್ಟು ಜಾರಿಗೆ ತರಲಿದೆ ಇದಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಈಗಾಗಲೇ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೆಖಾವತ್ ಅವರನ್ನು ಐದು ಬಾರಿ ಭೇಟಿಯಾಗಿ ಚರ್ಚಿಸಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಉನ್ನತ ಶಿಕ್ಷಣ ಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದ್ದಾರೆಮುಖ್ಯಮಂತ್ರಿ ಬೊಮ್ಮಾಯಿ ಸೋಮವಾರ ಜಿಲ್ಲೆಗೆ ಆಗಮಿಸಿ ನಾನಾ ಕಾರ್ಯಕ್ರಮಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸುತ್ತಿರುವ ಹಿನ್ನೆಲೆಯಲ್ಲಿ ಸಿದ್ಧತೆಗಳ ಪರಿಶೀಲನೆಗೆ ಭಾನುವಾರದಂದು ಅವರು ಇಲ್ಲಿಗೆ ಭೇಟಿ ನೀಡಿ ಪರಿಶೀಲಿಸಿದರು ಈ ಸಂದರ್ಭದಲ್ಲಿ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಅವರು ಮೇಕೆದಾಟು ಯೋಜನೆಯು ಕುಡಿಯುವ ನೀರಿನ ಪೂರೈಕೆ ಉದ್ದೇಶದ್ದಾಗಿದೆ  ಈ ಯೋಜನೆಗೆ ಸಂಬಂಧಿಸಿದಂತೆ ಇದ್ದ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣದ ಎನ್.ಜಿ.ಟಿ ತಡೆಯಾಜ್ಞೆಯನ್ನು ಈಗಾಗಲೇ ತೆರವುಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ  ಇದು ಕಾವೇರಿ ನೀರಿನಲ್ಲಿ ರಾಜ್ಯದ ಪಾಲನ್ನು ಸದ್ಬಳಕೆ ಮಾಡಿಕೊಳ್ಳುವಂತಹ ಯೋಜನೆಯಾಗಿದೆ ಎಂದು ಅವರು ಹೇಳಿದರುಮೇಕೆದಾಟು ಯೋಜನೆಗೆ ಯಡಿಯೂರಪ್ಪನವರೇ ಚಾಲನೆ ನೀಡಿದ್ದರು ಈಗ ಬೊಮ್ಮಾಯಿಯವರು ಕೂಡ ಇದಕ್ಕೆ ಆದ್ಯ ಗಮನ ಕೊಟ್ಟಿದ್ದಾರೆ ಆದ್ದರಿಂದ ಯೋಜನೆಯ ಜಾರಿಗೆ ಒತ್ತಾಯಿಸಿ ಕಾಂಗ್ರೆಸ್ ಪಕ್ಷವು ನಡೆಸಲು ಉದ್ದೇಶಿಸಿರುವ ಪಾದಯಾತ್ರೆಯನ್ನು ಕೈಬಿಡಬೇಕು ಅದರಲ್ಲೂ ಕೊರೋನಾ ಪ್ರಕರಣಗಳು ಪುನಃ ಹೆಚ್ಚುತ್ತಿರುವ ಸಂದರ್ಭದಲ್ಲಿ ಇಂತಹ ಕಾರ್ಯಕ್ರಮಗಳು ಅನಗತ್ಯ ಎಂದು ಅವರು ನುಡಿದರುಮೇಕೆದಾಟು ಯೋಜನೆ ಸಂಬಂಧ ಸರಕಾರದ ನಿಲುವನ್ನು ಈಗಾಗಲೇ ಸದನದಲ್ಲಿ ಹಲವು ಬಾರಿ ಸ್ಪಷ್ಟಪಡಿಸಲಾಗಿದೆ ಯೋಜನೆಯ ಜಾರಿಗೆ ಸರ್ಕಾರ ನೂರಕ್ಕೆ ನೂರರಷ್ಟು ಬದ್ಧವಾಗಿದೆ ಈ ಬಗ್ಗೆ ಯಾರಿಗೂ ಅನುಮಾನ ಬೇಡ ಎಂದು ಅವರು ಸ್ಪಷ್ಟ ಪಡಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

Zomato, Swiggy ಆರ್ಡರ್‌ಗಳು ಜನವರಿ 1, 2022 ರಿಂದ ದುಬಾರಿಯಾಗಬಹುದು:

Mon Jan 3 , 2022
Zomato ಮತ್ತು Swiggy ನಂತಹ ಜನಪ್ರಿಯ ಆನ್‌ಲೈನ್ ಆಹಾರ ವಿತರಣಾ ಸೇವೆಗಳು ಯಾವುದೇ ಸಮಯದಲ್ಲಿ ಪ್ರತಿ ಆರ್ಡರ್‌ಗೆ ಹೆಚ್ಚುವರಿ ಶುಲ್ಕ ವಿಧಿಸಲು ಪ್ರಾರಂಭಿಸಬಹುದು. ಜನವರಿ 1, 2022 ರಿಂದ, ಈ ಪ್ಲಾಟ್‌ಫಾರ್ಮ್‌ಗಳು ಸರಕು ಮತ್ತು ಸೇವಾ ತೆರಿಗೆಯ (GST) ಶೇಕಡಾ ಐದರಷ್ಟು ಪಾವತಿಸಬೇಕಾಗುತ್ತದೆ. Swiggy ಮತ್ತು Zomato ತಮ್ಮ ನಷ್ಟವನ್ನು ಕಡಿಮೆ ಮಾಡಲು ಸೇವಾ ಬೆಲೆಗಳನ್ನು ಹೆಚ್ಚಿಸಬಹುದು ಎಂದು ಇದು ಸೂಚಿಸುತ್ತದೆ. ಹೊಸ ಆದೇಶದ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲವೂ […]

Advertisement

Wordpress Social Share Plugin powered by Ultimatelysocial